ದಂಪತಿಗೆ ಕಾದಿತ್ತು ಮಹಾ ಅಚ್ಚರಿ; ಮನೆ ನೆಲದಡಿಯಲ್ಲಿತ್ತು 160 ಅಡಿಯ ಬೃಹತ್ ಸುರಂಗ!

Published : Nov 29, 2026, 12:58 PM IST
Tunnel

ಸಾರಾಂಶ

ಮನೆ ಗಾರ್ಡನ್‌ನಲ್ಲಿ 160 ಅಡಿ ಉದ್ದದ ನಿಗೂಢ ಸುರಂಗವೊಂದು ಪತ್ತೆಯಾಗಿದೆ. 15 ವರ್ಷಗಳಿಂದ ಆ ಮನೆಯಲ್ಲಿದ್ದರೂ ಈ ಸುರಂಗದ ಬಗ್ಗೆ ದಂಪತಿಗೆ ಯಾವುದೇ ಮಾಹಿತಿ ಇರಲಿಲ್ಲ. ಈ ಸುರಂಗವು ಯುದ್ಧದ ಸಮಯದಲ್ಲಿ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಂಡನ್: ನೀವು ವಾಸಿಸುತ್ತಿರುವ ಸ್ಥಳ ಐತಿಹಾಸಿಕ ಹಿನ್ನೆಲೆ ಅಥವಾ ತುಂಬಾ ಹಳೆ ಮನೆಯಲ್ಲಿದ್ರೆ ಕೆಲವೊಮ್ಮೆ ಆ ಪ್ರದೇಶ ಹಲವು ಅಚ್ಚರಿಗಳಿಗೆ ಕಾರಣವಾಗುತ್ತದೆ. ಹಿರಿಯ ದಂಪತಿ ಸುಮಾರು 15 ವರ್ಷಗಳಿಂದ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆ ಮುಂಭಾಗ ಚಿಕ್ಕ ಸ್ಥಳದಲ್ಲಿ ಗಾರ್ಡನ್ ಸಹ ಮಾಡಿಕೊಂಡಿದ್ದರು. ಇತ್ತೀಚೆಗೆ ಗಾರ್ಡನಿಂಗ್ ಮಾಡುವ ಸಂದರ್ಭದಲ್ಲಿ ಭೂಮಿ ಅಗೆದಿದ್ದಾರೆ. ಈ ವೇಳೆ ಹಿರಿಯ ದಂಪತಿಗೆ ಮನೆ ಕೆಳಗಿರೋ ಸುರಂಗವೊಂದು ಕಾಣಿಸಿದೆ. ಸದ್ಯ ಈ ಸುರಂಗದ ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರೆಬೆಕ್ಕಾ ಹಾಬ್ಸನ್ ಅವರು ತಮ್ಮ ಪತ್ನಿ ಡ್ಯಾರೆನಾ ಜೊತೆಯಲ್ಲಿ ಇಂಗ್ಲೆಂಡ್‌ನ ಕೆಂಟ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿದ್ದಾರೆ. 15 ವರ್ಷಗಳಿಂದ ಈ ಮನೆಯಲ್ಲಿದ್ರೂ ದಂಪತಿಗೆ ಅಲ್ಲಿರುವ ಸುರಂಗದ ಮಾಹಿತಿ ಇರಲಿಲ್ಲ. ನೆರೆಹೊರೆಯವರು ಮತ್ತು ಸ್ಥಳೀಯರಿಂದ ಈ ಸ್ಥಳದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಕುರುಹುಗಳಿವೆ ಎಂಬ ವಿಷಯವನ್ನು ಕೇಳಿದ್ದರು.

ಮನೆಯ ಆವರಣದ ಕಲ್ಲಿನ ಸ್ಲ್ಯಾಬ್‌ ಕೆಳಗಿತ್ತು ಸುರಂಗ

ಲಾಕ್‌ಡೌನ್ ಸಮಯದಲ್ಲಿ ದಂಪತಿ ಮನೆಯಲ್ಲಿದ್ದ ಕಾರಣ ತಮ್ಮನ್ನು ಗಾರ್ಡನಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಗಾರ್ಡನ್‌ನಲ್ಲಿ ಬಹುದಿನಗಳಿಂದ ಇದ್ದ ಕಲ್ಲಿನ ಸ್ಲ್ಯಾಬ್ ತೆಗೆಯಲು ಮುಂದಾಗಿದ್ದಾರೆ. ಈ ಕಲ್ಲಿನ ಸ್ಲ್ಯಾಬ್ ತೆಗೆಯುತ್ತಿದ್ದಂತೆ ಕೆಳಭಾಗದಲ್ಲಿ ಬೃಹತ್ ಸುರಂಗ ಮಾರ್ಗವೊಂದು ಕಾಣಿಸಿದೆ.

ಸುರಂಗ ಕಾಣಿಸುತ್ತಿದ್ದಂತೆ ದಂಪತಿ, ಒಳಗೆ ಹೋಗಲು ಸರಿಯಾದ ದಾರಿಯನ್ನು ಮಾಡಿಕೊಂಡಿದ್ದಾರೆ. ನಂತರ ಸುರಂಗದೊಳಗೆ ಬೆಳಕಿನ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಸುರಂಗದೊಳಗೆ ಕೆಲವು ಪಾತ್ರೆಗಳು, ಬಾಟೆಲ್‌ಗಳು ಸಿಕ್ಕಿವೆ ಎಂದು ವರದಿಯಾಗಿದೆ. ಫೆಬ್ರವರಿ 2024ರಂದು ನ್ಯೂಯಾರ್ಕ್ ಪೋಸ್ಟ್ ಈ ಕುರಿತು ವಿಡಿಯೋ ವರದಿ ಮಾಡಿತ್ತು. ಇದೀಗ ಈ ವಿಡಿಯೋ ಮತ್ತೆ ಮುನ್ನಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸುಮಾರು 160 ಅಡಿ ಉದ್ದದ ಸುರಂಗ

ಈ ಸುರಂಗವು ಸುಮಾರು 160 ಅಡಿ ಉದ್ದವನ್ನು ಹೊಂದಿದೆ. ಆದ್ರೆ ಈ ಸುರಂಗ ಎಲ್ಲಿ ಕೊನೆಯಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. 160 ಅಡಿ ಉದ್ದದ ಬಳಿಕ ಮುಖ್ಯರಸ್ತೆಗೆ ಈ ಸುರಂಗ ಕೊನೆಯಾಗಿದೆ. ಬಹುಶಃ ಸ್ಥಳೀಯರು ಈ ಸುರಂಗದ ಮೂಲಕವೇ ಮುಖ್ಯರಸ್ತೆಯನ್ನು ತಲುಪುತ್ತಿದ್ದರು ಎಂದು ಊಹಿಸಲಾಗಿದೆ ಅಥವಾ ವಾಯುದಾಳಿ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಈ ಸುರಂಗ ಮಾಡಿಕೊಂಡಿರುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡಸರ ಕೊರತೆ: ಗಂಟೆ ಲೆಕ್ಕದಲ್ಲಿ ಪುರುಷರ ಬಾಡಿಗೆ ಪಡೀತಿರೋ ಮಹಿಳೆಯರು! ಅವರ ಕೆಲಸ ಏನು ನೋಡಿ
ಭಾರತದ ನಂ.1 ಸಿನಿಮಾ ಆಗುವತ್ತ ಹೆಜ್ಜೆ ಹಾಕಿದ ರಾಮಾಯಣ; ಇನ್ಮುಂದೆ ಇಷ್ಟೇ ಕಲೆಕ್ಷನ್ ಮಾತ್ರ ಬೇಕಾಗಿರೋದು!