ಗೊತ್ತಿಲ್ಲದೆ ಮಗನನ್ನೇ ಮದುವೆಯಾದ ತಾಯಿ, ಇಬ್ಬರು ಮಕ್ಕಳಾದ ಬಳಿಕ ಸತ್ಯ ಬಯಲು

Published : Aug 16, 2025, 05:12 PM ISTUpdated : Aug 16, 2025, 05:51 PM IST
relationship

ಸಾರಾಂಶ

ತನಗಿಂತ ಕಿರಿಯನ ಜೊತೆ ಪ್ರೀತಿ ಶುರುವಾಗಿದೆ. ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಕೊನೆಗೆ ಮದುವೆಯಾಗಿದೆ. ಎರಡು ಮಕ್ಕಳಾದ ಬಳಿಕ ತಾನು ಮದುವೆಯಾಗಿರುವ ಪತಿ ತನ್ನ ಸ್ವಂತ ಮಗ ಅನ್ನೋ ಸತ್ಯ ಬಯಲಾಗಿದೆ.

ಒಹಿಯೋ(ಆ.16) ಪ್ರೀತಿಗೆ ವಯಸ್ಸಿನ ಅಂತರವಿಲ್ಲ. ಹಲವು ಪ್ರೀತಿಗಳು ವಯಸ್ಸಿನ ಅಜ ಗಜಾಂತರ ವ್ಯತ್ಯಾಸಗಳಿದ್ದರೂ ಅನ್ಯೋನ್ಯ ಸಂಸಾರ ನಡೆಸಿದ ಹಲವು ಉದಾಹರಣೆಗಳಿವೆ. ಹೀಗೆ ತನಗಿಂತ ವಯಸ್ಸಿನಲ್ಲಿ ಕಿರಿಯನ ಜೊತೆ ಪ್ರೀತಿ ಶುರುವಾಗಿದೆ. ಹೇಗೋ ಪರಿಚಯವಾಗಿ ನಂಬರ್ ಬದಲಾಯಿಸಿಕೊಂಡಿದ್ದಾರೆ. ಚಾಟಿಂಗ್ ಶುರುವಾಗಿದೆ. ಈ ಚಾಟಿಂಗ್ ಕೊನೆಗೆ ಪ್ರೀತಿಯಾಗಿ ಮದುವೆಯ ಅರ್ಥ ಪಡೆದುಕೊಂಡಿದೆ. ಇಬ್ಬರು ಮದುವೆಯಾಗಿದ್ದಾರೆ. ವರ್ಷಗಳು ಉರುಳಿದೆ. ಈ ದಂಪತಿಗೆ ಎರಡು ಮಕ್ಕಳಾಗಿದೆ. ಸಂಸಾರದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗಿದೆ. ಇದರ ನಡುವೆ ತಾನು ಮದುವೆಯಾಗಿರುವುದು ತನ್ನ ಸ್ವಂತ ಮಗನನ್ನೇ ಅನ್ನೋ ಸ್ಫೋಟಕ ಸತ್ಯ ಬಯಲಾದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದೆ.

ಮಕ್ಕಳ ಭವಿಷ್ಯ ಪ್ಲಾನ್ ರೂಪಿಸುವಾಗ ಅಸಲಿ ಕತೆ ಬಯಲು

ಈ ದಂಪತಿಗೆ ಇಬ್ಬರು ಮಕ್ಕಳಾದ ಬಳಿಕ ಮಕ್ಕಳ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಬರಬಾರದು ಅನ್ನೋ ಕಾರಣ ದಂಪತಿ ಕೆಲ ಹೂಡಿಕೆ, ಮಕ್ಕಳ ಮುಂದಿನ ದಿನಗಳಲ್ಲಿ ಯಾರ ಜೊತೆಗಿರಬೇಕು ಅನ್ನೋ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಬಳಿಕ ಕಾನೂನು ಮಾನ್ಯತೆಗಾಗಿ ಡಿಎನ್‌ಎ ಪರೀಕ್ಷೆ ಮುಂದಾಗಿದ್ದಾರೆ. ದಂಪತಿ ಹಾಗೂ ಮಕ್ಕಳ ಡಿಎನ್ಎ ಪರೀಕ್ಷೆ ವೇಳೆ ತಾನು ಮದುವೆಯಾಗಿರುವ ಗಂಡ, ತನ್ನ ಸ್ವಂತ ಮಗ ಅನ್ನೋ ಅಸಲಿ ವಿಚಾರ ಬಯಲಾಗಿದೆ.

ಏನಿದು ಘಟನೆ, ತಾಯಿ ತನ್ನ ಮಗನನ್ನೇ ಮದುವೆಯಾಗಿದ್ದು ಹೇಗೆ?

ಈ ಮಹಿಳೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದಾಳೆ. ಆದರೆ ಮದುವೆಯಾದ ಕೆಲ ತಿಂಗಳಲ್ಲಿ ಪತಿಯಿಂದ ದೂರವಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಪತಿ ದೂರವಾದ ಕೆಲವೇ ತಿಂಗಳಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಒಂದೆಡೆ ಪತಿ ಇಲ್ಲ, ಮತ್ತೊಂದೆಡೆ ಆದಾಯವೂ ಇಲ್ಲ. ಹೀಗಾಗಿ ಮಗುವಿನ ಆರೈಕೆ, ಬೆಳವಣಿಗೆ, ಶಿಕ್ಷಣ ಇವೆಲ್ಲಾ ಅಸಾಧ್ಯ ಎಂದು ಮಹಿಳೆ ತನ್ನ ಮಗುವನ್ನು ದತ್ತು ಪಡೆದುಕೊಳ್ಳುವವರಿಗೆ ನೀಡಿದ್ದಾರೆ. ಮಗು ನೀಡಿದ ಬಳಿಕವೂ ಮಹಿಳೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತೆ ಆಗಿತ್ತು. ಹೀಗಾಗಿ ತಾನು ಯಾರಿಗೆ ಮಗು ಕೊಟ್ಟಿದ್ದೇನೆ, ಮಗು ಎಲ್ಲಿದೆ, ಅನ್ನೋ ಯಾವ ಮಾಹಿತಿಯನ್ನು ಪಡೆದುಕೊಳ್ಳುವ, ಕರೆ ಮಾಡಿ ಮಾತನಾಡುವ ಪ್ರಯತ್ನಕ್ಕೂ ಈ ಮಹಿಳ ಹೋಗಿಲ್ಲ.

ಪರಿಸ್ಥಿತಿ ಸುಧಾರಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಮಹಿಳೆ

ಹಲವು ವರ್ಷಗಳ ಕಾಲ ಆರ್ಥಿಕ ಸಂಕಷ್ಟ ಹೀಗೆ ಮುಂದುವರಿದಿದೆ. ಬಳಿಕ ಸುಧಾರಣೆ ಕಂಡಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಈಕೆ ಒಂದೊಂದೆ ವಸ್ತುಗಳನ್ನು ಖರೀದಿಸಿದ್ದಾಳೆ. ಈ ಪೈಕಿ ಸ್ಮಾರ್ಟ್‌ಫೋನ್ ಖರೀದಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾಳೆ. ಹೀಗೆ ಸೋಶಿಯಲ್ ಮೀಡಿಯಾ, ತನ್ನ ಕೆಲಸದ ನಡುವೆ ಯುವಕನ ಪರಿಚಯವಾಗಿದೆ. ಆತ ಕೂಡ ಈಕೆಯ ಮಾತು, ವಾತ್ಸಲ್ಯಕ್ಕೆ ಮನ ಸೋತಿದ್ದಾನೆ. ಕೊನೆಗ ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಪ್ರೀತಿ ಗಾಢವಾಗಿದೆ. ವಯಸ್ಸಿನ ಅಂತರವಿದ್ದರೂ ಮದುವೆಯಾಗಿದ್ದಾರೆ. ಆದರೆ ತಾನು ಕುಟುಂಬವೊಂದಕ್ಕ ನೀಡಿದ್ದ ತನ್ನದೇ ಮಗ ಈತ ಅನ್ನೋ ಯಾವುದೇ ಸುಳಿವು ಈಕೆಗೆ ಇರಲಿಲ್ಲ. ಅತ್ತ ತನ್ನ ತಾಯಿ ಈಕೆ ಅನ್ನೋ ಅರಿವುದು ಯುವಕನಿಗೂ ಇರಲಿಲ್ಲ.

ಮದುವೆಯಾಗಿದೆ, ಇಬ್ಬರು ಮಕ್ಕಳೂ ಆಗಿದೆ. ಕಾನೂನಾತ್ಮಕ ಕಾರಣದಿಂದ ಡಿಎನ್‌ಎ ಪರೀಕ್ಷೆ ವೇಳೆ ತಾನು ಮದುವೆಯಾಗಿರುವುದು ತನ್ನದೇ ಮಗ ಅನ್ನೋ ಸತ್ಯ ಗೊತ್ತಾಗಿದೆ. ಇದೀಗ ತನ್ನ ಮಗನಿಗೆ ಪತ್ನಿಯಾಗಿದ್ದ, ತಾಯಿ, ತನ್ನ ಮಗನ ಮಗುವಿಗೆ ತಾಯಿಯೂ ಆಗಿದ್ದಾಳೆ. ಚಿತ್ರ ವಿಚಿತ್ರ ಘಟನೆ ಹಲವರನ್ನು ಭಾವುಕರನ್ನಾಗಿಸಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!