ತಂದೆಯೊರ್ವ ತನ್ನ 3 ವರ್ಷದ ಮಗನನ್ನು ಉಳಿಸಲು ಉರಿಯುತ್ತಿರುವ ಕಟ್ಟಡದ ಕಿಟಕಿಯಿಂದ ಹೊರಗೆ ಎಸೆದ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ. ರಕ್ಷಣಾ ಅಧಿಕಾರಿಯೊಬ್ಬರು ಧರಿಸಿರುವ ಬಾಡಿ ಕ್ಯಾಮೆರಾದಿಂದ ಈ ಕಿರು ವೀಡಿಯೊ ಸೆರೆಯಾಗಿದೆ. ಅಮೆರಿಕದ (US) ನ್ಯೂಜೆರ್ಸಿಯಲ್ಲಿ (New Jersey) ನಡೆದ ಭಯಾನಕ ಘಟನೆಯೊಂದರಲ್ಲಿ ತಂದೆಯೊಬ್ಬ ತನ್ನ ಮಗುವನ್ನು ಬಲವಂತವಾಗಿ ಹೊರೆಗೆಸೆದು ಎಸೆದು ಕಟ್ಟಡದ ಎರಡನೇ ಮಹಡಿಯ ಕಿಟಕಿಯಿಂದ ಜಿಗಿದಿದ್ದಾನೆ.ನ್ಯೂಜೆರ್ಸಿಯ ಸೌತ್ ರಿಡ್ಜ್ ವುಡ್ ಅಪಾರ್ಟ್‌ಮೆಂಟ್ (South Ridge Wood Apartment) ಕಾಂಪ್ಲೆಕ್ಸ್ ನ ಎರಡು ಮತ್ತು ಮೂರನೇ ಮಹಡಿಯಲ್ಲಿ ಮಾರ್ಚ್ 7ರಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು.
ಈ ಘಟನೆಯ ವೀಡಿಯೊವನ್ನು ಸೋ ಬ್ರನ್ಸ್‌ವಿಕ್ ಪಿಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಕ್ಷಣಾ ಅಧಿಕಾರಿಯೊಬ್ಬರು ಧರಿಸಿರುವ ಬಾಡಿ ಕ್ಯಾಮೆರಾದಿಂದ ಈ ಕಿರು ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಫಾಕ್ಸ್ ನ್ಯೂಸ್ ಪ್ರಕಾರ, ಅಧಿಕಾರಿಯೊಬ್ಬರು ಮಗುವನ್ನು ರವಾನಿಸಲು ವ್ಯಕ್ತಿಗೆ ಹೇಳಿದರು. ಆದರೆ ತಂದೆ ಮೊದಲು ಮಗುವನ್ನು ಎಸೆಯಲು ಹಿಂಜರಿದರು, ಆದರೆ ಬೆಂಕಿ ತೀವ್ರಗೊಂಡು ಇಡೀ ಕಟ್ಟಡವನ್ನು ಆವರಿಸಿದ್ದರಿಂದ ಮಗನನ್ನು ಕೆಳಗೆಸೆಯದೇ ಬೇರೆ ದಾರಿ ಇರಲಿಲ್ಲ. ಹೀಗಾಗಿ ಭಯಭೀತರಾದ ತಂದೆ ತನ್ನ ಮಗನನ್ನು ಎರಡನೇ ಮಹಡಿಯ ಕಿಟಕಿಯಿಂದ ಎಸೆಯುತ್ತಿದ್ದಂತೆ, ಅಗ್ನಿಶಾಮಕ ದಳದವರು ಮಗುವನ್ನು ಹಿಡಿದುಕೊಂಡರು. ನಂತರ ತಂದೆ ಕಿಟಕಿಯಿಂದ ಜಿಗಿದು ಪಾರಾದರು. ಅದೃಷ್ಟವಶಾತ್ ತಂದೆ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
Rescue captured on officers' body worn camera. Dad throws child out 2nd floor window to officers and firefighters, then jumps to escape flames consuming apartment building. pic.twitter.com/Ku5jQ6sOUy
— So Brunswick PD (@SoBrunswickPD)
undefined
ಶಾಲೆಯಲ್ಲಿ ಮಕ್ಕಳಿಂದ ವಶಪಡಿಸಿಕೊಂಡ ಫೋನ್‌ಗಳಿಗೆ ಬೆಂಕಿ ಇಟ್ಟ ಶಿಕ್ಷಕರು
ಅಪ್ಪ ಮಗುವನ್ನು 2ನೇ ಮಹಡಿಯ ಕಿಟಕಿಯಿಂದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರತ್ತ ಎಸೆದರು, ನಂತರ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ದಹಿಸುತ್ತಿರುವ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಕೆಳಗೆ ಜಿಗಿದರು ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ಅಗ್ನಿಶಾಮಕ ದಳದವರು ಮಾಡಿದ ಈ ಸಾಹಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಮಗುವನ್ನು ಹಿಡಿಯಲು ಆ ಅಧಿಕಾರಿಗಳು ಅಲ್ಲಿದ್ದರು ದೇವರಿಗೆ ಧನ್ಯವಾದಗಳು ಎಂದು ಬಳಕೆದಾರರು ಬರೆದಿದ್ದಾರೆ.
ನಾವು ಬರುತ್ತಿದ್ದಂತೆ ಬೆಂಕಿ ಧಗಧಗಿಸುತ್ತಿತ್ತು. ಈ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಸುಮಾರು 50 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮಾನ್ಮೌತ್ ಜಂಕ್ಷನ್ ಅಗ್ನಿಶಾಮಕ ಮುಖ್ಯಸ್ಥ ಸ್ಕಾಟ್ ಸ್ಮಿತ್ ತಿಳಿಸಿದ್ದಾರೆ. ಒಂದು ವೇಳೆ ಜನರು ಮಲಗಿದ್ದಾಗ ಈ ಬೆಂಕಿ ಅನಾಹುತ ಸಂಭವಿಸಿದ್ದರೆ ಬಹು ದೊಡ್ಡ ದುರಂತವಾಗುತ್ತಿತ್ತು ಎಂದು ಅವರು ಹೇಳಿದರು.
ಮುಂಬೈನ ಅಪಾರ್ಟ್‌ಮೆಂಟ್‌ನ 10 ನೇ ಮಹಡಿಯಲ್ಲಿ ಭಾರಿ ಬೆಂಕಿ, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡು
ಕೆಲ ದಿನಗಳ ಹಿಂದೆ ರೈಲೊಂದರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ರೈಲಿನಿಂದ ಕೆಳಗಿಳಿದ ಪ್ರಯಾಣಿಕರೆಲ್ಲರೂ ಸೇರಿ ಬೆಂಕಿ ಬಿದ್ದ ಭೋಗಿಯನ್ನು ಇತರ ಬೋಗಿಗಳಿಂದ ಎಳೆದು ಪ್ರತ್ಯೇಕಿಸಿದ ಘಟನೆ ನಡೆ. ಉತ್ತರಪ್ರದೇಶದ ಮೀರತ್(Meerut)ನಲ್ಲಿ ನಡೆದಿತ್ತು ಸಹರಾನ್‌ಪುರದಿಂದ ದೆಹಲಿಗೆ ಹೋಗುತ್ತಿದ್ದ ಸಹರಾನ್‌ಪುರ-ದೆಹಲಿ ರೈಲಿನ ಇಂಜಿನ್ ಮತ್ತು ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಈ ವೇಳೆ ಧೈರ್ಯ ಪ್ರದರ್ಶಿಸಿದ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡ ಎರಡು ಬೋಗಿಗಳನ್ನು ಮತ್ತು ಎಂಜಿನ್ ಅನ್ನು ಉಳಿದ ಬೋಗಿಗಳಿಂದ ಪ್ರತ್ಯೇಕಿಸುವ ಸಲುವಾಗಿ ಎಲ್ಲರೂ ಸೇರಿ ಬೋಗಿಗಳನ್ನು ಎಳೆದು ಪ್ರತ್ಯೇಕಗೊಳಿಸುವಲ್ಲಿ ಯಶಸ್ವಿಯಾದರು. ಪ್ರಯಾಣಿಕರ ಈ ಪ್ರಯತ್ನದಿಂದ ಬೆಂಕಿ ಹರಡುವುದು ತಪ್ಪಿದ್ದು ರೈಲ್ವೆ ಇಲಾಖೆಗೆ ಆಗುತ್ತಿದ್ದ ಭಾರಿ ನಷ್ಟವನ್ನು ಪ್ರಯಾಣಿಕರು ತಪ್ಪಿಸಿದ್ದಾರೆ. ಮೀರತ್ (Meerut) ಬಳಿಯ ದೌರಾಲಾ ರೈಲು ನಿಲ್ದಾಣದಲ್ಲಿ (Daurala railway station) ಈ ಘಟನೆ ನಡೆದಿದೆ.
ಈ ಬಗ್ಗೆ ಮಾತನಾಡಿದ ರೈಲ್ವೆ ವಿಭಾಗೀಯ ಮ್ಯಾನೇಜರ್, ಡಿಂಪಿ ಗಾರ್ಗ್ (Dimpy Garg) ಪ್ರಾಥಮಿಕ ತನಿಖೆಯು ರೈಲಿನ ನಾಲ್ಕನೇ ಬೋಗಿಯಲ್ಲಿ ಸಣ್ಣಗೆ ಉಂಟಾದ ಕಿಡಿಯಿಂದ ಬೆಂಕಿ ಆರಂಭವಾಗಿ ಹಬ್ಬಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.