
ನವದೆಹಲಿ(ಮೇ.01): ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸಲು ಭಾರತ ಸರ್ಕಾರ ಎಲ್ಲಾ ಪ್ರಯತ್ನಗಳು ಮಾಡುತ್ತಿದೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಸ್ಪತ್ರೆ, ಬೆಡ್, ಆಕ್ಸಿಜನ್, ವೆಂಟಿಲೇಟರ್, ಲಸಿಕೆ, ಔಷಧಿ ಸೇರಿದಂತೆ ಹಲವು ಕೊರತೆಗಳು ತೀವ್ರವಾಗಿ ಕಾಡುತ್ತಿದೆ. ತಕ್ಷಣವೇ ಕೊರೋನಾ ಅಲೆ ನಿಯಂತ್ರಿಸಲು ಅಮೆರಿಕ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆ್ಯಂಥೋನಿ ಫೌಸಿ ಸಂಪೂರ್ಣ ಲಾಕ್‌ಡೌನ್ ಸಲಹೆ ನೀಡಿದ್ದಾರೆ.
"
ಗುಣಮುಖರಾದರೂ ಆಕ್ಸಿಜನ್ ಸಿಲಿಂಡರ್ ಮರಳಿಸುತ್ತಿಲ್ಲ ಜನ!.
ಭಾರತದಲ್ಲಿ ತಕ್ಷಣ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯವಾಗಿದೆ. ಕೆಲ ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಬೇಕು. ಇದರಿಂದ ಸೋಂಕು ಹರಡುವ ವೇಗವವನ್ನು ತಕ್ಷಣವೇ ಕಡಿಮೆ ಮಾಡಬಹುದು ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರ ವೈದ್ಯಕೀಯ ಸಲಹೆಗಾರ ಆ್ಯಂಥೋನಿ ಫೌಸಿ ಸಲಹೆ ನೀಡಿದ್ದಾರೆ.
ಭಾರತದ ಇಂಗ್ಲೀಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಫೌಸಿ ಈ ಮಹತ್ವದ ಸಲಹೆ ನೀಡಿದ್ದಾರೆ. ಮೊದಲ ಕೊರೋನಾ ವೈರಸ್ ಅಲೆಗೆ ಭಾರತ ಲೌಕ್‌ಡೌನ್ ಮಾಡೋ ಮೂಲಕ ಆರಂಭದಲ್ಲೇ ವೈರಸ್ ಹರಡುವುದನ್ನು ತಡೆಯಲಾಗಿತ್ತು. ಹೀಗಾಗಿ ಸೋಂಕಿತರ ಚಿಕಿತ್ಸೆ ಸೇರಿದಂತೆ ಯಾವ ಸಮಸ್ಯೆಯೂ ಭಾರತಕ್ಕೆ ಎದುರಾಗಿರಲಿಲ್ಲ. ಆದರೆ 2ನೇ ಅಲೆ ಈಗಾಗಲೇ ದೇಶದೆಲ್ಲೆಡೆ ಪಸರಿಸುತ್ತಿದೆ. ಮತ್ತಷ್ಟು ಆವಾಂತರಗಳನ್ನು ಮಾಡುವ ಮುನ್ನ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.
ಕೇಂದ್ರದಿಂದ ರಾಜ್ಯಗಳಿಗೆ 8873 ಕೋಟಿ SDRF ರಿಲೀಫ್ ಫಂಡ್
ದೇಶದಲ್ಲಿನ ಆಕ್ಸಿಜನ್ ಸಮಸ್ಯೆ ಬಗೆ ಹರಿಸುವುದು. ಔಷಧಿ, ಲಸಿಕೆ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲೂ ಕೆಲ ವಾರಗಳ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದ ಆ್ಯಂಥೋನಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ