Viral News: ಗಗನಚುಂಬಿ ಕಟ್ಟಡದ ತುತ್ತತುದಿಯಲ್ಲಿ ದಂಪತಿಗಳ ಸೆಕ್ಸ್, ಒದ್ದು ಒಳಗೆ ಹಾಕಿ ಅಂದ್ರು ಜನ!

By Suvarna NewsFirst Published Jun 28, 2022, 10:03 PM IST
Highlights

Couple Obscene Act On The Shard: ದಂಪತಿಯನ್ನು ನಿಷೇಧಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ದಂಪತಿಗಳು ಬ್ರಿಟನ್‌ನ ಅತಿ ಎತ್ತರದ ಕಟ್ಟಡದಲ್ಲಿ ಅಶ್ಲೀಲತೆಯ ಎಲ್ಲಾ ಮಿತಿಗಳನ್ನು ದಾಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ 

ಬ್ರಿಟನ್‌ (ಜೂ. 28): ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬ್ರಿಟನ್‌ನ ಅತಿ ಎತ್ತರದ ಕಟ್ಟಡ ದಿ ಶಾರ್ಡ್‌ನಲ್ಲಿ (The Shard) ತೆರೆದ ಸ್ಥಳದಲ್ಲಿ ದಂಪತಿಗಳು ಅಶ್ಲೀಲ ಕೃತ್ಯಗಳನ್ನುಎಸಗಿದ್ದಾರೆ ಮತ್ತು ಘಟನೆಯ ವೀಡಿಯೊವನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ್ದಾರೆ. ದಂಪತಿಯ ಈ ಕೃತ್ಯಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೇ ತಕ್ಷಣ ಬಂಧಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. 

1000 ಅಡಿ ಎತ್ತರದಲ್ಲಿ ಅಶ್ಲೀಲ ಕೃತ್ಯ: ಡೈಲಿ ಸ್ಟಾರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಂಪತಿಗಳು ಅಶ್ಲೀಲ ಕೃತ್ಯಗಳನ್ನು ಮಾಡಿದ ಕಟ್ಟಡದ ಎತ್ತರ ಸುಮಾರು 1015 ಅಡಿಗಳು. ಶಾರ್ಡ್ ಕಟ್ಟಡವು ಬ್ರಿಟನ್‌ನ ಅತಿ ಎತ್ತರದ ಕಟ್ಟಡವಾಗಿದೆ. ವರದಿಯ ಪ್ರಕಾರ, ಈ ಕಟ್ಟಡವನ್ನು ನಿರ್ಮಿಸಲು 193 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕಟ್ಟಡವು ರೆಸ್ಟೋರೆಂಟ್‌ಗಳು ಮತ್ತು ವಸತಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ ನೂರಾರು ಕಚೇರಿಗಳನ್ನು ಹೊಂದಿದೆ. ಈ ಕಟ್ಟದ ಮೇಲೆ ಸೆಕ್ಸ್‌ ಮಾಡಿ ವಿಡಿಯೋ ಹರಿಬಿಟ್ಟ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತೀವ್ರವಾಗಿ ಟೀಕಿಸಿದ್ದಾರೆ.

ಜೋಡಿಯ ವಿಡಿಯೋ ವೈರಲ್: ಅಪ್‌ಲೋಡ್ ಆದ ತಕ್ಷಣ ದಂಪತಿಗಳ ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವೀಡಿಯೊ ಕ್ಲಿಪ್ ಸುಮಾರು 3 ನಿಮಿಷಗಳಷ್ಟು ಉದ್ದವಾಗಿದೆ. ಈ ವೀಡಿಯೋ ಪೋರ್ನ್‌ (Porn)ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆದ ತಕ್ಷಣ ವೈರಲ್ ಆಗಿದೆ. 

ಇದನ್ನೂ ಓದಿ:  ಶಿವಮೊಗ್ಗ, ವರದಕ್ಷಿಣೆ ಹಣ ತರದಿದ್ರೆ ಬೆತ್ತಲೆ ವಿಡಿಯೋ ಅಪ್  ಮಾಡ್ತೆನೆ..ಎಂಥಾ ಗಂಡ!

ಅಸಭ್ಯವಾಗಿ ವರ್ತಿಸಿದ ದಂಪತಿ: ಬ್ರಿಟನ್‌ನ ಅತಿ ಎತ್ತರದ ಕಟ್ಟಡದ ಮೇಲೆ ದಂಪತಿಗಳು ಬಹಿರಂಗವಾಗಿ ಇಂತಹ ಕೃತ್ಯ ಎಸಗಿದ್ದಾರೆ. ಇನ್ನು ಕಟ್ಟಡದ ಮೂಲಕ ಹಾದುಹೋಗುವ ಜನರಿಗೆ ಈ ಜೋಡಿ ಕಣ್ಣಿಗೆ ಬಿದ್ದಿರಬಹುದು. ಆದರೂ ವಿಚಿತ್ರವೆಂದರೆ ಅವರಿಬ್ಬರನ್ನೂ ಕಟ್ಟಡದಲ್ಲಿರುವ ಯಾರೂ ತಡೆದಿಲ್ಲ. 

ಸಾಮಾಜಿಕ ಮಾಧ್ಯಮದಲ್ಲಿ, ಈ ದಂಪತಿಗಳು ಮತ್ತೆ ಕಟ್ಟಡಕ್ಕೆ ಹಿಂತಿರುಗದಂತೆ ನಿಷೇಧಿಸಬೇಕೆಂದು ವ್ಯಕ್ತಿಯೊಬ್ಬರು ದಿ ಶಾರ್ಡ್‌ಗೆ ಒತ್ತಾಯಿಸಿದ್ದಾರೆ. ನಂಬಲು ಆಗುತ್ತಿಲ್ಲ, ದಂಪತಿಗಳೇಕೆ ಸಿಕ್ಕಿಬಿದ್ದಿಲ್ಲ? ಈ ವೀಡಿಯೊವನ್ನು ಪರಿಶೀಲಿಸಬೇಕು ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ದಂಪತಿ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲೂ ಜನರು ಇದನ್ನು ಮಾಡಬಹುದು ಎಂದು ನನಗೆ ನಂಬಲೂ ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. 

click me!