ಕೊರೋನಾ ಮೂಲ ಪತ್ತೆ ಹಚ್ಚಿದ ಅಮೆರಿಕ ಲ್ಯಾಬೊರೇಟೊರಿ; ಚೀನಾಗೆ ನುಂಗಲಾರದ ತುತ್ತು!

Published : Jun 08, 2021, 06:00 PM IST
ಕೊರೋನಾ ಮೂಲ ಪತ್ತೆ ಹಚ್ಚಿದ ಅಮೆರಿಕ ಲ್ಯಾಬೊರೇಟೊರಿ; ಚೀನಾಗೆ ನುಂಗಲಾರದ ತುತ್ತು!

ಸಾರಾಂಶ

ಕೊರೋನಾ ವೈರಸ್ ಮೂಲ ಯಾವುದು? ಸಂಶೋಧನೆ ನಡಸಿದ ಅಮೆರಿಕ LLN ಲ್ಯಾಬೊರೇಟೊರಿ ವರದಿಯಲ್ಲಿ ವುಹಾನ್ ಲ್ಯಾಬ್‌ನಿಂದಲೇ ವೈರಸ್ ಸೋರಿಕೆ ಮಾಹಿತಿ

ಕ್ಯಾಲಿಫೋರ್ನಿಯಾ(ಜೂ.08): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸೋಂಕಿನ ಮೂಲ ಪತ್ತೆಗೆ ಎಲ್ಲಾ ದೇಶಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗ್ರಹ ಮಾಡುತ್ತಲೇ ಇದೆ. ಇದರ ನಡುವೆ ಅಮೆರಿಕ ಭಾರಿ ಮೊತ್ತ ವ್ಯಯಿಸಿ ಮೂಲ ಪತ್ತೆ ಮಾಡುತ್ತಿದೆ. ಸಂಶೋಧಕರು, ವಿಜ್ಞಾನಿಗಳು, ತಜ್ಞರು ಸತತ ಅಧ್ಯಯನ ನಡೆಸುತ್ತಿದ್ದಾರೆ. ಈ ಎಲ್ಲಾ ಅಧ್ಯಯನ ವರದಿಗಳು ಕೊನೆಗೆ ಬೊಟ್ಟು ಮಾಡುತ್ತಿರುವುದು ಚೀನಾದ ಕಡೆ. ಇದೀಗ ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್‌ಮೊರ್ ನ್ಯಾಶನಲ್ ಲ್ಯಾಬೊರೇಟೊರಿ(LLNL) ಅಧ್ಯಯನ ವರದಿಯಲ್ಲಿ ವೈರಸ್ ವುಹಾನ್ ಲ್ಯಾಬ್‌ನಿಂದ ಸೋರಿಕೆಯಾಗಿದೆ ಅನ್ನೋದು ಪತ್ತೆಯಾಗಿದೆ.

ಚೀನಾದಲ್ಲೇ ವೈರಸ್ ಸೃಷ್ಟಿ, ಸಿಕ್ತು ಹೊಸ ಸಾಕ್ಷ್ಯ: ತಜ್ಞರ ಸ್ಫೋಟಕ ವರದಿ!...

ಅಮೆರಿಕ ಸರ್ಕಾರ ಸಹಯೋಗದಲ್ಲಿ LLNL 2020ರ ಮೇ ತಿಂಗಳಿನಿಂದ ವೈರಸ್ ಮೂಲ ಪತ್ತೆ ಅಧ್ಯಯನ ನಡೆಸಿದೆ. ಸತತ ಸಂಶೋಧನೆ, ತನಿಖೆ ಸೇರಿದಂತೆ ಹಲವು ಹಂತಗಳಲ್ಲಿ ಮಾಹಿತಿ ಕಲೆಹಾಕಿದೆ. ಇದೀಗ ಈ ವರದಿಯ ಸಾರಾಂಶವನ್ನು ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದೆ. ಇದರಲ್ಲಿ ವುಹಾನ್ ಲ್ಯಾಬ್‌ನಿಂದ ಕೊರೋನಾ ವೈರಸ್ ಸೋರಿಕೆಯಾಗಿದೆ. ಇದು ಚೀನಾದ ಕೂಸು ಎಂದಿದೆ.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೊರೋನಾ ವೈರಸ್ ಮೂಲ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.  ಅಮೆರಿಕ ಗುಪ್ತಚರ ಇಲಾಖೆ ಕೂಡ ಚೀನಾದ ಲ್ಯಾಬ್‌ನಿಂದ ವೈರಸ್ ಲೀಕ್ ಆಗಿರುವ ಕುರಿತು ಹಲವು ಮಾಹಿತಿಗಳನ್ನು ನೀಡಿದೆ. ಇದಕ್ಕೆ ಪೂರಕವಾಗಿ ವೈರಸ್ ವಿಶ್ವಕ್ಕೆ ಹರಡುವ ಮುನ್ನ ಅಂದರೆ 2019ರ ನವೆಂಬರ್ ತಿಂಗಳಲ್ಲೇ ವುಹಾನ್ ಲ್ಯಾಬ್ ಸಿಬ್ಬಂದಿಗಳು ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲಾಗಿರುವ ದಾಖಲೆಗಳು ಬಹಿರಂಗವಾಗಿದೆ

ಚೀನಾ ಲ್ಯಾಬ್‌ನಿಂದ ಕೊರೋನ ಸ್ಫೋಟ; ಸಂಶೋಧಕರು ಆಸ್ಪತ್ರೆ ದಾಖಲಾಗಿದ್ದ ಮಾಹಿತಿ ಬಹಿರಂಗ!

ಇದೀಗ ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದ LLNL ಅಧ್ಯಯನ ವರದಿ ಕೂಡ ವುಹಾನ್‌ನತ್ತ ಬೆರಳು ತೋರಿಸುತ್ತಿದೆ. ಆದರೆ ಮಾಧ್ಯಮದ ವರದಿಗೆ ಪ್ರತಿಕ್ರಿಯೆ ನೀಡಲು LLNL ನಿರಾಕರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!
ಆರೋಪ ಸಾಬೀತು : ಪಾಕ್‌ ಐಎಸ್‌ಐ ಮಾಜಿ ಮುಖ್ಯಸ್ಥ ಹಮೀದ್‌ಗೆ 14 ವರ್ಷ ಜೈಲು