ವಿಶ್ವದ ಅತ್ಯಂತ ದೊಡ್ಡ ಐಫೋನ್ ಫ್ಯಾಕ್ಟರಿ ಏರಿಯಾದಲ್ಲಿ ಲಾಕ್‌ಡೌನ್ ಹೇರಿದ ಚೀನಾ

By Anusha KbFirst Published Nov 2, 2022, 9:46 PM IST
Highlights

ಚೀನಾದ ಅಧಿಕಾರಿಗಳು ಇಂದು ವಿಶ್ವದ ಅತ್ಯಂತ ದೊಡ್ಡ ಐಫೋನ್ ತಯಾರಿಕಾ ಘಟಕ ಇರುವ ಚೀನಾದ ಪ್ರದೇಶದಲ್ಲಿ ಲಾಕ್‌ಡೌನ್ ಹೇರಿದ್ದಾರೆ ಎಂದು ಚೀನಾ ಮೂಲದ ಸಾಮಾಜಿಕ ಜಾಲತಾಣಗಳು ವರದಿ ಮಾಡಿವೆ.

ಬೀಜಿಂಗ್‌: ಚೀನಾದಲ್ಲಿ ಕೋವಿಡ್ ನಂತರ ಮತ್ತಿನ್ಯಾವುದೋ ಮಾರಕ ಸಾಂಕ್ರಾಮಿಕ ಕಾಯಿಲೆ ತಾಂಡವವಾಡುತ್ತಿದೆ ಎನ್ನಲಾಗುತ್ತಿದ್ದು, ಹಲವು ಪ್ರಮುಖ ಪ್ರದೇಶಗಳಲ್ಲಿ ಮತ್ತೆ ಮತ್ತೆ ಲಾಕ್‌ಡೌನ್ ಹೇರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕೋವಿಡ್ ಪೀಡಿತ ವ್ಯಕ್ತಿಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಕ್ರೇನ್ ಮೂಲಕ ಸ್ಥಳಾಂತರಿಸುವ ವಿಡಿಯೋವೊಂದು ವೈರಲ್ ಆಗಿ, ಚೀನಾದಲ್ಲಿ ಜನರ ಬದುಕು ಹೇಗಿದೆ ಎಂಬ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿತ್ತು. ಈ ಮಧ್ಯೆ ವಿಶ್ವದ ಅತ್ಯಂತ ದೊಡ್ಡ ಐಫೋನ್ ಫ್ಯಾಕ್ಟರಿ ಪ್ರದೇಶ ಇರುವ ಜಾಗದಲ್ಲಿ ಚೀನಾ ಲಾಕ್‌ಡೌನ್ ಹೇರಿದೆ ಎಂದು ವರದಿ ಆಗಿದೆ. 

ಚೀನಾದ ಅಧಿಕಾರಿಗಳು ಇಂದು ವಿಶ್ವದ ಅತ್ಯಂತ ದೊಡ್ಡ ಐಫೋನ್ ತಯಾರಿಕಾ ಘಟಕ ಇರುವ ಚೀನಾದ ಪ್ರದೇಶದಲ್ಲಿ ಲಾಕ್‌ಡೌನ್ ಹೇರಿದ್ದಾರೆ ಎಂದು ಚೀನಾ ಮೂಲದ ಸಾಮಾಜಿಕ ಜಾಲತಾಣಗಳು ವರದಿ ಮಾಡಿವೆ.  ಮಧ್ಯ ಚೀನಾದ ಝೆಂಗ್‌ಝು (Zhengzhou) ವಿಮಾನ ನಿಲ್ದಾಣದ ಆರ್ಥಿಕ ವಲಯದ (Economy Zone) ಸಮೀಪ ತೈವಾನ್ (Taiwan) ಮೂಲದ ಟೆಕ್ ದೈತ್ಯ ಫಾಕ್ಸ್‌ಕಾನ್ ಐಫೋನ್‌ನ ದೊಡ್ಡ ಘಟಕವನ್ನು ನಡೆಸುತ್ತಿದೆ. ಅಲ್ಲಿ ಈಗ ಲಾಕ್‌ಡೌನ್ ಹೇರಲಾಗಿದೆ ಎಂದು ವರದಿ ಆಗಿದೆ. 

China locks down area around world's largest iPhone factory: statement

— AFP News Agency (@AFP)

ಆದರೆ ಯಾವ ರೀತಿಯ ಸಾಂಕ್ರಾಮಿಕ ರೋಗದ ಕಾರಣಕ್ಕೆ ಈ ರೀತಿ ಲಾಕ್‌ಡೌನ್ ಹೇರಲಾಗಿದೆ ಎಂಬುದು ವರದಿ ಆಗಿಲ್ಲ. ಜನರು ಚೀನಾದ ಫಾಕ್ಸ್‌ಕಾನ್ ಫೇಸಿಲಿಟಿಯಿಂದ ಹೊರ ಬರುತ್ತಿರುವ ದೃಶ್ಯಗಳು ಕಳೆದ ವಾರ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಲ್ಪಟ್ಟಿದ್ದವು. ಫಾಕ್ಸ್‌ಕಾನ್ (Foxcon) ಒಳಗೆ 100ರಿಂದ ಸಾವಿರದವರೆಗೆ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಉದ್ಯೋಗಿಗಳು ಲಾಕ್‌ಡೌನ್ ಹೇರಿ, ಸಮರ್ಪಕ ವ್ಯವಸ್ಥೆ ಮಾಡದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (social media) ದೂರಿಕೊಂಡಿದ್ದರು. ಅಲ್ಲದೇ ಕೋವಿಡ್ ಲಾಕ್‌ಡೌನ್ ಮಧ್ಯೆ ಸಿಲುಕಿ ಹೈರಾಣಾಗುವ ಮೊದಲು ಫ್ಯಾಕ್ಟರಿಯಿಂದ ಪಾರಾಗುವ ಬಗ್ಗೆ ಹೇಳಿಕೊಂಡಿದ್ದರು. 

ಕೋವಿಡ್ ನಿಯಂತ್ರಣ ಸೇವಕರು ಹಾಗೂ ಅಗತ್ಯ ವಸ್ತುಗಳ ಪೂರೈಕೆದಾರರ ಹೊರತುಪಡಿಸಿ, ಉಳಿದ ಯಾರೂ ಕೂಡ ಕೋವಿಡ್ ತಪಾಸಣೆ ನಡೆಸದೇ ತಮ್ಮ ನಿವಾಸದಿಂದ ಹೊರ ನಡೆಯುವಂತಿಲ್ಲ ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಶೂನ್ಯ ಕೋವಿಡ್‌ ನೀತಿಯನ್ನು (Zero Covid Policy) ಅನುಷ್ಠಾನಕ್ಕೆ ತರಲು ಕೊರೋನಾ ಪ್ರಕರಣಗಳಲ್ಲಿ (Covid Cases) ಕೊಂಚ ಏರಿಕೆ ಕಂಡು ಬರುತ್ತಿದ್ದಂತೆ ಯಾವುದೇ ಸಮರ್ಪಕ ವ್ಯವಸ್ಥೆ ಮಾಡದೇ ಸರ್ಕಾರ ಲಾಕ್‌ಡೌನ್‌ (Lockdown) ಘೋಷಣೆ ಮಾಡುತ್ತಿದ್ದು ಇದರಿಂದ ಚೀನಾದಲ್ಲಿ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ.

 ಇದು ಜೈಲಲ್ಲ ಗುರು... ಚೀನಾದ ಕೋವಿಡ್ ಐಸೊಲೇಷನ್ ಸೆಂಟರ್

ತನ್ನಲ್ಲಿ ಕೋವಿಡ್ ಸೃಷ್ಟಿಸಿ ಜಗತ್ತಿಗೆಲ್ಲಾ ಪ್ರಸಾದ ಹಂಚಿದ ಚೀನಾ ಇನ್ನು ಆ ಕೋವಿಡ್ ಭಯದಿಂದ ಹೊರಗೆ ಬಂದಿಲ್ಲ. ಕೋವಿಡ್‌ನಿಂದ ಬಳಲಿ ಬೆಂಡಾಗಿ ಮತ್ತೆ ಸಹಜ ಸ್ಥಿತಿಗೆ ಜಗತ್ತಿನ ಉಳಿದೆಲ್ಲಾ ರಾಷ್ಟ್ರಗಳು ಬಂದಿದ್ದರೂ, ಚೀನಾ ಮಾತ್ರ ಆ ಕಹಿ ನೆನಪಿನಲ್ಲೇ ಇದ್ದು, ದೇಶದ ಹಲವು ಭಾಗಗಳಲ್ಲಿ ಮತ್ತೆ ಮತ್ತೆ ಕೋವಿಡ್ ಲಾಕ್‌ಡೌನ್‌ ಘೋಷಿಸುತ್ತಿದೆ. ಒಂದು ಎರಡು ಕೇಸುಗಳು ಸಿಕ್ಕರೂ ಇಡೀ ನಗರವನ್ನೇ ಬಂದ್ ಮಾಡುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಚೀನಾ ಕೋವಿಡ್ ಸೋಂಕಿನ ಪ್ರಕರಣವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಐಕಿಯಾ ಮಾಲ್ ಒಂದನ್ನು ಜನರಿರುವಾಗಲೇ ದಿಢೀರ್ ಮುಚ್ಚಲು ಮುಂದಾಗಿದ್ದು, ಸುದ್ದಿ ತಿಳಿದ ಜನ ಕಿರುಚುತ್ತಾ ಬೊಬ್ಬೆ ಹೊಡೆಯುತ್ತಾ ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಲ್ಲಿಂದ ತಳ್ಳಿ ತಪ್ಪಿಸಿಕೊಂಡು ಓಡಿ ಹೋದ ದೃಶ್ಯ ಸಾಕಷ್ಟು ವೈರಲ್ ಅಗಿತ್ತು. 

Coronavirus : ಜನರೇ ಸೂಪರ್‌ ಮಾರ್ಕೆಟ್ ದೋಚಿದ್ರು... ಶಾಂಘೈನಲ್ಲಿ ಹೊರಬರಲು ಕೆಲವರಿಗೆ ಅವಕಾಶ!

click me!