ಶಾಂಘೈನಲ್ಲಿ ಒಂದೇ ದಿನ 24 ಸಾವಿರ ಕೋವಿಡ್‌ ಕೇಸು

By Precilla Olivia DiasFirst Published Apr 16, 2022, 5:59 AM IST
Highlights

* ಚೀನಾದಲ್ಲಿ ಕಠಿಣ ಲಾಕ್‌ಡೌನ್‌ ನಿರ್ಬಂಧಗಳ ನಡುವೆಯೂ ಸೋಂಕಿನ ಅಬ್ಬರ 

* ಆಹಾರ, ಔಷಧಿಯಿಲ್ಲದೇ ಜನರ ಪರದಾಟ

* ಆದರೂ ಕಠಿಣ ಲಾಕ್‌ಡೌನ್‌ ಮುಂದುವರಿಕೆ

ಬೀಜಿಂಗ್‌: ಚೀನಾದಲ್ಲಿ ಕಠಿಣ ಲಾಕ್‌ಡೌನ್‌ ನಿರ್ಬಂಧಗಳ ನಡುವೆಯೂ ಸೋಂಕಿನ ಅಬ್ಬರ ಹೆಚ್ಚಾಗುತ್ತಿದೆ. ಶುಕ್ರವಾರ 3400ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 20,700 ಸೋಂಕಿತರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ.

ಕಳೆದ 15 ದಿನಗಳಿಂದ ಲಾಕ್‌ಡೌನ್‌ಗೆ ಒಳಪಟ್ಟಿರುವ ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಅತ್ಯಧಿಕ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ 3,200 ಕೇಸುಗಳು ದಾಖಲಾಗಿದ್ದು, 20,782 ಸೋಂಕಿತರಿಗೆ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಶಾಂಘೈನಲ್ಲಿ ಒಮಿಕ್ರೋನ್‌ ಆರ್ಭಟದ ನಡುವೆಯೇ ಆಹಾರ, ಔಷಧಿಗಳಿಲ್ಲದೇ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಆಹಾರ, ಔಷಧಗಳ ಪೂರೈಕೆ ಮಾಡುವುದು ಸೇರಿದಂತೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಕಲ್ಪಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಸರ್ಕಾರದ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಜನರ ಗೋಳನ್ನು ಕೇಳದ ಚೀನಾ ಕೋವಿಡ್‌ ಶೂನ್ಯ ಸಹನೆ ನೀತಿಯಡಿ ಲಾಕ್‌ಡೌನ್‌ ಮುಂದುವರೆಸಿದೆ.

click me!