ಕೊರೋನಾದಿಂದ ಚೇತರಿಸಿಕೊಂಡವರಿಗೆ ಶಾಕ್ ಕೊಟ್ಟಿದೆ ಅಧ್ಯಯನ ವರದಿ!

By Suvarna NewsFirst Published Aug 13, 2021, 10:46 AM IST
Highlights

* ಆನ್‌ಲೈನ್‌ ಸರಣಿ ಪರೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ

* ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆ

 

ಲಂಡನ್‌(ಆ.13): ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬುದ್ಧಿ ಶಕ್ತಿ ಕ್ಷೀಣಿಸುವ ಸಾಧ್ಯತೆಗಳು ಇವೆ. ಸೋಂಕಿತರಿಗೆ ಆಲೋಚನೆ ಮತ್ತು ಗಮನ ಕೇಂದ್ರೀಕರಿಸುವುದರಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಎಕ್ಲಿನಿಕಲ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ, ಕೊರೋನಾದ ಗಂಭೀರ ಸ್ವರೂಪದ ರೋಗ ಲಕ್ಷಣದಿಂದ ಚೇತರಿಸಿಕೊಂಡವರು, ಆನ್‌ಲೈನ್‌ ಸರಣಿ ಪರೀಕ್ಷೆಯ ಇತರರಿಗೆ ಹೋಲಿಸಿದರೆ ಕಡಿಮೆ ಅಂಕಗಳನ್ನು ಗಳಿಸಿರುವುದು ಹಾಗೂ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವದರಲ್ಲಿ ಹಿಂದೆ ಬಿದ್ದಿರುವುದು ಕಂಡುಬಂದಿದೆ.

ಕೊರೋನಾ ಮೆದುಳು ಮತ್ತು ಮೆದುಳಿನ ಕಾರ್ಯವೈಖರಿಯ ಮೇಲೆ ಯವ ರೀತಿಯಲ್ಲಿ ಪರಿಣಾಮ ಬೀರುತ್ತ ಎಂಬುದನ್ನು ತಿಳಿಯಲು ಸುಮಾರು 80,000 ವ್ಯಕ್ತಿಗಳ ಮೇಲೆ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಈ ವೇಳೆ ಕೊರೋನಾದಿಂದ ಮೆದುಳಿನ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಬೀರಿರುವುದು ಕಂಡುಬಂದಿದೆ. ಹೀಗಾಗಿ ಕೊರೋನಾಕ್ಕೂ ಜನರ ಆಲೋಚನಾ ಶಕ್ತಿ ಕ್ಷೀಣಿಸುವುದಕ್ಕೂ ಸಂಬಂಧ ಇದ್ದಿರಬಹುದಾದ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

click me!