ಸಮುದ್ರ ಆಹಾರ ಪ್ಯಾಕೆಜಿಂಗ್‌ನಲ್ಲಿ ಕೊರೋನಾ ಪತ್ತೆ, ಚೀನಾಕ್ಕೆ ಏನ್ ಹೇಳೋದು ಮತ್ತೆ!

By Suvarna News  |  First Published Aug 11, 2020, 6:02 PM IST

ಸಮುದ್ರ ಆಹಾರದ ಪ್ಯಾಕೇಜಿಂಗ್ ನಲ್ಲಿ ಕೊರೋನಾ ವೈರಸ್/ ಚೀನಾದಲ್ಲಿಯೇ ವೈರಸ್ ಸುತ್ತಾಟ/  ಡಾಲೀನ್ ಸಮುದ್ರ ತೀರದಿಂದ ಬಂದ ಆಹಾರ/ ಶೀಥಲೀಕರಣಗೊಂಡು ಬಂದಿದ್ದ ಆಹಾರದಲ್ಲಿ ಮಾರಕ ವೈರಸ್


ಶಿವಮೊಗ್ಗ(ಆ. 11) ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದರೆ ಅದು ಹೊಸ ಸುದ್ದಿ ಏನಲ್ಲ ಬಿಡಿ. ಡಾಲೀನ್ ಸಮುದ್ರ ತೀರದಿಂದ ಪ್ಯಾಕ್ ಆಗಿ ಬಂದಿದ್ದ ಸಮುದ್ರ ಆಹಾರದಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಚೀನಾದ ಅಧಿಕಾರಿಗಳು  ತಿಳಿಸಿದ್ದಾರೆ. 

ಯಂತೈ  ನಗರದ ಕಂಪನಿ ಖರೀದಿ ಮಾಡಿದ ಶೀತಲೀಕರಣಗೊಂಡ ಸಮುದ್ರ ಆಹಾರದ ಪ್ಯಾಕೇಜಿಂಗ್ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಹೀಗೆ ಆಗುತ್ತಿರುವುದು ಇದು ಎರಡನೇ ಸಾರಿ. ಶಾಂಡೋಗ್ ಪ್ರಾಂತ್ಯದಿಂದ ಆಹಾರ ತರಿಸಿಕೊಳ್ಳಲಾಗಿತ್ತು. 

Tap to resize

Latest Videos

ವರ್ಷಾಂತ್ಯಕ್ಕೆ ಕೊರೋನಾಕ್ಕೆ ಲಸಿಕೆ, ಏನಿದರ ವಿವರ?

ಯಂತೈ ಆಡಳಿತ ಈ ಬಗ್ಗೆ ಹೇಳಿಕೆ ನೀಡಿದ್ದು, ಸಮುದ್ರ ಆಹಾರ ಹೊತ್ತ ಹಡಗು ಡಾಲೀನ್ ನಗರದ ಬಂದರಿನಲ್ಲಿ ನಿಂತರೂ ಎಲ್ಲಿಂದ ಈ ಫುಡ್ ಪ್ಯಾಕೇಟ್ ಹಗಡಿಗೆ ಹಾಕಾಲಿದೆ ಎಂಬ ವಿವರ ಸರಿಯಾಗಿ ಲಭ್ಯವಾಗಿಲ್ಲ. 

ಈಕ್ವೆಡಾರ್ ನಿಂದ ಆಮದು ಮಾಡಿಕೊಂಡಿದ್ದ ಆಹಾರಗಳಲ್ಲಿ ಜುಲೈ ವೇಳೆ ಕೊರೋನಾ ವೈರಸ್ ಪತ್ತೆಯಾಗಿತ್ತು. ಇದಾದ ಮೇಲೆ ಚೀನಾ ಅಲ್ಲಿಂದ ಆಮದು ನಿಲ್ಲಿಸಿತ್ತು.

ಸಮುದ್ರ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರವಾಗುವ ಚೀನಾದ ವುಹಾನ್ ಮಾರುಕಟ್ಟೆಯಿಂದಲೇ ಕೊರೋನಾ ಹುಟ್ಟಿಕೊಂಡಿದ್ದು ಎಂಬುದರ ಬಗ್ಗೆ ಅನೇಕ ದಾಖಲೆಗಳು ಸಿಕ್ಕಿವೆ.  ಒಟ್ಟಿನಲ್ಲಿ ಚೀನಾದಿಂದ ಹುಟ್ಟಿಕೊಂಡ ವೈರಸ್ ಇಡೀ ಜಗತ್ತನ್ನು ಕಾಡುತ್ತಿದ್ದರೆ ಮತ್ತೆ ಚೀನಾ ಸಮುದ್ರ ಆಹಾರ ಭಕ್ಷಣೆಗೆ ಮುಂದೆ ನಿಂತಿದೆ.

"

click me!