8 ನಿಮಿಷ ಸಾವಿನ ನಂತರ ಬದುಕಿ ಬಂದ ಮಹಿಳೆ, ಆ ಕ್ಷಣದಲ್ಲಿ ಏನಾಯ್ತು?

Published : Jun 10, 2025, 11:22 AM IST
Death Mystery

ಸಾರಾಂಶ

33 ವರ್ಷದ ಮಹಿಳೆ ಬ್ರಿಯಾನ್ನಾ ಲಾಫರ್ಟಿ 8 ನಿಮಿಷಗಳ ಕಾಲ ಸತ್ತು ಬದುಕಿ ಬಂದಿದ್ದಾರೆ. ಸಾವಿನ ನಂತರದ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಅನುಭವದಿಂದ ಅವರ ಜೀವನದ ದೃಷ್ಟಿಕೋನವೇ ಬದಲಾಗಿದೆ.

ನವದೆಹಲಿ: 33 ವರ್ಷದ ಮಹಿಳೆಯೊಬ್ಬರು 8 ನಿಮಿಷಗಳ ಕಾಲ ಸತ್ತು ಬದುಕಿ ಬಂದಿದ್ದು, ನಿಧನದ ಬಳಿಕ ತಮ್ಮೊಂದಿಗೆ ನಡೆದ ಘಟನೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯನ್ನು ಕೊಲೊರಡೋದ ಬ್ರಿಯಾನ್ನಾ ಲಾಫರ್ಟಿ ಎಂದು ಗುರುತಿಸಲಾಗಿದೆ. ಮಯೋಕ್ಲೋನಸ್ ಡಿಸ್ಟೋನಿಯಾ ಎಂಬ ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಮಹಿಳೆ ಬ್ರಿಯಾನ್ನಾ ಬಳಲುತ್ತಿದ್ದರು. ಬ್ರಿಯಾನ್ನಾ ಸಾವನ್ನು ವೈದ್ಯರು ಖಚಿತಪಡಿಸಿದ್ದರು. ವೈದ್ಯರು ದೃಢಪಡಿಸಿದ 8 ನಿಮಿಷದ ಬಳಿಕ ಬ್ರಿಯಾನ್ನಾ ಬದುಕಿ ಬಂದಿದ್ದಾರೆ. ಇದೀಗ ಮಹಿಳೆ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಹಿಳೆ ಸಂದರ್ಶನದಲ್ಲಿ ಹೇಳಿದ್ದೇನು?

ಇದಕ್ಕಿದ್ದಂತೆ ನನ್ನ ದೇಹದಿಂದ ಬೇರ್ಪಟ್ಟೆ. ಆ ಸಮಯದಲ್ಲಿ ನಾನು ನನ್ನ ದೇಹವನ್ನು ನೋಡಿದೆನಾ ಇಲ್ಲವಾ ಎಂಬುದರ ಬಗ್ಗೆಯೂ ಸಹ ನನಗೆ ಅಷ್ಟಾಗಿ ನೆನಪಿಲ್ಲ. ಆದ್ರೆ ನಾನು ಮೊದಲಿಗಿಂತಲೂ ಹೆಚ್ಚು ಜೀವಂತವಾಗಿದ್ದ ಅನುಭವ ನನ್ನದಾಗಿತ್ತು. ನೀವು ಸಿದ್ದರಾಗಿದ್ದೀರಾ? ಎಂಬ ಧ್ವನಿ ಕೇಳಿಸಿತು. ಇದಾದ ನಂತರ ಸುತ್ತಲೂ ಕತ್ತಲು ಆವರಿಸಿತು ಎಂದು ಬ್ರಿಯಾನ್ನಾ ಹೇಳಿದ್ದಾರೆ.

ಅಂತ್ಯವಿಲ್ಲದ ಜಗತ್ತು ಅದಾಗಿತ್ತು.ಅಲ್ಲಿ ಸಮಯದ ಅಸ್ತಿತ್ವವೇ ಇರಲಿಲ್ಲ ಮತ್ತು ಆ ಸ್ಥಳದ ಗೋಚರತೆ ಸಂಪೂರ್ಣವಾಗಿ ಸ್ಪಷ್ಟವಾಗಿತ್ತು. ಅಲ್ಲಿ ಶಾಂತಿ, ಪ್ರೀತಿ ಮತ್ತು ತಿಳುವಳಿಕೆ ಇತ್ತು. ಅದೊಂದು ದೈಹಿಕ ನೋವಿಗೆ ವ್ಯತಿರಿಕ್ತವಾಗಿ ಒಂದು ಅತೀಂದ್ರಿಯ ಭಾವನೆಯಾಗಿತ್ತು.ಸಂಪೂರ್ಣವಾಗಿ ಮನುಷ್ಯರಂತೆ ಕಾಣದ ಕೆಲವು ಜೀವಿಗಳನ್ನು ನಾನು ನೋಡಿದೆ ಎಂದು ಬ್ರಿಯಾನ್ನಾ ಹೇಳುತ್ತಾರೆ. ಬ್ರಿಯನ್ನಾ ಪ್ರಕಾರ, ಆ ಅನುಭವ ನಮ್ಮ ಮಾನವ ಜೀವನ ಎಷ್ಟಯ ಕ್ಷಣಿಕ ಎಂಬುದನ್ನು ಅರ್ಥೈಸುತ್ತದೆ. ಅಲ್ಲಿಯ ನಮ್ಮ ಆಲೋಚನೆಗಳು ತಕ್ಷಣವೇ ಕಾರ್ಯರೂಪಕ್ಕೆ ಬರುತ್ತವೆ ಮತ್ತು ನಕಾರಾತ್ಮಕತೆಯು ಸಕಾರತ್ಮಕತೆಯಾಗಿ ಬದಲಾಗುತ್ತದೆ ಎಂದು ಬ್ರಿಯಾನ್ನಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಬದಲಾದ ಜೀವನ

ಸಾವಿನ ಅನುಭವದ ನಂತರ ಬ್ರಿಯಾನ್ನಾ ಅವರ ಜೀವನದ ಕುರಿತ ಸಂಪೂರ್ಣ ದೃಷ್ಟಿಕೋನವೇ ಬದಲಾಗಿದೆ. ನನ್ನನ್ನು ಆವರಿಸಿದ್ದ ಭಯ ನನ್ನ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಸಾವಿನ ಭಯವೂ ನನ್ನಲ್ಲಿ ಉಳಿದಿಲ್ಲ. ನನಗೆ ಜೀವನ ಮತ್ತು ಸಾವು ಎರಡರ ಬಗ್ಗೆಯೂ ಆಳವಾದ ಗೌರವವಿದೆ ಎಂದು ಬ್ರಿಯನ್ನಾ ಹೇಳುತ್ತಾರೆ.

ಸಾವಿನಿಂದ ಹಿಂತಿರುಗಿದ ನಂತರ ಮತ್ತೆ ನಡೆಯಲು ಮತ್ತು ಮಾತನಾಡಲು ಕಲಿತ ನಂತರ ಮತ್ತು ತನ್ನ ಪಿಟ್ಯುಟರಿ ಗ್ರಂಥಿಯ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬ್ರಿಯಾನ್ನಾ ಅನೇಕ ದೈಹಿಕ ತೊಂದರೆಗಳನ್ನು ಎದುರಿಸಿದರೂ, ಈಗ ಈ ತೊಂದರೆಗಳನ್ನು ಉದ್ದೇಶಪೂರ್ವಕವೆಂದು ಎಂದು ನಂಬುತ್ತಿದ್ದಾರೆ. "ನನ್ನ ಅನಾರೋಗ್ಯ ಮತ್ತು ದುಃಖಕ್ಕೆ ಒಂದು ಕಾರಣವಿತ್ತು ಎಂಬುದು ಈಗ ಸ್ಪಷ್ಟವಾಗಿದೆ ಎಂದು ಹೇಳುವ ಮೂಲಕ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕೆಂದು ಬ್ರಿಯಾನ್ನಾ ಸಲಹೆ ನೀಡುತ್ತಾರೆ.

ಈ ಅನುಭವವು ಅಂತ್ಯವಲ್ಲ, ಬದಲಾಗಿ ಹೊಸ ಆರಂಭ ಎಂದು ಬ್ರಿಯಾನ್ನಾ ನಂಬುತ್ತಾರೆ. ಸಾವಿನ ಸಮೀಪವಿರುವ ಮತ್ತೊಂದು ಅನುಭವದ ಬಗ್ಗೆ ತಾನು ಭಯಪಡುತ್ತಿದ್ದೇನೆ ಎಂದು ಅವಳು ಒಪ್ಪಿಕೊಂಡರೂ, ಜೀವನವು ಈಗ ಅವಳಿಗೆ ಹಿಂದೆಂದಿಗಿಂತಲೂ ಹೆಚ್ಚು ಅರ್ಥಪೂರ್ಣವಾಗಿದೆ.

ಊಟ ಮಾಡ್ತೀಯಾ ಎಂದಾಗ ಸತ್ತ ಗಂಡ ಎದ್ದು ಕುಳಿತ

ವ್ಯಕ್ತಿ ಸಾವು ಕಂಡಿದ್ದಾನೆ ಎಂದು ಆತನ ಮೃತದೇಹವನ್ನು ಊರಿಗೆ ಕರೆತರುವ ಹಾದಿಯಲ್ಲಿ ಬದುಕಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಬಳಿಕ ಬಂಕಾಪುರದಲ್ಲಿ ಈ ಘಟನೆ ನಡೆದಿದೆ. ಈಗ ಈ ವ್ಯಕ್ತಿಯನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕುಟುಂಬಸ್ಥರು ದಾಖಲು ಮಾಡಿದ್ದಾರೆ. ಅದಕ್ಕೂ ಮುನ್ನ ಆತನನ್ನು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಖಾಸಗಿ ವೈದ್ಯರು ತಿಳಿಸಿದ್ದರು. ಈ ವೇಳೆ ಆತನ ಮೃತದೇಹವವನ್ನು ಊರಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬದುಕಿರುವ ಅಂಶ ಬೆಳಕಿಗೆ ಬಂದಿದೆ. 45 ವರ್ಷದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ ಸತ್ತು ಬದುಕಿದ ವ್ಯಕ್ತಿ. ಬಿಷ್ಣಪ್ಪ ಬಂಕಾಪುರದ ಮಂಜುನಾಥ ನಗರದ ನಿವಾಸಿಯಾಗಿದ್ದರು.

ಕಳೆದ ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದ ಬಿಷ್ಣಪ್ಪ ಬಳಲುತ್ತಿದ್ದರು. ಈ ವೇಳೆ ಅವರನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಸಿರು ಇಲ್ಲದೇ ಇರುವ ಲಕ್ಷಣ ಕಂಡಾಗ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ