ಜಗತ್ತಿಗೇ Omicron ಕಂಟಕ: ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಎಚ್ಚರಿಕೆ ಸಂದೇಶ!

By Kannadaprabha NewsFirst Published Nov 30, 2021, 6:55 AM IST
Highlights

* ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಎಚ್ಚರಿಕೆ ಸಂದೇಶ-

* ಜಗತ್ತಿಗೇ ಒಮಿಕ್ರೋನ್‌ ಕಂಟಕ - ಬಹಳ ಅಪಾಯಕಾರಿ ತಳಿ ಇದು

* ಈ ಸೋಂಕು ಹರಡಿದರೆ ಪರಿಣಾಮ ಅತ್ಯಂತ ಗಂಭೀರ: ಡಬ್ಲ್ಯುಎಚ್‌ಒ

* ಸೋಂಕು ಹತ್ತಿಕ್ಕಲು ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

* ಜಾಗತಿಕ ಸಮುದಾಯಕ್ಕೆ ಆರೋಗ್ಯ ಸಂಸ್ಥೆಯ ಕರೆ

ಜಿನೆವಾ(ನ.30): ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಪತ್ತೆಯಾಗಿ ಈಗಾಗಲೇ 13 ದೇಶಗಳಿಗೆ ಹರಡಿರುವ ‘ಒಮಿಕ್ರೋನ್‌’ ರೂಪಾಂತರಿ ಕೊರೋನಾ ವೈರಸ್‌ (Omicron Mutant Virus)ಇಡೀ ಜಗತ್ತಿಗೇ ಬಹಳ ಅಪಾಯಕಾರಿ ತಳಿಯಾಗಿದ್ದು, ಅದು ಹರಡದಂತೆ ತಡೆಯಲು ತಕ್ಷಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organisation) ಎಚ್ಚರಿಕೆ ನೀಡಿದೆ. ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ‘ಒಮಿಕ್ರೋನ್‌ನ ಸ್ಪೈಕ್‌ ಪ್ರೊಟೀನ್‌ಗಳು ಕಂಡುಕೇಳರಿಯದ ಪ್ರಮಾಣದ ರೂಪಾಂತರಕ್ಕೆ ಒಳಗಾಗಿವೆ. ಜಾಗತಿಕ ಮಟ್ಟದಲ್ಲಿ ಈ ವೈರಸ್‌ ಹರಡುವ ಸಾಧ್ಯತೆಗಳು ‘ಹೆಚ್ಚು’ ಇವೆ. ಈ ಹರಡುವಿಕೆಯಿಂದ ತೀವ್ರ ಅಪಾಯ ಉಂಟಾಗುವ ಸಾಧ್ಯತೆ ‘ಬಹಳ ಹೆಚ್ಚು’ ಇದೆ. ಒಮಿಕ್ರೋನ್‌ ಸೋಂಕು ಹರಡಿದರೆ ಪರಿಣಾಮಗಳು ಬಹಳ ಗಂಭೀರವಾಗಿರಬಹುದು. ಹೊಸ ತಳಿ ಎಲ್ಲಿ ಹರಡುತ್ತದೆ ಎಂಬುದರ ಆಧಾರದ ಮೇಲೆ ಅದರ ಪರಿಣಾಮಗಳೂ ಬದಲಾಗಬಹುದು. ಆದರೂ ಇಲ್ಲಿಯವರೆಗೂ ಹೊಸ ಸೋಂಕಿನಿಂದಾಗಿ ಎಲ್ಲಿಯೂ ಸಾವು ಸಂಭವಿಸಿಲ್ಲ’ ಎಂದು ತಿಳಿಸಿದೆ.

‘ಸದ್ಯ ಹೊಸ ರೂಪಾಂತರಿ ತಳಿಯಿಂದ ಜಗತ್ತಿಗೆ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವೈರಸ್‌ ಲಸಿಕೆಯಿಂದ ಉತ್ಪಾದಿತ ಮತ್ತು ಈ ಹಿಂದೆ ಸೋಂಕು ಕಾಣಿಸಿಕೊಂಡ ಬಳಿಕ ಉತ್ಪಾದನೆಯಾಗಿರುವ ರೋಗ ನಿರೋಧಕ ಶಕ್ತಿಯನ್ನೂ ಭೇದಿಸಬಲ್ಲದು ಎಂಬುದಕ್ಕೆ ಇನ್ನಷ್ಟುಅಧ್ಯಯನದ ಅವಶ್ಯಕತೆ ಇದೆ’ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಇದೇ ವೇಳೆ ‘ಸದ್ಯ ದಕ್ಷಿಣ ಆಫ್ರಿಕಾದಲ್ಲಿ (South Africa) ಸ್ಥಳೀಯವಾಗಿ ಒಮಿಕ್ರೋನ್‌ ಹರಡುತ್ತಿದೆ. ಆಫ್ರಿಕಾದ ಹೊರಗೆ ಪತ್ತೆಯಾಗಿರುವ ಈ ಸೋಂಕಿನ ಬಹುತೇಕ ಎಲ್ಲ ಪ್ರಕರಣಗಳಿಗೆ ಪ್ರಯಾಣದ ಇತಿಹಾಸವಿದೆ. ಬೇರೆ ಬೇರೆ ದೇಶಗಳಲ್ಲಿ ಒಮಿಕ್ರೋನ್‌ ಸ್ಥಳೀಯವಾಗಿ ಹರಡದಂತೆ ಕಟ್ಟೆಚ್ಚರ ವಹಿಸಬೇಕು. ಅದಕ್ಕಾಗಿ ಥರ್ಮೋ ಫಿಶರ್‌ ಸೈಂಟಿಫಿಕ್‌ ಇಂಕ್‌ನ ಪಿಸಿಆರ್‌ ಟೆಸ್ಟ್‌ಗಳನ್ನು ವ್ಯಾಪಕವಾಗಿ ನಡೆಸಬೇಕು. ಜೊತೆಗೆ, ಒಮಿಕ್ರೋನ್‌ನ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಲು ಇನ್ನಷ್ಟುಸಂಶೋಧನೆಗಳು ನಡೆಯಬೇಕು’ ಎಂದು ಅಭಿಪ್ರಾಯಪಟ್ಟಿದೆ.

ಡಬ್ಲ್ಯುಎಚ್‌ಒ ಹೇಳಿದ್ದೇನು?

- ಒಮಿಕ್ರೋನ್‌ನ ರೂಪಾಂತರಿ ಜಗತ್ತಿಗೇ ಬಲು ಅಪಾಯಕಾರಿ

- ಇದರ ಸ್ಪೈಕ್‌ ಪ್ರೋಟಿನ್‌ ಅಗಾಧ ರೀತಿ ರೂಪಾಂತರವಾಗಿವೆ

- ಜಾಗತಿಕ ಮಟ್ಟದಲ್ಲಿ ಈ ವೈರಸ್‌ ಹರಡುವ ಸಾಧ್ಯತೆ ಅತ್ಯಧಿಕ

- ಸೋಂಕು ಪರಿಸಿದರೆ ತೀವ್ರ ಅಪಾಯ ಆಗುವ ಸಂಭವ ಹೆಚ್ಚು

- ಈ ವೈರಾಣು ಹರಡಿದರೆ ಪರಿಣಾಮಗಳು ಗಂಭೀರವಾಗಿರುತ್ತವೆ

- ಹರಡುವ ಸ್ಥಳದ ಮೇಲೆ ಪರಿಣಾಮಗಳೂ ಬದಲಾಗಬಹುದು

- ದಕ್ಷಿಣ ಆಫ್ರಿಕಾದಲ್ಲಿ ಸ್ಥಳೀಯವಾಗಿ ಸೋಂಕು ಹರಡುತ್ತಿದೆ

- ಆಫ್ರಿಕಾ ಹೊರಗಿನ ಕೇಸುಗಳಿಗೆ ಪ್ರಯಾಣ ಇತಿಹಾಸವಿದೆ

- ಲಸಿಕೆ ಪಡೆದವರನ್ನೂ ಕಾಡುತ್ತಾ ಎಂಬ ಬಗ್ಗೆ ಅಧ್ಯಯನ ಅವಶ್ಯ

ಒಮಿಕ್ರೋನ್‌ಗೆ ಸ್ಪುಟ್ನಿಕ್‌ ಬ್ರಹ್ಮಾಸ್ತ್ರ?

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಅತಿಶೀಘ್ರವಾಗಿ ಹರಡುವ ಕೊರೋನಾ ವೈರಸ್‌ ಹೊಸ ರೂಪಾಂತರಿ ಒಮಿಕ್ರೋನ್‌ನ್ನು ತಟಸ್ಥಗೊಳಿಸುವ ಸಾಮರ್ಥ್ಯ ಸ್ಪುಟ್ನಿಕ್‌ ವಿ ಮತ್ತು ಸ್ಪುಟ್ನಿಕ್‌ ಲೈಟ್‌ ಲಸಿಕೆ ಹೊಂದಿದೆ ಎಂದು ಲಸಿಕೆ ಉತ್ಪಾದಿಸಿರುವ ರಷ್ಯಾ ಮೂಲದ ಗಮಾಲೇಯ ಸಂಸ್ಥೆ ಹೇಳಿದೆ. ರಷ್ಯಾದ ಈ ಎರಡು ಲಸಿಕೆಗಳು ರೂಪಾಂತರ ಹೊಂದಿದ ವೈರಸ್‌ ವಿರುದ್ಧವೂ ಪರಿಣಾಮಕಾರಿಯಾಗಿವೆ ಎನ್ನಲಾಗಿದೆ.

ಒಮಿಕ್ರೋನ್‌ ಸೋಂಕು ಶೀಘ್ರದಲ್ಲೇ ಜಾಗತಿಕವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆ ಸ್ಪುಟ್ನಿಕ್‌ ಲಸಿಕೆಯ ಜೊತೆಗೆ ಫೆಬ್ರವರಿ 20, 2022ರೊಳಗೆ ಹಲವಾರು ಮಿಲಿಯನ್‌ ಸ್ಪುಟ್ನಿಕ್‌ ಒಮಿಕ್ರೋನ್‌ ಬೂಸ್ಟರ್‌ ಡæೂೕಸ್‌ಗಳನ್ನೂ ಒದಗಿಸಲಾಗುವುದು ಎಂದು ಸ್ಪುಟ್ನಿಕ್‌ ವಿ ಕಂಪನಿ ತನ್ನ ಟ್ವಿಟರ್‌ ಖಾತೆಯಲ್ಲಿ ತಿಳಿಸಿದೆ.

 

click me!