
ವಾಷಿಂಗ್ಟನ್(ಜೂ.24): ವಿಶ್ವಕ್ಕೆಲ್ಲಾ ಕೊರೋನಾ ಹಬ್ಬಿಸಿದ ಕಳಂಕ ಹೊತ್ತಿರುವ ಚೀನಾ ದೇಶ, ಇದೀಗ ವೈರಸ್ ವಿರುದ್ಧ ಕಳಪೆ ಗುಣಮಟ್ಟದ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟುಟೀಕೆಗೆ ಗುರಿಯಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ ಚೀನಾ ಲಸಿಕೆಯನ್ನು ನೀಡಿದ್ದ ಹಲವು ದೇಶಗಳಲ್ಲಿ ಮತ್ತೆ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ದಾಖಲಾಗುತ್ತಿದೆ ಎಂದು ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಚೀನಾ ಸರ್ಕಾರ ಕೊರೋನಾಕ್ಕೆ ‘ಸಿನೋಫಾರ್ಮ’ ಮತ್ತು ‘ಸಿನೋವ್ಯಾಕ್’ ಎಂಬ ಲಸಿಕೆಗಳನ್ನು ಅಭಿವೃದ್ಧಿಪಡಿಸಿ ತನ್ನ ಮಿತ್ರ ದೇಶಗಳಿಗೆ ಹಂಚಿಕೆ ಮಾಡಿದೆ. ಆದರೆ, ಸೀಶೆಲ್ಸ್, ಚಿಲಿ, ಬಹ್ರೈನ್ ಮತ್ತು ಮಂಗೋಲಿಯಾದಲ್ಲಿ ಶೇ.68ರಷ್ಟುಜನರಿಗೆ ಎರಡು ಡೋಸ್ ಲಸಿಕೆಯನ್ನು ನೀಡಲಾಗಿದ್ದರೂ, ಸೋಂಕಿನ ಪ್ರಮಾಣ ಈಗಲೂ ಅಧಿಕವಾಗಿದೆ. ಈ ದೇಶಗಳು ಹೆಚ್ಚು ಕೊರೋನಾದಿಂದ ಬಾಧಿತವಾದ ಅಗ್ರ 10 ದೇಶಗಳ ಪಟ್ಟಿಯಲ್ಲಿವೆ.
ಉಗ್ರ ಹಫೀಜ್ ಸಯೀದ್ ಮನೆ ಬಳಿ ಸ್ಫೋಟ: 2 ಸಾವು, 16 ಮಂದಿಗೆ ಗಾಯ
ಸೀಶೇಲ್ಸ್ನಲ್ಲಿ 10 ಲಕ್ಷ ಜನಸಂಖ್ಯೆಗೆ 716 ಪ್ರಕರಣಗಳು ಪತ್ತೆ ಆಗುತ್ತಿವೆ. ಮಂಗೋಲಿಯಾದಲ್ಲಿ ಶೇ.52ರಷ್ಟುಜನರಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡಿದ್ದರೂ ಭಾನುವಾರ 2,400 ಹೊಸ ಪ್ರಕರಣಗಳು ಪತ್ತೆ ಆಗಿವೆ. ಅಲ್ಲದೇ, ಚೀನಾದ ಲಸಿಕೆಗಳು ರೂಪಾಂತರಿ ವೈರಸ್ ವಿರುದ್ಧ ಅಷ್ಟೇನು ಪರಿಣಾಮಕಾರಿಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಇತರ ಲಸಿಕೆಗಳಿಗೆ ಹೋಲಿಸಿದರೆ ಸಿನೋಫಾರ್ಮಾ ಲಸಿಕೆ ಕೋವಿಡ್ ವಿರುದ್ಧ ಶೇ.78ರಷ್ಟುಮತ್ತು ಸಿನೋವ್ಯಾಕ್ ಕೇವಲ 51ರಷ್ಟುಮಾತ್ರ ಪರಿಣಾಮಕಾರಿ ಆಗಿರುವುದು ಈಗ ಕಳವಳಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಈವರೆಗೆ 90 ದೇಶಗಳು ಚೀನಾದ ಲಸಿಕೆಯನ್ನು ಪಡೆದುಕೊಂಡಿವೆ. ಬಹರೇನ್ ಮತ್ತು ಯುಎಇ ದೇಶಗಳು ಕ್ಲಿನಿಕಲ್ ಪ್ರಯೋಗದ ಅಂತಿಮ ವರದಿಗೂ ಮುನ್ನವೇ ಸಿನೋಫಾರ್ಮಾ ಲಸಿಕೆಗೆ ಅನುಮೋದನೆ ನೀಡಿದ್ದವು. ಆದರೆ, ಈ ಎರಡು ದೇಶಗಳಲ್ಲಿ ಲಸಿಕೆ ಪಡೆದವರೂ ಕೂಡ ಕಾಯಿಲೆಗೆ ತುತ್ತಾಗುತ್ತಿರುವ ಬಗ್ಗೆ ವರದಿ ಆಗುತ್ತಿದೆ.
ಭಾರೀ ಅನುಮಾನ:
ಇನ್ನು ತನ್ನ ದೇಶದಲ್ಲಿ ತನ್ನದೇ ಲಸಿಕೆಯನ್ನು ನೀಡುತ್ತಿರುವ ಚೀನಾ ಸರ್ಕಾರ, ದೇಶದಲ್ಲಿನ ಒಟ್ಟಾರೆ ಸೋಂಕಿತರು ಮತ್ತು ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಲೇ ಬಂದಿದೆ. ಚೀನಾ ಸರ್ಕಾರದ ಅಂಕಿ ಅಂಶಗಳ ಅನ್ವಯ, 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದುವರೆಗೆ ಕೇವಲ 91653 ಜನರಲ್ಲಿ ಮಾತ್ರವೇ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 4636 ಜನರು ಮಾತ್ರವೇ ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ