
ವಾಷಿಂಗ್ಟನ್(ಮೇ.14): ಕೊರೋನಾ ಪೂರ್ವ ಜೀವನಕ್ಕೆ ಅಮೆರಿಕ ಬಹಳ ವೇಗವಾಗಿ ಮರಳುತ್ತಿದೆ ಎಂಬ ದೊಡ್ಡ ಸೂಚನೆ ಸಿಕ್ಕಿದೆ. ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಜನರು ಇನ್ನು ಮುಂದೆ ಮಾಸ್ಕ್‌ಗಳನ್ನು ಧರಿಸುವ ಅಗತ್ಯವಿಲ್ಲ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೇಳಿದೆ.
ಒಳಾಂಗಣ ಮತ್ತು ಹೊರಾಂಗಣದಲ್ಲಿ ಈ ನಿಯಮ ಅನ್ವಯವಾಗಲಿದೆ. ಪ್ರಕಟಣೆಯ ನಂತರ, ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರು ಮಾಸ್ಕ್ ಧರಿಸದೆ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ವರದಿಗಾರರ ಮುಂದೆ ಕಾಣಿಸಿಕೊಂಡಿದ್ದಾರೆ.
ಸ್ಪುಟ್ನಿಕ್ ಲಸಿಕೆ ಬಳಸಿದ ರಾಜ್ಯದಲ್ಲಿ ಹೊಸ ಕೊರೋನಾ ಕೇಸ್ ಇಲ್ಲ..!
ಇದು ಒಂದು ದೊಡ್ಡ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ಒಂದು ಉತ್ತಮ ದಿನ. ಇಷ್ಟು ಅಮೆರಿಕನ್ನರಿಗೆ ಇಷ್ಟು ಬೇಗ ಲಸಿಕೆ ಹಾಕುವಲ್ಲಿ ನಾವು ಪಡೆದ ಯಶಸ್ಸಿನಿಂದ ಇದು ಸಾಧ್ಯವಾಗಿದೆ ಎಂದು ಬೈಡೆನ್ ಹೇಳಿದ್ದಾರೆ. ಇತ್ತೀಚಿನ ಸಿಡಿಸಿ ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಬೈಡೆನ್ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರಲ್ಲಿ COVID-19 ಅಪಾಯ ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿರುವ ಸ್ವಾಮಿನಾರಾಯಣ ಮಂದಿರದ ಮೇಲೆ FBI ರೇಡ್!
ನಿಮಗೆ ಸಂಪೂರ್ಣವಾಗಿ ಲಸಿಕೆ ನೀಡಿದ್ದರೆ, ನೀವು ಇನ್ನು ಮುಂದೆ ಮಾಸ್ಕ್ ಧರಿಸಬೇಕಾಗಿಲ್ಲ. ಆದರೆ ನಿಮಗೆ ಲಸಿಕೆ ನೀಡದಿದ್ದರೆ, ಅಥವಾ ನೀವು ಎರಡು-ಶಾಟ್ ಲಸಿಕೆ ಪಡೆಯುತ್ತಿದ್ದರೆ ಮತ್ತು ನಿಮ್ಮ ಮೊದಲ ಶಾಟ್ ಅನ್ನು ಮಾತ್ರ ನೀವು ಪಡೆದಿದ್ದರೆ ನೀವು ಇನ್ನೂ ಮಾಸ್ಕ್ ಧರಿಸಬೇಕು ಹೇಳಿದ್ದಾರೆ.
114 ದಿನಗಳಲ್ಲಿ 250 ಮಿಲಿಯನ್ ಲಸಿಕೆ ಡೋಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ನಾವು ಫಲಿತಾಂಶಗಳನ್ನು ನೋಡುತ್ತಿದ್ದೇವೆ. 50 ರಾಜ್ಯಗಳಲ್ಲಿ 49ರಲ್ಲಿ ಪ್ರಕರಣಗಳು ಕಡಿಮೆಯಾಗಿವೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದ ಕೂಡಲೇ, ಒಂದು ವರ್ಷದ ಹಿಂದೆ, 2020 ರ ಏಪ್ರಿಲ್‌ನಿಂದ ಆಸ್ಪತ್ರೆಗೆ ದಾಖಲಾದವರು ಕಡಿಮೆ. ಸಾವುಗಳು ಶೇಕಡಾ 80 ರಷ್ಟು ಇಳಿಕೆಯಾಗಿದೆ ಮತ್ತು 2020 ರ ಏಪ್ರಿಲ್ ನಂತರದ ಕನಿಷ್ಠ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ