ಮೂರು ದಿನದಲ್ಲಿ ಎರಡು ಬಾರಿ ಜ್ವಾಲಾಮುಖಿ ಸ್ಫೋಟ, ಎಲ್ಲೆಲ್ಲೂ ಧೂಳು!

By Suvarna NewsFirst Published Aug 10, 2020, 9:18 PM IST
Highlights

 2020 ರಲ್ಲಿ ಮುಗಿಯದ ಅನಾಹುತಗಳು/ ಇಂಡೋನೇಷಿಯಾದಲ್ಲಿ ಜ್ವಾಲಾಮುಖಿ ಸ್ಫೋಟ/  5000 ಅಡಿ ಎತ್ತರದವರೆಗೂ ಹೊಗೆ ಮತ್ತು ಬೂದಿ/ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕೆಲಸ

ಜಕಾರ್ತ( ಆ 10) 2020 ರಲ್ಲಿ ಒಂದಾದ ಮೇಲೆ ಒಂದು ಅನಾಹುತಗಳು ಸಂಭವಿಸುತ್ತಲೆ ಇವೆ.  ಇಂಡೋನೇಷಿಯಾದಲ್ಲಿ  ಜ್ವಾಲಾಮುಖಿ ಸ್ಫೋಟವಾಗಿದೆ.  5000 ಅಡಿ ಎತ್ತರದವರೆಗೂ ಹೊಗೆ ಮತ್ತು ಬೂದಿ ಅವರಿಸಿದ್ದು ಆತಂಕ ಸೃಷ್ಟಿಸಿದೆ.

ಇಂಡೋನೇಷಿಯಾದ ಸುಮಾತ್ರಾ ದ್ವೀಪದ ಮೌಂಟ್​​ ಸಿನಾಬಂಗ್ ನಲ್ಲಿ ಸೋಮವಾರ ಜ್ವಾಲಾಮುಖಿ ಸ್ಫೋಟವಾಗಿದೆ. ಶನಿವಾರದಿಂದ ಸಂಭವಿಸಿದ ಎರಡನೇ ಜ್ವಾಲಾಮುಖಿ ಸ್ಫೋಟ ಇದು.

ಲೆಬನಾನ್ ಸ್ಫೋಟಕ್ಕೆ ಅಸಲಿ ಕಾರಣ ಏನು?

2010ರಿಂದಲೂ  ಈ ಜ್ವಾಲಾಮುಖಿ ಆಗಾಗ ಲಾವಾರಸ ಉಗುಳುತ್ತಲೇ ಇದೆ. ಮೌಂಟ್​​ ಸಿನಾಬಂಗ್ ಜ್ವಾಲಾಮುಖಿ 2016ರಲ್ಲಿ ಸ್ಫೋಟಿಸಿತ್ತು. ಮೂರು ವರ್ಷಗಳ ಬಳಿಕ ಮತ್ತೆ 2019ರಲ್ಲೂ ಮತ್ತೆ ಜ್ವಾಲಾಮುಖಿ ಸ್ಫೋಟಗೊಂಡಿತ್ತು.

ಗ್ರಾಮಗಳಲ್ಲಿ ಜ್ವಾಲಮುಖಿಯ ಧೂಳು ಆವರಿಸಿದ್ದು, ಮುಂಜಾಗ್ರತ್ರಾ ಕ್ರಮವಾಗಿ ಸ್ಥಳೀಯ ಆಡಳಿತ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಕೆಲಸ ಆಗುತ್ತಿದೆ. 

2014ರಲ್ಲಿ ಉಂಟಾದ ಸ್ಫೋಟದಲ್ಲಿ 16 ಮಂದಿ ಬಲಿಯಾಗಿದ್ದರು.  2016ರಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟ ಏಳು ಜನರ ಜೀವ ಪಡೆದಿತ್ತು. 2019ರಲ್ಲಿ ಸಂಭವಿಸಿದ  ಸ್ಫೋಟದ ವೇಳೆ ಮುಂಜಾಗೃತೆ ತೆಗೆದುಕೊಳ್ಳಲಾಗಿತ್ತು. 

click me!