ಹಣಕ್ಕಾಗಿ ಅಲ್‌ಖೈದಾ ಮುಖ್ಯಸ್ಥ ಜವಾಹಿರಿಯನ್ನು ಬಲಿಕೊಟ್ಟಿತೇ ಪಾಕ್‌?

Published : Aug 03, 2022, 11:42 AM IST
ಹಣಕ್ಕಾಗಿ ಅಲ್‌ಖೈದಾ ಮುಖ್ಯಸ್ಥ ಜವಾಹಿರಿಯನ್ನು ಬಲಿಕೊಟ್ಟಿತೇ ಪಾಕ್‌?

ಸಾರಾಂಶ

ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರ ಅಲ್‌ಖೈದಾ ಮುಖ್ಯಸ್ಥ ಅಲ್-ಜವಾಹಿರಿ ಹತ್ಯೆಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂಬ ಚರ್ಚೆಗಳು ಕೇಳಿಬರುತ್ತಿದೆ. ಪಾಕಿಸ್ತಾನ ಆರ್ಥಿಕ ಸಂಕಷ್ಟಕದಲ್ಲಿದ್ದು, ಹಣಕ್ಕಾಗಿ ಜವಾಹಿರಿಯನ್ನು ಬಲಿ ಕೊಟ್ಟಿತು ಎಂದು ಹೇಳಲಾಗುತ್ತಿದೆ.

ವಾಷಿಂಗ್ಟನ್‌ (ಆ.3): ವಿಶ್ವದ ಮೋಸ್ಟ್‌ ವಾಂಟೆಡ್‌ ಉಗ್ರ ಅಯ್ಮನ್ ಅಲ್-ಜವಾಹಿರಿ ಹತ್ಯೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಐಎಸ್‌ಐನ 6 ತಿಂಗಳ ಶ್ರಮದ ಜೊತೆಗೆ ಪಾಕಿಸ್ತಾನದ ನೆರವು ಕೂಡಾ ನೆರವಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ್‌ ಐಎಂಎಫ್‌ನಿಂದ ಆರ್ಥಿಕ ನೆರವು ಪಡೆಯಲು ಮತ್ತು ಅಮೆರಿಕ ದೃಷ್ಟಿಯಲ್ಲಿ ಒಳ್ಳೆ ಹುಡುಗನಾಗಲು, ಜವಾಹಿರಿಯನ್ನು ಬಲಿಕೊಟ್ಟಿರಬಹುದು ಎಂದು ಸೇನಾ ತಜ್ಞರು ವಿಶ್ಲೇಷಿಸಿದ್ದಾರೆ. ‘ಲಾಡೆನ್‌ಗೆ ಆಶ್ರಯ ನೀಡಿದ್ದಕ್ಕಾಗಿ ಪಾಕ್‌-ಅಮೆರಿಕ ಸಂಬಂಧ ಹಳಸಿತ್ತು. ಮತ್ತೊಂದೆಡೆ ದೇಶ ತೀರಾ ಗಂಭೀರ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಜವಾಹಿರಿ ಕುರಿತು ರಹಸ್ಯ ಮಾಹಿತಿಗಳನ್ನು ಸ್ವತಃ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳೇ ಅಮೆರಿಕದ ಜೊತೆ ಹಂಚಿಕೊಂಡಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಶನಿವಾರ ಕಾಬೂಲ್‌ನಲ್ಲಿ ಹತ್ಯೆ ನಡೆದ ಸ್ಥಳದಲ್ಲಿ ಅಮೆರಿಕದ ಯಾವುದೇ ಅಧಿಕಾರಿಗಳು ಇಲ್ಲದೇ ಇದ್ದರೂ, ಸತ್ತಿದ್ದು ಸ್ವತಃ ಜವಾಹಿರಿಯೇ ಎಂದು ಖಚಿತಪಡಿಸಿದ್ದು, ಕಾಬೂಲ್‌ನಲ್ಲಿ ಇರುವ ಪಾಕ್‌ನ ಗುಪ್ತಚರ ಮೂಲಗಳು ಎನ್ನಲಾಗುತ್ತಿದೆ. ಇನ್ನೊಂದು ವಾದದ ಅನ್ವಯ, ತಾಲಿಬಾನ್‌ ಸರ್ಕಾರದ ಜೊತೆಗೆ ಅಲ್‌ಖೈದಾ ಮುಖ್ಯಸ್ಥನ ಸಲುಗೆಯನ್ನು ಸಹಿಸದ ಕೆಲ ತಾಲಿಬಾನಿಗಳೇ, ಅಮೆರಿಕಕ್ಕೆ ಜವಾಹಿರಿ ಕುರಿತು ಮಾಹಿತಿ ಕೊಟ್ಟಿರಬಹುದು ಎನ್ನಲಾಗಿದೆ.

200 ಕೋಟಿ ರು. ಬಹುಮಾನ ಘೋಷಣೆ!: ಈ ಹಿಂದೆಯೇ ಜವಾಹಿರಿ  ಸುಳಿವು ಕೊಟ್ವರಿಗೆ ಬರೋಬ್ಬರಿ 200 ಕೋಟಿ ರು. ಬಹುಮಾನ ಘೋಷಿಸಲಾಗಿತ್ತು. ನ್ಯೂಯಾರ್ಕ್ನಲ್ಲಿ ನಡೆದ ಅವಳಿ ವಾಣಿಜ್ಯ ಕಟ್ಟಡಗಳ (WTC) ಮೇಲಿನ ದಾಳಿಯ ರುವಾರಿಯಾಗಿದ್ದ ಈತನನ್ನು ಜಗತ್ತಿನಾದ್ಯಂತ ಇರುವ ಎಲ್ಲಾ ಗುಪ್ತಚರ ಸಂಸ್ಥೆಗಳು ಹುಡುಕಿ ಸೋತಿದ್ದವು. ಸದಾ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಓಡಾಡುತ್ತಿದ್ದ ಜವಾಹಿರಿಯ ಮಾಹಿತಿಯನ್ನು ನೀಡಿದರೆ ಬೃಹತ್‌ ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿತ್ತು.

ಭರ್ಜರಿ 6 ತಿಂಗಳ ರಹಸ್ಯ ಕಾರ್ಯಾಚರಣೆ:  ವಿಶ್ವದ ಮೋಸ್ಟ್‌ ವಾಂಟೆಡ್‌ ಉಗ್ರ ಜವಾಹಿರಿಯನ್ನು ಬಲಿಪಡೆದಿರುವ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಇದಕ್ಕಾಗಿ ಭರ್ಜರಿ 6 ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಮೊದಲು ಪಾಕಿಸ್ತಾನದಲ್ಲಿದ್ದ ಜವಾಹಿರಿ, ಆಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಬರುತ್ತಲೇ, ಅಲ್ಲಿಗೆ ತನ್ನ ವಾಸ್ತವ್ಯ ಬದಲಾಯಿಸಿದ್ದ ಎಂಬ ವಿಷಯ ಅಮೆರಿಕದ ಗಮನಕ್ಕೆ ಬಂದಿತ್ತು. ಬಳಿಕ ಸತತ 3 ತಿಂಗಳ ಕಾರ್ಯಾಚರಣೆ ಬಳಿಕ ಆತ ಕಾಬೂಲ್‌ನಲ್ಲಿ ಶ್ರೀಮಂತರು, ಅಧಿಕಾರಿಗಳೇ ಹೆಚ್ಚಾಗಿ ವಾಸಿಸುವ ಪ್ರದೇಶವೊಂದರ ಮನೆಯಲ್ಲಿ ಆಶ್ರಯ ಪಡೆದಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು. ಏಪ್ರಿಲ್‌ ತಿಂಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಈ ಮಾಹಿತಿ ನೀಡಲಾಯಿತು.

ಮಂಡ್ಯದ ಯುವತಿಯನ್ನು ಹೊಗಳಿದ್ದ ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ಅಮೆರಿಕದಿಂದ ಹತ್ಯೆ

ಯಾವುದೇ ನಾಗರಿಕ ಅಥವಾ ಕುಟುಂಬದ ಸದಸ್ಯರಿಗೆ ತೊಂದರೆಯಾಗದಂತೆ ಜವಾಹರಿ ಹತ್ಯೆ ಮಾಡುವ ಯೋಜನೆಯನ್ನು ಅಮೆರಿಕ ಹೊಂದಿತ್ತು. ಹೀಗಾಗಿ ಆತನ ಸೇಫ್‌ಹೌಸಿನ ರಚನೆ, ವಿನ್ಯಾಸದ ಬಗ್ಗೆ ಮಾಹಿತಿ ಕಲೆಹಾಕಿದರು. ಸತತ 6 ತಿಂಗಳು ಜವಾಹಿರಿ ದಿನಚರಿಯನ್ನು ಅಭ್ಯಾಸ ಮಾಡಿದ ಗುಪ್ತಚರ ಇಲಾಖೆ ಆತ ಬಾಲ್ಕನಿಯಲ್ಲಿ ಕಾಲ ಕಳೆಯುವುದನ್ನು ಗುರುತಿಸಿ ಹತ್ಯೆಗೆ ಸರಿಯಾದ ಸಮಯವನ್ನು ಆಯ್ಕೆ ಮಾಡಿದರು.

21 ವರ್ಷದ ಸೇಡು ತೀರಿಸಿಕೊಂಡ ಅಮೆರಿಕ, ಅಲ್‌ಖೈದಾ ಮುಖ್ಯಸ್ಥ Ayman al-Zawahiri ಹತ್ಯೆ

ಜು.1 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರೊಂದಿಗೆ ಸಿಐಎ ನಿರ್ದೇಶಕ ವಿಲಿಯಂ ಬನ್ಸ್‌ರ್‍ ಸಭೆ ನಡೆಸಿ ಅಲ್‌-ಜವಾಹಿರಿ ಹತ್ಯೆ ಕಾರ್ಯಾಚರಣೆ ನಡೆಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಬಳಿಕ ಜು.25 ರಂದು ಬೈಡೆನ್‌ ಪ್ರಮುಖ ಕ್ಯಾಬಿನೆಟ್‌ ಸದಸ್ಯರೊಂದಿಗೆ ಸಭೆ ನಡೆಸಿ, ನಿಖರವಾದ ಏರ್‌ಸ್ಟೆ್ರೖಕ್‌ಗೆ ಅನುಮತಿ ನೀಡಿದರು. ಅದರಂತೆ ಜು.30 ರಂದು ಜವಾಹಿರಿ ಮುಂಜಾನೆ ಪ್ರಾರ್ಥನೆ ಮುಗಿಸಿ ಬಾಲ್ಕನಿಯಲ್ಲಿ ನಿಂತಾಗ ಹೆಲ್‌ಫೈರ್‌ ಕ್ಷಿಪಣಿ ಬಳಸಿ ಏರ್‌ಸ್ಟೆ್ರೖಕ್‌ ಮೂಲಕ ಹತ್ಯೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ