‘ಎ’ ರಕ್ತ ಗುಂಪಿನವರಿಗೆ ಕೊರೋನಾ ಸಾಧ್ಯತೆ ಅಧಿಕ!, ಯಾರಿಗೆ ಕಡಿಮೆ?

By Kannadaprabha NewsFirst Published Jun 6, 2020, 9:17 AM IST
Highlights

‘ಎ’ ರಕ್ತ ಗುಂಪಿನವರಿಗೆ ಕೊರೋನಾ ಸಾಧ್ಯತೆ ಅಧಿಕ!| ‘ಒ’ ಗುಂಪಿನವರಿಗೆ ಕಡಿಮೆ: ಅಧ್ಯಯನ

ನವದೆಹಲಿ(ಜೂ.06): ಉಸಿರಾಟ ತೊಂದರೆ ಉಳ್ಳವರು, ಮಧುಮೇಹಿಗಳು, ವೃದ್ಧರು ಮತ್ತು ಮಕ್ಕಳಿಗೆ ಕೊರೋನಾ ಸೋಂಕು ತಗುಲುವ ಅಪಾಯ ಹೆಚ್ಚಿದೆ ಎಂದು ಸಂಶೋಧನೆಗಳು ಎಚ್ಚರಿಸಿದ್ದವು. ಇದೀಗ ‘ಎ’ ರಕ್ತದ ಗುಂಪು ಹೊಂದಿರುವವರಿಗೂ ಕೊರೋನಾ ತಗುಲುವ ಅಪಾಯ ಹೆಚ್ಚಿದೆ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ. ಇದು ‘ಎ’ ರಕ್ತದ ಗುಂಪಿನವರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಜರ್ಮನಿ ಮತ್ತು ನಾರ್ವೆಯ ಸಂಶೋಧಕರು ಕೈಗೊಂಡ ಅಧ್ಯಯನದ ಪ್ರಕಾರ, ‘ಎ’ ರಕ್ತದ ಗುಂಪು ಹೊಂದಿರುವವರಿಗೆ ಕೊರೋನಾ ಸೋಂಕು ತಗುಲುವ ಅಪಾಯ ಶೇ.50ರಷ್ಟುಹೆಚ್ಚಿದೆ ಮತ್ತು ‘ಒ’ ರಕ್ತದ ಗುಂಪಿನವರಿಗೆ ಈ ಅಪಾಯ ಶೇ.50ರಷ್ಟುಕಡಿಮೆ ಇದೆ ಎಂಬ ಫಲಿತಾಂಶ ವ್ಯಕ್ತವಾಗಿದೆ.

ಮಿಡತೆ ಬಗ್ಗೆ ಟ್ಟೀಟ್‌ ಮಾಡಿದ ನಟಿ; ಕೆಲವೇ ನಿಮಿಷಗಳಲ್ಲಿ ಅಕೌಂಟ್‌ ಡಿಯಾಕ್ಟಿವೇಟ್‌ ?

ಇಟಲಿ ಮತ್ತು ಸ್ಪೇನ್‌ನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1,610 ಕೊರೋನಾ ರೋಗಿಗಳ ರಕ್ತ ಮಾದರಿ ಮತ್ತು ಕೊರೋನಾ ಸೋಂಕು ಇಲ್ಲದ 2205 ಜನರ ರಕ್ತ ಮಾದರಿಯನ್ನು ಪಡೆದು ಹೋಲಿಸಿ ಈ ಸಂಶೋಧನೆ ನಡೆಸಲಾಗಿದೆ.

‘ಈ ಪ್ರಕರಣಗಳ ಪೈಕಿ ‘ಎ’ ಗುಂಪಿನ ರಕ್ತ ಹೊಂದಿರುವ ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಅಥವಾ ವೆಂಟಿಲೇಟರ್‌ ಚಿಕಿತ್ಸೆ ಅಗತ್ಯವಿರುವುದು ತಿಳಿದುಬಂದಿದೆ. ಆದರೆ ಇದಕ್ಕೆ ನಿರ್ದಿಷ್ಟವಾಗಿ ರಕ್ತದ ಗುಂಪು ಕಾರಣವೇ ಅಥವಾ ಬೇರೆ ಅಂಶಗಳು ಅಂದರೆ ಆನುವಂಶಿಕ ಕಾರಣಗಳು ಇರಬಹುದೇ ಎಂಬುದು ಸ್ಪಷ್ಟವಾಗಿಲ್ಲ’ ಎಂದು ಸಂಶೋಧಕರು ತಿಳಿಸಿದ್ದಾರೆ.

click me!