401 ಜನರಿಂದ 10 ಗಂಟೆ ಎಣಿಕೆ; ಮಸೀದಿಗೆ ಬಂದ ದೇಣಿಗೆ ಹಣ ಕೇಳಿ ಎಲ್ಲರೂ ಶಾಕ್

Published : Apr 15, 2025, 10:19 AM ISTUpdated : Apr 15, 2025, 10:22 AM IST
401 ಜನರಿಂದ 10 ಗಂಟೆ ಎಣಿಕೆ; ಮಸೀದಿಗೆ ಬಂದ ದೇಣಿಗೆ ಹಣ ಕೇಳಿ ಎಲ್ಲರೂ ಶಾಕ್

ಸಾರಾಂಶ

ಪಗ್ಲಾ ಮಸೀದಿಯಲ್ಲಿ ಭರ್ಜರಿ ದೇಣಿಗೆ ಸಂಗ್ರಹವಾಗಿದೆ. ಬರೋಬ್ಬರಿ 9.18 ಕೋಟಿ ರೂಪಾಯಿ ಹಣ ಸಂಗ್ರಹವಾಗಿದ್ದು, ಹಣ ಎಣಿಕೆ ಮಾಡಲು 401 ಜನರಿಗೆ 10 ಗಂಟೆ ಬೇಕಾಯಿತು. ಇದರ ಜೊತೆ ವಿದೇಶಿ ಕರೆನ್ಸಿ ಮತ್ತು ಚಿನ್ನಾಭರಣವೂ ಸಂಗ್ರಹವಾಗಿದೆ.

ಡಾಕಾ: ಸಾಮಾನ್ಯವಾಗಿ ದೇವಸ್ಥಾನಗಳ ಹುಂಡಿ ಎಣಿಕೆ ಕಾರ್ಯ ಪ್ರತಿ ತಿಂಗಳು ನಡೆಯುತ್ತಿರುತ್ತದೆ. ಹಬ್ಬ ಸೇರಿದಂತೆ ವಿವಿಧ ವಿಶೇಷ ದಿನಗಳಂದು ದೇಣಿಗೆ ಮೊತ್ತ ಅಧಿಕವಾಗಿರುತ್ತದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇಗುಲಗಳಲ್ಲಿ ಸಂಗ್ರಹವಾದ ಮಾಹಿತಿ ಪ್ರತಿ ತಿಂಗಳು ಪ್ರಕಟವಾಗುತ್ತಿರುತ್ತದೆ. ಬಾಂಗ್ಲಾದೇಶದ ಕಿಶೋರಗಂಜ್ ಜಿಲ್ಲೆಯಲ್ಲಿರುವ ಐತಿಹಾಸಿಕ ಪಗ್ಲಾ ಮಸೀದಿಯ ದೇಣಿಗೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಮಸೀದಿಯಲ್ಲಿರುವ ದೇಣಿಗೆ ಪಟ್ಟಿಯನ್ನು ಶನಿವಾರ ತೆರೆಯಲಾಗಿತ್ತು. ಈ ದೇಣಿಗೆ ಹಣವನ್ನು ಎಣಿಕೆ ಮಾಡಲು 401 ಜನರು ಬರೋಬ್ಬರಿ 10 ಗಂಟೆ ತೆಗೆದುಕೊಂಡಿದ್ದಾರೆ.

ಶನಿವಾರ ದೇಣಿಗೆಪಟ್ಟಿಯಲ್ಲಿ ಸಂಗ್ರಹವಾದ ಇದುವರೆಗಿನ ಅತ್ಯಧಿಕ ಹಣ ಎಂದು ಮಸೀದಿ ಹೇಳಿದೆ.  ದಕ್ಷಿಣ ಭಾರತದ ದೇವಾಲಯಗಳ ದಾನಪೆಟ್ಟಿಗೆಯಲ್ಲಿ ಸಂಗ್ರಹವಾಗುವಂತೆ  ಬಾಂಗ್ಲಾದೇಶದ ಪಗ್ಲಾ ಮಸೀದಿಯಲ್ಲಿ ಅತ್ಯಧಿಕ ಹಣ ಕಲೆಕ್ಟ್ ಆಗುತ್ತದೆ. ಪಗ್ಲಾ ಮಸೀದಿ ಇಲ್ಲಿಯ ಜನರ ನಂಬಿಕೆ ಮತ್ತು ವಿಶ್ವಾಸನೀಯ ಧಾರ್ಮಿಕ ಕೇಂದ್ರವಾಗಿದೆ. 

ಸಂಗ್ರಹವಾದ ಹಣ ಎಷ್ಟು?
ಪಗ್ಲಾ ಮಸೀದಿ ದೇಣಿಗೆ ಹಣ ಎಣಿಕೆ ಮಾಡಲು ಬರೋಬ್ಬರಿ 401 ಜನರು ನಿಯೋಜನೆ ಮಾಡಲಾಗಿತ್ತು. ಹಣ ಎಣಿಕೆ ಕಾರ್ಯಕ್ಕೆ 10 ಗಂಟೆ ಸಮಯ ತಗುಲಿದ್ದು, ಬರೋಬ್ಬರಿ 9.18 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಸಂಗ್ರಹವಾಗಿರುವ ಎಲ್ಲಾ ಹಣವನ್ನು ಕಿಶೋರ್‌ಗಂಜ್‌ನಲ್ಲಿರುವ ರೂಪಾಲಿ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತದೆ. ಇದೇ ವೇಳೆ ಕಾಣಿಕೆ ಡಬ್ಬಿಗಳಲ್ಲಿ ಸಿಕ್ಕ ವಿದೇಶಿ ಕರೆನ್ಸಿ ಹಾಗೂ ಚಿನ್ನಾಭರಣಗಳನ್ನು ಜಿಲ್ಲಾಡಳಿತದ ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. 

ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಎಣಿಕೆ ಕಾರ್ಯ
ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಗಾದ ದೇಣಿಗೆ ಪೆಟ್ಟಿಗೆಯಲ್ಲಿರುವ ಹಣದ ಎಣಿಕೆ ಕಾರ್ಯ ಸಂಜೆ 4 ಗಂಟೆಗೆ ಕೊನೆಯಾಯ್ತು. 10 ಗಂಟೆಯ ಈ ಕೆಲಸದಲ್ಲಿ401 ಜನರು ಭಾಗಿಯಾಗಿದ್ದು,  28 ಚೀಲಗಳಲ್ಲಿ ಹಣ ಪತ್ತೆಯಾಗಿದೆ.  ಅಪಾರ ಪ್ರಮಾಣದ ಚಿನ್ನಾಭರಣಗಳು ಮತ್ತು ವಿದೇಶಿ ಕರೆನ್ಸಿಗಳು ಸಹ ಪತ್ತೆಯಾಗಿವೆ. ಎಂದಿನಂತೆ ನಗದು ಹಣವನ್ನು ರೂಪಾಲಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.  ವಿದೇಶಿ ಕರೆನ್ಸಿ ಹಾಗೂ ಚಿನ್ನಾಭರಣ ಜಿಲ್ಲಾಡಳಿತದ ಖಜಾನೆಯಲ್ಲಿ ಇರಿಸಲಾಗುತ್ತದೆ ಎಂದು ಕಿಶೋರ್‌ಗಂಜ್‌ನ ಉಪ ಆಯುಕ್ತೆ ಮತ್ತು ಪಾಗ್ಲಾ ಮಸೀದಿ ನಿರ್ವಹಣಾ ಸಮಿತಿಯ ಅಧ್ಯಕ್ಷೆ ಫೌಜಿಯಾ ಖಾನ್ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬಲಿ ನೀಡಲು ಮೇಕೆ ಕೊಂಡೊಯ್ಯುತ್ತಿದ್ದಾಗ ಅಪಘಾತ: ಕಾರಿನಲ್ಲಿದ್ದವರೆಲ್ಲರೂ ಸಾವು, ಬದುಕುಳಿದ ಮೇಕೆ

ಇಷ್ಟೊಂದು ಹಣ ಸಂಗ್ರಹವಾಗಿದ್ದು ಹೇಗೆ?
ನದಿ ತೀರದಲ್ಲಿರುವ ಪಗ್ಲಾ ಮಸೀದಿ ಬಾಂಗ್ಲಾದೇಶದಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮಸೀದಿಯಲ್ಲಿರುವ ದೇಣಿಗೆ ಪೆಟ್ಟಿಗೆಯನ್ನು ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಜಲ್ಲಾಡಳಿತ ಮತ್ತು ಮಸೀದಿ ನಿರ್ವಹಣಾ ಸಮಿತಿಯ ಸಮ್ಮುಖದಲ್ಲಿ ತೆಗೆಯಲಾಗುತ್ತದೆ. ದೇಣಿಗೆ ಬಂದ ಹಣದಲ್ಲಿ ಮಸೀದಿ ಮತ್ತು ಇಸ್ಲಾಮಿಕ್ ಸಂಕೀರ್ಣದ ವೆಚ್ಚಗಳನನ್ನು ಭರಿಸಲು ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ನಂತರ ಉಳಿದ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗುತ್ತದೆ. 

ಪಗ್ಲಾ ಮಸೀದಿಯಲ್ಲಿ ಸಂಗ್ರಹವಾಗುವ ಹಣದಿಂದ ಕಿಶೋರ್‌ಗಂಜ್ ಜಿಲ್ಲೆಯಾದ್ಯಂತ ಇತರೆ ಮಸೀದಿಗಳು, ಮದರಸಾಗಳು ಮತ್ತು ಅನಾಥಾಶ್ರಮಗಳಿಗೆ ಹಾಗೂ ದೀನದಲಿತರು ಮತ್ತು ತೀವ್ರ ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಗುತ್ತದೆ. ಈ ಕಾರಣದಿಂದ ಪಗ್ಲಾ ಮಸೀದಿಗೆ ದೇಣಿಗೆ ರೂಪದಲ್ಲಿ ಅತ್ಯಧಿಕ ಹಣ ಹರಿದು ಬರುತ್ತದೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಹಣ ಎಣಿಕೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಜನರು ಗೂಗಲ್‌ನಲ್ಲಿ ಮಸೀದಿ ಕುರಿತ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಮಸೀದಿ ನೀಡುವ ಆರ್ಥಿಕ ನೆರವಿನಿಂದಾಗಿ ಇಲ್ಲಿನ ಮದರಸಾಗಳು ಶಿಕ್ಷಣ ಒದಗಿಸುತ್ತಿವೆ.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ