
ತಿರುವನಂತಪುರಂ(ಜೂ.16): ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಕಾಂಗ್ರೆಸ್ ನಿರ್ಧಾರ ಇದೀಗ ಭಾರಿ ವಿವಾದಕ್ಕೆ ಕಾರಣಾಗಿದೆ. ಇದರ ನಡುವೆ ಕೇರಳದಲ್ಲಿ ಮತಾಂತರ ವಿಚಾರ ಹಲವು ವರ್ಷಗಳಿಂದಲೇ ಜಟಾಪಟಿ ನಡೆಯುತ್ತಿದೆ. ಇದೀಗ ಇದಕ್ಕೆ ಪುಷ್ಠಿ ನೀಡುವ ಘಟನೆ ನಡೆದಿದೆ.ಮಗಳನ್ನು ಫಹಾದ್ ಅನ್ನೋ ವ್ಯಕ್ತಿ ಇಸ್ಲಾಂಗೆ ಮತಾಂತರ ಮಾಡಿ, ಮದುವೆಯಾಗಿದ್ದಾನೆ. ನಮ್ಮ ಮಗಳನ್ನು ರಕ್ಷಿಸಬೇಕು ಎಂದು ತಂದೆ ಹೈಕೋರ್ಟ್ ಮೊರೆ ಹೋದ ಘಟನೆ ಕೇರಳದಲ್ಲಿ ನಡೆದಿದೆ.
ಜೂನ್ 8 ರಂದು ಮಗಳು ಬೆನಿತಾ ಫೋನ್ ಸ್ವಿಚ್ ಆಫ್ ಆಗಿದೆ. ಚೆನ್ನೈನ ಎಸ್ಆರ್‌ಎನ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ನಮ್ಮ ಮಗಳು ಕೊನೆಯ ವಾಯ್ಸ್ ಮೆಸೇಜ್ ಕಳುಹಿಸಿದ್ದಾಳೆ. ಫೋನ್ ಮಾಡಿದರೆ ಸಂಪರ್ಕ ಸಿಗುತ್ತಿಲ್ಲ. ಬೆನಿತಾ ಹಿಂದೆ ಬಿದ್ದಿದ್ದ ಫಹಾದ್ ಅನ್ನೋ ವ್ಯಕ್ತಿ ಮಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದಾನೆ. ಇದಕ್ಕೆ ಬೆದರಿಕೆ ತಂತ್ರ ಉಪಯೋಗಿಸಿರುವ ಸಾಧ್ಯತೆ ಇದೆ. ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಬೆನಿತಾ ತಂದೆ ಕೇರಳ ಹೈಕೋರ್ಟ್‌ನಲ್ಲಿ ನ್ಯಾಯಾಕ್ಕಾಗಿ ಮನವಿ ಮಾಡಿದ್ದಾರೆ.
ಮುಸ್ಲಿಂ ಹುಡುಗನ ಜೊತೆ ಓಡಿ ಹೋದ ಮಗಳು: ಬದುಕಿದ್ದಾಗಲೇ ಮಗಳಿಗೆ ಪಿಂಡ ಬಿಟ್ಟ ಕುಟುಂಬ
ನನ್ನ ಮಗಳನ್ನು ರಕ್ಷಿಸಬೇಕು. ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಕೇರಳದಲ್ಲಿ ನಡೆಯುತ್ತಿರುವ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಬೆನಿತಾ ತಂದೆ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಸಾಕ್ಷಿ ಇದು ಅನ್ನೋ ಮಾತುಗಳು ಕೇಳಿಬಂದಿದೆ. ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದೆ. ಇದು ಆತಂಕ ವಾತಾರವಣ ಸೃಷ್ಟಿಸಿದೆ.
ಧಾರವಾಡದಲ್ಲಿ ಮತ್ತೆ ಆರಂಭವಾಯ್ತಾ ಲವ್ ಜಿಹಾದ್: ಮದುವೆ ತಡೆ ಹಿಡಿದ ಬಜರಂಗದಳ ಕಾರ್ಯಕರ್ತರು
ಅಂತರ್‌ಧರ್ಮೀಯ ವಿವಾಹಕ್ಕೆ ಬಜರಂಗದಳ ತಡೆ
ಮುಸ್ಲಿಂ ಯುವಕರಿಬ್ಬರು ಹಿಂದೂ ಯುವತಿಯರಿಬ್ಬರನ್ನು ರಿಜಿಸ್ಟರ್ ಮದುವೆಯಾಗಲು ಹಾಕಿದ್ದ ಯೋಜನೆಯನ್ನು ಸಕಾಲದಲ್ಲಿ ಬಜರಂಗ ದಳದ ಯುವಕರು ತಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಧಾರವಾಡ ಮೂಲದ ಖುಷಿ ಎಂಬುವರನ್ನು ಪಠಾಣ ಎಂಬ ಯುವಕ ಹಾಗೂ ನಿಖಿತಾ ಎಂಬುವರನ್ನು ರಿಜ್ವಾನ್ ಎಂಬಾತ ರಿಜಿಸ್ಟರ್ ಮದುವೆಯಾಗಲು ಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ವಾರದ ಹಿಂದೆ ಧಾರವಾಡದ ನೋಂದಣಾಧಿಕಾರಿ ಕಚೇರಿಯ ನೋಟಿಸ್‌ಬೋರ್ಡ್‌ನಲ್ಲಿ ಇವರ ಹೆಸರು ಹಾಗೂ ಭಾವಚಿತ್ರದೊಂದಿಗೆ ವಿಷಯ ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳಿದ್ದರೆ ಅದಕ್ಕೆ ಅವಕಾಶ ನೀಡಲಾಗಿತ್ತು. ಮದುವೆ ವಿಷಯ ಅರಿತು ಬಜರಂಗದಳದ ಧಾರವಾಡ ಘಟಕದ ಪದಾಧಿಕಾರಿಗಳು, ಎರಡು ದಿನಗಳ ಹಿಂದೆ ನೋಂದಣಾಧಿಕಾರಿಗೆ ತಡೆ ಅರ್ಜಿ ನೀಡಿ, ಇಬ್ಬರೂ ಯುವತಿಯರ ಪೋಷಕರ ಮನವೊಲಿಸಿದರು. ಬಳಿಕ, ಮದುವೆಯನ್ನು ತಡೆ ಹಿಡಿಯಲಾಗಿದೆ. ಈ ಕುರಿತು ಮಾತನಾಡಿದ ಬಜರಂಗದಳದ ಮುಖಂಡ ಶಿವಾನಂದ ಸತ್ತಿಗೇರಿ, ಇದು ಕೂಡ ಲವ್ ಜಿಹಾದ್ ಎನಿಸುತ್ತಿದೆ. ಇಂತಹ ಸಂಗತಿಗಳ ಬಗ್ಗೆ ತಿಳಿದರೆ ಬಜರಂಗದಳಕ್ಕೆ ಮಾಹಿತಿ ನೀಡಬೇಕು ಎಂದು ಕೋರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ