ಗಂಡಿಲ್ಲದೇ ಗರ್ಭ ಧರಿಸಿದ ಮೊಸಳೆ: ಸ್ವಯಂ ಸಂತಾನೋತ್ಪತಿ ಸಿದ್ಧಾಂತಕ್ಕೆ ಪುರಾವೆ ಎಂದ ಸಂಶೋಧಕರು

By Anusha KbFirst Published Jun 8, 2023, 12:50 PM IST
Highlights

ಕೊಸ್ಟಾರಿಕಾದ ಮೊಸಳೆಯೊಂದು ಗಂಡು ಸಂಗಾತಿ ಇಲ್ಲದೇ ಗರ್ಭವತಿಯಾಗಿದೆಯಂತೆ.   ಇದು ಡೈನೋಸಾರ್‌ ಜಾತಿಯ ಪ್ರಾಣಿಗಳು ಸ್ವಯಂ ಸಂತಾನೋತ್ಪತಿ ಮಾಡಬಹುದು ಎಂಬ ಸಿದ್ಧಾಂತವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕೊಸ್ಟಾರಿಕಾ: ಯಾವುದೇ ಸೃಷ್ಟಿಕ್ರಿಯೆಗೆ ಗಂಡು ಹೆಣ್ಣು ಎರಡೂ ಜೀವಗಳು ಬೇಕು, ಮನುಷ್ಯರಾದರೂ ಅಷ್ಟೇ ಪ್ರಾಣಿಗಳಾದರೂ ಅಷ್ಟೇ,  ಹೀಗಿರುವಾಗ ಕೊಸ್ಟಾರಿಕಾದ ಮೊಸಳೆಯೊಂದು ಗಂಡು ಸಂಗಾತಿ ಇಲ್ಲದೇ ಗರ್ಭವತಿಯಾಗಿದೆಯಂತೆ.  ಇದು ಈಗ ಅಲ್ಲಿನ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ.  ಇದು ಸತ್ಯವೇ ಆಗಿದ್ದಲ್ಲಿ ಸ್ವಯಂ ಆಗಿ ಗಂಡಿನ ಸಂಪರ್ಕವಿಲ್ಲದೇ ಮೊಸಳೆಯೊಂದು ಗರ್ಭಿಣಿಯಾದ ಮೊದಲ ಪ್ರಕರಣ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದು ಡೈನೋಸಾರ್‌ ಜಾತಿಯ ಪ್ರಾಣಿಗಳು ಸ್ವಯಂ ಸಂತಾನೋತ್ಪತಿ ಮಾಡಬಹುದು ಎಂಬ ಸಿದ್ಧಾಂತವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

18 ವರ್ಷದ ಈ ಹೆಣ್ಣು ಮೊಸಳೆ 16 ವರ್ಷಗಳ ಕಾಲ ಸಂಗಾತಿ ಇಲ್ಲದೇ ಒಂಟಿಯಾಗಿ ಸರೀಸೃಪಗಳಿಗೆ ಇರುವ ಪಾರ್ಕೊಂದರಲ್ಲಿ ಕಳೆದಿತ್ತು. ಆದರೆ ಅಚ್ಚರಿ ಎಂಬಂತೆ 2018ರಲ್ಲಿ ಪಾರ್ಕ್‌ನಲ್ಲಿ ಇದರ ಮೊಟ್ಟೆಯೊಂದು ಪತ್ತೆಯಾಗಿತ್ತು. ವರ್ಜಿನ್ ಬರ್ತ್ಸ್ ಎಂದು ಕರೆಯಲಾಗುವ ಈ ವಿದ್ಯಮಾನಕ್ಕೆ ವೈಜ್ಞಾನಿಕವಾಗಿ 'ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್' (facultative parthenogenesis) ಎಂದು ಕೂಡ ಕರೆಯಲಾಗುತ್ತದೆ. ಇದರ ಪ್ರಕಾರ ಕೆಲವು ಪಕ್ಷಿಗಳು ಹಾಗೂ ಸರೀಸೃಪಗಳು ಗಂಡಿನ ಸಂಪರ್ಕವಿಲ್ಲದೇ ಸಂತಾನೋತ್ಪತಿ ನಡೆಸುತ್ತವೆಯಂತೆ. 

ಇದರ ಪ್ರಕಾರ, ಹೆಣ್ಣು ಮೊಟ್ಟೆಯ ಕೋಶವು ಫಲವತ್ತಾಗದೆ ಭ್ರೂಣವಾಗಿ ಬೆಳೆದಾಗ ಈ ರೀತಿಯ ಪ್ರಕ್ರಿಯೆ ಸಂಭವಿಸುತ್ತದೆ. ಮೊಟ್ಟೆಯೂ ರೂಪುಗೊಂಡು ಜೊತೆಗೆ ಉಳಿದಿರುವ ಆನುವಂಶಿಕ ವಸ್ತುಗಳೊಂದಿಗೆ ಬೆಸೆಯುವಿಕೆಯಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ವರ್ಜೀನಿಯಾದ ಪಾಲಿಟೆಕ್ನಿಕ್‌ನ ಸಂಶೋಧಕರ ವಿಶ್ಲೇಷಣೆಯ ಪ್ರಕಾರ ಭ್ರೂಣವು 99.9% ಕ್ಕಿಂತ ಹೆಚ್ಚು ತಳೀಯವಾಗಿ ತಾಯಿಯನ್ನು ಹೋಲುತ್ತದೆ ಆದರೆ ಇಬ್ಬರು ಪೋಷಕರಿದ್ದ ಸಂದರ್ಭದಲ್ಲಿ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 

ಅಬ್ಬಬ್ಬಾ..ಸಾಕಿದ ಮಾಲೀಕನ ದೇಹವನ್ನೇ ಕಿತ್ತು ಕಿತ್ತು ತಿಂದ 40 ಮೊಸಳೆಗಳು

ರಾಯಲ್ ಸೊಸೈಟಿ ಜರ್ನಲ್ ಬಯಾಲಜಿ ಲೆಟರ್ಸ್‌ನಲ್ಲಿ (Royal Society journal Biology Letters) ಸಂಶೋಧಕರ ತಂಡ ಬರೆದಿರುವಂತೆ, ಬಂಧನದಲ್ಲಿರುವ ಸರೀಸೃಪಗಳು ಗಂಡಿಲ್ಲದೇ ಮೊಟ್ಟೆಗಳನ್ನು ಇಡುವುದು ಅಸಾಮಾನ್ಯವೇನಲ್ಲ, ಅವುಗಳಿಗೆ ಧೀರ್ಘಕಾಲ ಸಂಗಾತಿಯ ಸಂಪರ್ಕವನ್ನೇ ನೀಡದಿದ್ದರೆ ಇವುಗಳು ಸಾಮಾನ್ಯವಾಗಿ ಗಂಡನ್ನು ತಿರಸ್ಕರಿಸುತ್ತವೆಯಂತೆ. ಆದ್ದರಿಂದ ಗಂಡಿನ ಸಂಪರ್ಕವಿಲ್ಲದೇ ಸೃಷ್ಟಿಯಾದ ಮೊಟ್ಟೆಗಳನ್ನು ಸಂಭಾವ್ಯ ಕಾರ್ಯಸಾಧ್ಯತೆಗಾಗಿ  ಮೌಲ್ಯಮಾಪನ ಮಾಡಬೇಕು ಎಂದು ಈ ಸಂಶೋಧನೆಗಳು ಸೂಚಿಸಿವೆ. ಅಲ್ಲದೇ ಗಮನಕ್ಕೆ ಬಾರದೇ ಹೋದ ಇಂತಹ ಇನ್ನೂ ಹಲವು ಪ್ರಕರಣಗಳು ಸಂಭವಿಸಿರಬಹುದು ಎಂದು ಈ ಸಂಶೋಧರಕರ ತಂಡ ಹೇಳಿದೆ.

ಸಂಭಾವ್ಯ ಸಂಗಾತಿಗಳ ಉಪಸ್ಥಿತಿ ಇದ್ದಾಗಲೂ ಈ ರೀತಿಯ ಪ್ರಕ್ರಿಯೆ ನಡೆಯಬಹುದು. ಆದರೆ ಗಂಡು ಸಂಗಾತಿಯೊಂದಿಗೆ ವಾಸಿಸುವ ಹೆಣ್ಣುಗಳಲ್ಲಿ ಸಂತಾನೋತ್ಪತ್ತಿ ಸಂಭವಿಸಿದಾಗ ಇದರ ಈ ರೀತಿಯ ಪ್ರಮಾಣ ಕಡಿಮೆ ಇರಬಹುದು ಎಂದು  ಅವರು ಹೇಳಿದರು. ಈ ಮೊಟ್ಟೆ ಮರಿಯಾಗದಿದ್ದರೂ,  ಡೈನೋಸಾರ್ ವಿಕಾಸದ ಬಗ್ಗೆ ನಮ್ಮ ತಿಳುವಳಿಕೆಗೆ ಇದರ ಸಂಶೋಧನೆಗಳು ಪರಿಣಾಮ ಬೀರುತ್ತವೆ. ಮೊಸಳೆಗಳು ಮತ್ತು ಪಕ್ಷಿಗಳು ಎರಡೂ ಆರ್ಕೋಸೌರ್ಸ್ ಎಂದು ಕರೆಯಲ್ಪಡುವ ಪ್ರಾಚೀನ ಜೀವಿಗಳಿಂದ ವಿಕಸವಾದುವು. ಈ ನಡುವೆ, ಡೈನೋಸಾರ್‌ಗಳು ಮತ್ತು ಟೆರೋಸಾರ್‌ಗಳು ಸಹ ಅದೇ ಶಾಖೆಯಿಂದ ವಿಕಸನಗೊಂಡವು ಎಂದು ಈ ಸಂಶೋಧಕರು ಹೇಳಿದ್ದಾರೆ. 

ರಾಯಚೂರು: ಮೊಸಳೆ ದಾಳಿಗೆ 9 ವರ್ಷದ ಬಾಲಕ ಬಲಿ!

'ಆರ್ಕೋಸೌರ್‌ಗಳೊಳಗಿನ ಅತ್ಯಂತ ಇತ್ತೀಚಿನ ಮತ್ತು ಅತ್ಯಂತ ಪ್ರಾಚೀನ ವಂಶಾವಳಿಗಳು ಪಾರ್ಥೆನೋಜೆನೆಟಿಕ್‌ನಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ನಮಗೆ ಈಗ ತಿಳಿದಿದೆ  ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ವರ್ಜೀನಿಯಾ ಪಾಲಿಟೆಕ್ನಿಕ್‌ನ ವಿಕಾಸಾತ್ಮಕ ತಳಿಶಾಸ್ತ್ರದ ಪ್ರಾಧ್ಯಾಪಕ ವಾರೆನ್ ಬೂತ್ (Warren Booth) ಹೇಳಿದ್ದಾರೆ.  ಅಂತೆಯೇ, ಆರ್ಕೋಸಾರ್‌ಗಳ (archosaurs) ಅಳಿವಿನಂಚಿನಲ್ಲಿರುವ ಸದಸ್ಯರಾದ  ಡೈನೋಸಾರ್‌ಗಳು (dinosaurs) ಮತ್ತು ಟೆರೋಸಾರ್‌ಗಳು  ಪಾರ್ಥೆನೋಜೆನೆಟಿಕ್ (ಸ್ವಯಂ ಆಗಿ) ಆಗಿ ಸಹ ಸಂತಾನೋತ್ಪತ್ತಿ ಮಾಡಬಹುದು ಎಂಬುದನ್ನು ನಾವು ಬಲವಾಗಿ ಊಹಿಸಬಹುದು ಎಂದೂ ಬೂತ್ ಹೇಳುತ್ತಾರೆ.

click me!