* ಒಮಿಕ್ರೋನ್, ಡೆಲ್ಟಾಗೆ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಭರ್ಜರಿ ಮದ್ದು
* ಅಮೆರಿಕದ ಅಟ್ಲಾಂಟಾ ವಿವಿ ಕೈಗೊಂಡ ಸಂಶೋಧನೆಯಿಂದ ದೃಢ
* ಬೂಸ್ಟರ್ ಪಡೆದ ಶೇ.90 ಮಂದಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ
ನವದೆಹಲಿ (ಜ. 13) ವಿಶ್ವಾದ್ಯಂತ ಭಾರೀ ಆತಂಕ ಹುಟ್ಟಿಸಿದ ಒಮಿಕ್ರೋನ್ (Omicron) ಮತ್ತು ಭಾರತದಲ್ಲಿ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾತಳಿಗಳಿಗೆ (Delta) ಕೊವ್ಯಾಕ್ಸಿನ್ (Covaxin) ಲಸಿಕೆಯ ಬೂಸ್ಟರ್ ಡೋಸ್ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ. ಈ ಸಂಬಂಧ ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆಯ ಮೊದಲೆರಡು ಡೋಸ್ ಪಡೆದ 6 ತಿಂಗಳ ಬಳಿಕ ಬೂಸ್ಟರ್ ಪಡೆದವರಲ್ಲಿ ಕೊರೋನಾದ ಒಮಿಕ್ರೋನ್ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಈ ಪ್ರಕಾರ ಬೂಸ್ಟರ್ ಡೋಸ್ ಪಡೆದ ಶೇ.90ಕ್ಕಿಂತ ಹೆಚ್ಚು ಮಂದಿಯ ದೇಹದಲ್ಲಿ ವೈರಸ್ ಅನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ತನ್ಮೂಲಕ ಒಮಿಕ್ರೋನ್‌ನ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕೋವ್ಯಾಕ್ಸಿನ್‌ನ ಬೂಸ್ಟರ್ ಕಡಿಮೆ ಮಾಡಲಿದೆ ಎಂದಿದೆ.
undefined
ಲಸಿಕೆ ಪಡೆಯಲು ಮಕ್ಕಳ ಸ್ಪಂದನೆಗೆ ಮೋದಿ ಮೆಚ್ಚುಗೆ: 15ರಿಂದ 18 ವರ್ಷದೊಳಗಿನ ಮಕ್ಕಳು ವೇಗವಾಗಿ ಕೋವಿಡ್ ಲಸಿಕೆ ಪಡೆದುಕೊಳ್ಳುತ್ತಿರುವುದು ಯುವಜನತೆಯ ಜವಾಬ್ದಾರಿಯ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಪುದುಚೆರಿಯಲ್ಲಿ ಆಯೋಜಿಸಲಾಗಿರುವ 25ನೇ ಆವೃತ್ತಿಯ ರಾಷ್ಟ್ರೀಯ ಯುವ ಉತ್ಸವವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಮೂರನೇ ಅಲೆ ಆರ್ಭಟ, ಒಂದೇ ದಿನ ಇಪ್ಪತ್ತು ಸಾವಿರ ಕೇಸ್
15ರಿಂದ 18 ವರ್ಷದ ಮಕ್ಕಳು ತಾವಾಗಿಯೇ ಮುಂದೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇದು ಅವರ ಜವಾಬ್ದಾರಿಯನ್ನು ತೋರಿಸುತ್ತಿದೆ. ಮಕ್ಕಳಿಗೆ ಲಸಿಕಾರಣ ಆರಂಭವಾದಾಗಿನಿಂದ ಈವರೆಗೆ 2 ಕೋಟಿಗೂ ಅಧಿಕ ಡೋಸ್ ವಿತರಿಸಲಾಗಿದೆ. ಕೋವಿಡ್ ಲಸಿಕಾರಣಕ್ಕೆ ಯುವಕರು ಹೆಚ್ಚಿನ ವೇಗ ನೀಡಿದ್ದಾರೆ. ಇದು ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಯುವಕರಿಗೆ ಧೈರ್ಯ ತುಂಬಿದೆ. ಜೊತೆಗೆ ಯುವಕರ ನನ್ನ ಆತ್ಮವಿಶ್ವಾಸವು ಹೆಚ್ಚಾಗಿದೆ. ಇಂದು ಭಾರತ ಏನು ಹೇಳುತ್ತದೆಯೋ ಅದು ನಾಳಿನ ವಿಶ್ವದ ದನಿಯಾಗಲಿದೆ. ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಮಹಿಳೆಯರು ಮತ್ತು ಪುರುಷರು ಸಮಾನರು ಎಂಬುದಕ್ಕಾಗಿ, ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಹೆಣ್ಣುಮಕ್ಕಳಿಗೂ ಅವರ ಜೀವನ ರೂಪಿಸಿಕೊಳ್ಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಇದು ಬಹು ದೊಡ್ಡ ಹೆಜ್ಜೆ. ಇಂದು ಭಾರತದ ಜನಸಂಖ್ಯೆ ಅತಿ ದೊಡ್ಡ ಪಾಲನ್ನು ಹೊಂದಿರುವ ಯುವಕರ ಕನಸುಗಳು ದೇಶವನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯಗಳಲ್ಲಿ ಮತ್ತೆ ಕೋವಿಡ್ ಸ್ಫೋಟ: ವಿವಿಧ ರಾಜ್ಯಗಳಲ್ಲಿ ಮಂಗಳವಾರ ಅಲ್ಪ ಇಳಿಕೆ ಕಂಡಿದ್ದ ಕೋವಿಡ್ ಪ್ರಕರಣಗಳು, ಬುಧವಾರ ಮತ್ತೆ ಭಾರೀ ಪ್ರಮಾಣದಲ್ಲಿ ಸ್ಫೋಟಗೊಂಡಿದೆ. ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಜೊತೆಗೆ ಈ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಮತ್ತೆ ಹೆಚ್ಚಾಗಿದೆ.
* ಮಹಾರಾಷ್ಟ್ರ 46,723 ಶೇ.26.32 21.4%
* ದೆಹಲಿ 27,561 ಶೇ.22.86 26.22%
* ಪ. ಬಂಗಾಳ 22,155 ಶೇ.4.77 30.86%
* ಕೇರಳ 12,742 ಶೇ.28.84 17.5%
* ಉತ್ತರ ಪ್ರದೇಶ 13,681 ಶೇ.13.68 5.6%
ಅಮೆರಿಕದಲ್ಲಿ ದಾಖಲೆಯ 13.5 ಲಕ್ಷ ಕೇಸು: ವಾಷಿಂಗ್ಟನ್: ಅಮೆರಿಕದಲ್ಲಿ ಒಮಿಕ್ರೋನ್ ಅಬ್ಬರ ಮುಂದುವರೆದಿದ್ದು, ಒಂದೇ ದಿನ ಅಮೆರಿಕದಲ್ಲಿ 13.5 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ. ಇದು ವಿಶ್ವದಲ್ಲೇ ದಾಖಲಾದ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಇದೇ ದಿನ ಅತಿ ಹೆಚ್ಚು ಜನರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೇವಲ 3 ವಾರದಲ್ಲಿ ದುಪ್ಪಟ್ಟಾಗಿದೆ. ಜ.3ರಂದು ದಾಖಲಾಗಿದ್ದ 10 ಲಕ್ಷ ದೈನಂದಿನ ಪ್ರಕರಣ ಈ ಹಿಂದಿನ ದಾಖಲೆಯಾಗಿತ್ತು. ಎರಡು ವಾರಗಳಲ್ಲಿ ಅಮೆರಿಕದ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿವೆ. ಈವರೆಗೆ ಅಮೆರಿಕದಲ್ಲಿ 6.33 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 8.63 ಲಕ್ಷ ಜನರು ಸಾವಿಗೀಡಾಗಿದ್ದಾರೆ. 1.98 ಕೋಟಿ ಸಕ್ರಿಯ ಪ್ರಕರಣಗಳಿವೆ.