ದಕ್ಷಿಣ ಕೊರಿಯಾ, ಹಾಂಕಾಂಗ್ ಹಾಗೂ ಚೀನಾದಲ್ಲಿ ಒಮಿಕ್ರೋನ್ ಆರ್ಭಟ ಕೊಂಚ ತಗ್ಗಿದೆ. ವಾರದ ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಪ್ರಕರಣಗಳು ದಾಖಲಾದ ಮೂರೂ ದೇಶಗಳಲ್ಲಿ ಭಾನುವಾರ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.
ಸಿಯೋಲ್/ ಬೀಜಿಂಗ್ (ಮಾ.21): ದಕ್ಷಿಣ ಕೊರಿಯಾ, ಹಾಂಕಾಂಗ್ ಹಾಗೂ ಚೀನಾದಲ್ಲಿ ಒಮಿಕ್ರೋನ್ ಆರ್ಭಟ ಕೊಂಚ ತಗ್ಗಿದೆ. ವಾರದ ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಪ್ರಕರಣಗಳು ದಾಖಲಾದ ಮೂರೂ ದೇಶಗಳಲ್ಲಿ ಭಾನುವಾರ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಕೊರಿಯಾದಲ್ಲಿ ಭಾನುವಾರ 3.34 ಲಕ್ಷ ದೈನಂದಿನ ಪ್ರಕರಣಗಳು ದಾಖಲಾಗಿವೆ. ಶನಿವಾರ 3.81 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು.
ಈ ನಿಟ್ಟಿನಲ್ಲಿ ಸತತ 2 ನೇ ದಿನವೂ ಕೊರೋನಾ ಸೋಂಕು ಇಳಿಕೆಯಾಗಿದೆ. ಗುರುವಾರ ಒಂದೇ ದಿನ 6.21 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇದು ಸಾರ್ವಕಾಲಿಕ ಗರಿಷ್ಠವಾಗಿತ್ತು. ಇದೇ ವೇಳೆ ಕೊರಿಯಾದಲ್ಲಿ 327 ಸೋಂಕಿತರು ಸಾವಿಗೀಡಾಗಿದ್ದಾರೆ. ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದ ಕಾರಣ ವ್ಯಾಪಾರ, ವಹಿವಾಟುಗಳ ಮೇಲಿನ ನಿರ್ಬಂಧವನ್ನು ಕೊಂಚ ಸಡಿಲಗೊಳಿಸಲು ಸರ್ಕಾರ ಮುಂದಾಗಿದೆ.
undefined
ಚೀನಾದಲ್ಲೂ ಕೊರೋನಾ ಇಳಿಕೆ: ಚೀನಾದಲ್ಲೂ ಹೊಸ ಸೋಂಕಿನ ಪ್ರಕರಣದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಭಾನುವಾರ 1,737 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಶನಿವಾರ 2,228 ಕೇಸುಗಳು ಪತ್ತೆಯಾಗಿದ್ದವು. ಇವುಗಳಲ್ಲಿ 1,656 ಕೋವಿಡ್ ಪ್ರಕರಣಗಳು ಸ್ಥಳೀಯವಾಗಿ ಹರಡಿದ ಪ್ರಕರಣಗಳಾಗಿವೆ ಎಂದು ಚೀನಾದ ಆರೋಗ್ಯ ಇಲಾಖೆ ತಿಳಿಸಿದೆ. ಆದರೆ ರೋಗಲಕ್ಷಣ ರಹಿತ ಕೋವಿಡ್ ಕೇಸುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
Covid-19 Alert : ದಿನಕ್ಕೆ 6 ಲಕ್ಷಕ್ಕೂ ಅಧಿಕ ಕೇಸ್ ಕಾಣುತ್ತಿರುವ ದಕ್ಷಿಣ ಕೊರಿಯಾ!
ಶನಿವಾರ ದಾಖಲಾದ 1,823 ಕೇಸುಗಳಿಗೆ ಹೋಲಿಸಿದರೆ ಭಾನುವಾರ 2,316 ಹೊಸ ಕೇಸುಗಳು ದಾಖಲಾಗಿವೆ. ಆದರೆ ಚೀನಾ ಇವುಗಳನ್ನು ಕೋವಿಡ್ ಪ್ರಕರಣದ ಪಟ್ಟಿಯಲ್ಲಿ ಸೇರಿಸಿಲ್ಲ. ಈವರೆಗೆ ಚೀನಾದಲ್ಲಿ 1.30 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, 4,638 ಸೋಂಕಿತರು ಸಾವಿಗೀಡಾಗಿದ್ದಾರೆ. ಶವಿನಾರ ಸುಮಾರು 1 ವರ್ಷದ ನಂತರ ಚೀನಾದಲ್ಲಿ 2 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದರು.
ಹಾಂಕಾಂಗ್‌ನಲ್ಲಿ ಇಳಿಮುಖ: ಮಾರ್ಚ್ ಆರಂಭದಲ್ಲಿ ನಿತ್ಯ 50 ಸಾವಿರ ಪ್ರಕರಣ ದಾಖಲಾಗುತ್ತಿದ್ದ ಹಾಂಕಾಂಗ್‌ನಲ್ಲಿ ಶನಿವಾರ 18,583 ಪ್ರಕರಣ ದಾಖಲಾಗಿವೆ. ಇದು ಕೋವಿಡ್ ಇಳಿಕೆ ಮುನ್ಸೂಚನೆಯಾಗಿದ್ದು, ಹಲವು ನಿರ್ಬಂಧ ಸಡಿಲಿಸಲು ಹಾಂಕಾಂಗ್ ಸರ್ಕಾರ ಮುಂದಾಗಿದೆ.
ಚೀನಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿ: ಚೀನಾ ಹಾಗೂ ದಕ್ಷಿಣ ಕೊರಿಯಾದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಚೀನಾದಲ್ಲಿ 2021 ಜನವರಿ ನಂತರ ಮೊದಲ ಬಾರಿ ಇಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ‘ದೇಶದಲ್ಲಿ ಸುಮಾರು 1 ವರ್ಷಕ್ಕೂ ಅಧಿಕ ಕಾಲ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಶನಿವಾರ ಒಂದೇ ದಿನ 2 ಸಾವುಗಳು ವರದಿಯಾಗಿವೆ. ಎರಡೂ ಸಾವುಗಳು ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಸಂಭವಿಸಿವೆ. ಮೃತಪಟ್ಟಇಬ್ಬರೂ ವ್ಯಕ್ತಿಗಳು ವೃದ್ಧರಾಗಿದ್ದು, ಅವರಲ್ಲಿ ಒಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲ’ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
Coronavirus: ಚೀನಾದಲ್ಲಿ ಕಂಟ್ರೋಲ್.. ಕೊರಿಯಾದಲ್ಲಿ ಕೊರೋನಾ ಹುಚ್ಚಾಟ
ಇದರೊಂದಿಗೆ ಈವರೆಗೆ ದೇಶದಲ್ಲಿ ಒಟ್ಟು 4,638 ಜನರು ಕೋವಿಡ್ ಸೋಂಕಿಗೆ ಬಲಿಯಾದಂತಾಗಿದೆ. ಚೀನಾದಲ್ಲಿ ಶನಿವಾರ 2,157 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ಇಳಿದಿದೆ. ಶುಕ್ರವಾರ 2388 ಕೇಸುಗಳು ದಾಖಲಾಗಿದ್ದವು. ಮಾಚ್‌ರ್ ಆರಂಭದಿಂದ ಈವರೆಗೆ ದೇಶದಲ್ಲಿ ಒಟ್ಟು 29,000 ಸಕ್ರಿಯ ಸೋಂಕಿತರು ಇದ್ದಾರೆ. ಬಹುತೇಕ ಸೋಂಕುಗಳು ಜಿಲಿನ್ ಪ್ರಾಂತ್ಯದಲ್ಲೇ ಕಂಡು ಬಂದಿದ್ದರಿಂದ ಇಲ್ಲಿ ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. 2019ರಲ್ಲಿ ಚೀನಾದ ವುಹಾನ್‌ನಲ್ಲಿ ಕೊರೋನಾ ಮಹಾಮಾರಿ ಆರಂಭವಾಗಿತ್ತು.
ಕೊರಿಯಾದಲ್ಲಿ 3.81 ಲಕ್ಷ ಕೇಸು: ಇದೇ ವೇಳೆ, ದ. ಕೊರಿಯಾದಲ್ಲಿ ಶನಿವಾರ 3.81 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ 319 ಸೋಂಕಿತರು ಬಲಿಯಾಗಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ತಗ್ಗಿದೆ. ದೇಶದಲ್ಲಿ ಶುಕ್ರವಾರ 4 ಲಕ್ಷ ಹಾಗೂ ಗುರುವಾರ 6 ಲಕ್ಷ ಕೋವಿಡ್ ಕೇಸುಗಳು ದಾಖಲಾಗಿದ್ದವು.