ಸ್ಥಳಾಂತರಕ್ಕೆ ಒಪ್ಪದ ಪಾಕಿಸ್ತಾನ: ತುಪಕ್ ಅಂತಾ ಉಗಿತಾರ್ವೆ ಜನ!

Published : Feb 02, 2020, 03:46 PM ISTUpdated : Feb 02, 2020, 03:57 PM IST
ಸ್ಥಳಾಂತರಕ್ಕೆ ಒಪ್ಪದ ಪಾಕಿಸ್ತಾನ: ತುಪಕ್ ಅಂತಾ ಉಗಿತಾರ್ವೆ ಜನ!

ಸಾರಾಂಶ

ಸಾಯೋದಾದ್ರೆ ಅಲ್ಲೇ ಸಾಯಿರಿ, ತನ್ನ ದೇಶದ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲು ನಿರಾಕರಿಸಿದ ಪಾಕಿಸ್ತಾನ| ಅವರನ್ನು ಕರೆತಂದ್ರೆ ಕಾಡಿಗೆ ಹಚ್ಚಿದ ಬೆಂಕಿಯಂತೆ ವೈರಸ್ ಹರಡುತ್ತೆ ಎಂದ ಪಾಕ್ ಆರೋಗ್ಯ ಸಚಿವ| ತನ್ನ ದೇಶದ ನಾಗರಿಕರ ಸುರಕ್ಷತೆ ಮಾಡೋದು ಹೇಗೆಂದು ಭಾರತವನ್ನು ನೋಡಿ ಕಲೀರಿ| ಸರ್ಕಾರದ ನಡೆಗೆ ತುಪುಕ್ ಎಂದು ಉಗಿದ ವಿದ್ಯಾರ್ಥಿಗಳು

ವುಹಾನ್[ಫೆ.02]: ಕೊರೋನಾ ವೈರಸ್ ನಿಂದಾಗಿ ಚೀನಾದ ವುಹಾನ್ ನಿಂದಾಗಿ ಪಾಕಿಸ್ತಾನದ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಆದರೆ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಅವರನ್ನು ಮರಳಿ ಕರೆಸಿಕೊಳ್ಳುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ಸರ್ಕಾರದ ನಿರ್ಲಕ್ಷ್ಯದಿಂದ ಈ ವಿದ್ಯಾರ್ಥಿಗಳು ಅಸಹಾಯಕರಾಗಿದ್ದಾರೆ. ಹೀಗಿರುವಾಗ ಪಾಕಿಸ್ತಾನದ ವಿದ್ಯಾರ್ಥಿಗಳು ಇಮ್ರಾನ್ ಖಾನ್ ಸರ್ಕಾರದ ನಡೆಗೆ ಬೇಸತ್ತು ನಿಂದಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಕೊರೋನಾ ಭೀತಿ: ಮೂಕ ಪ್ರಾಣಿಗಳನ್ನು ಬೀದಿಗೆಸೆಯುತ್ತಿದ್ದಾರೆ ಜನ!

ಹೌದು ಪಾಕಿಸ್ತಾನ ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತ ವಿದ್ಯಾರ್ಥಿಗಳು ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಭಾರತೀಯ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಮರಳುತ್ತಿರುವುದನ್ನು ನೋಡಿ ಪಾಕಿಸ್ತಾನದ ವಿದ್ಯಾರ್ಥಿ ಸರ್ಕಾರದ ನಡೆಯನ್ನು ಟೀಕಿಸುತ್ತಿರುವ ದೃಶ್ಯಗಳಿವೆ. 

ಪಾಕಿಸ್ತಾನ ಪತ್ರಕರ್ತೆ ನಾಯ್ಲಾ ಇನಾಯತ್ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಇವರೆಲ್ಲಾ ಭಾರತೀಯ ವಿದ್ಯಾರ್ಥಿಗಳು, ತಮ್ಮ ದೇಶದ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆಸಿಕೊಳ್ಳಲು ಅವರ ರಾಯಭಾರಿ ಕಚೇರಿ ಬಸ್ ಕಳುಹಿಸಿದೆ. ವುಹಾನ್ ವಿಶ್ವವಿದ್ಯಾನಿಲಯದ ಆವರಣದಿಂದ ವಿಮಾನ ನಿಲ್ದಾಣಕ್ಕೆ ಈ ಬಸ್ ತೆರಳಲಿದೆ. ಬಳಿಕ ಅಲ್ಲಿಂದ ಅವರು ತಮ್ಮ ಮನೆಗೆ ವಾಪಾಸಾಗುತ್ತಾರೆ. ಇಂದು ರಾತ್ರಿ ಬಾಂಗ್ಲಾದೇಶದ ವಿದ್ಯಾರ್ಥಿಗಳೂ ಹೊರಡುತ್ತಾರೆ ಎಂದಿದ್ದಾನೆ.

ವುಹಾನ್‌ನಿಂದ ಬಂದ ಭಾರತೀಯರಿಂದ ಆರೋಗ್ಯ ಶಿಬಿರದಲ್ಲಿ ಡ್ಯಾನ್ಸ್!

ಆದರೆ ಈ ನಡುವೆ ಕೇವಲ ನಾವು, ಪಾಕಿಸ್ತಾನದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದೇವೆ. ನಮ್ಮ ಸರ್ಕಾರ ನಿಶ್ಚಿಂತೆಯಿಂದ ಇದೆ. ನೀವು ಬದುಕಿರಿ ಅಥವ ಸಾಯಿರಿ, ಸೋಂಕು ತಗುಲಲಿ, ಬಿಡಲಿ ನಿಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು, ಇದಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡುವುದಿಲ್ಲ ಎನ್ನುತ್ತಿದೆ. ನಿಮಗೆ ನಾಚಿಕೆಯಾಗಬೇಕು. ತಮ್ಮ ದೇಶದ ನಾಗರಿಕರಿಗೆ ಹೇಗೆ ರಕ್ಷಣೆ ಒದಗಿಸಬೇಕು, ಸಹಾಯ ಮಾಡಬೇಕು ಎಂಬುವುದನ್ನು ಭಾರತವನ್ನು ನೋಡಿ ಕಲಿಯಬೇಕು ಎಂದಿದ್ದಾನೆ. 

ಪಾಖಿಸ್ತಾನದ ಆರೋಗ್ಯ ಸಚಿವ ಚೀನಾದಲ್ಲಿರುವ ತಮ್ಮ ದೇಶದ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ 'ಒಂದು ವೇಳೆ ನಾವು ಅಲ್ಲಿರುವ ನಮ್ಮವರನ್ನು ಕರೆಸಿಕೊಳ್ಳುವ ಬೇಜವಾಬ್ದಾರಿಯುತ ಕೆಲಸ ಮಾಡಿದರೆ, ಈ ವೈರಸ್ ಕಾಡಿಗೆ ತಗುಲಿದ ಬೆಂಕಿಯಂತೆ ಇಡೀ ದೇಶಕ್ಕೇ ಹಬ್ಬಿಕೊಳ್ಳುತ್ತದೆ' ಎಂಖದಿದ್ದಾರೆ. ಅಲ್ಲದೇ ಪಾಕಿಸ್ತಾನ ಫೆಬ್ರವರಿ 2 ರಿಂದ ಚೀನಾಗೆ ತೆರಳುವ ಹಾಗೂ ಅಲ್ಲಿಂದ ಪಾಕಿಸ್ತಾನಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಪೇನ್‌ನಲ್ಲಿ ರೈಲು ಅಪಘಾತಕ್ಕೆ 39 ಬಲಿ, 150 ಜನ ಗಂಭೀರ
ಭಾರತದ ರಾಜಕೀಯ ಮೀಸಲು ವ್ಯವಸ್ಥೆಗೆ ದಾವೋಸಲ್ಲಿ ಶಭಾಸ್‌