ಕೊರೋನಾ ವೈರಸ್ ಹರಡುವ ಭೀತಿ| ಸಿನಿಮಾ, ಧಾರಾವಾಹಿಗಳಿಂದ ಕಿಸ್ಸಿಂಗ್ ದೃಶ್ಯಗಳು ಔಟ್| ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದ ನೂತನ ನಿಯಮ
ತೈವಾನ್[ಫೆ.10]: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ವೈರಸ್ ನಿಂದಾಗಿ ತೈವಾನ್ ನ ಧಾರಾವಾಹಿ ಹಾಗೂ ಸಿನಿಮಾಗಳಿಂದ ಕಿಸ್ಸಿಂಗ್ ದೃಶ್ಯವನ್ನು ತೆಗೆದು ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಚೀನಾದಲ್ಲಿ ಈ ಮಾರಕ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 900ಕ್ಕೇರಿಯಾಗಿದ್ದು, 37 ಸಾವಿರಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಯುನೈಟೆಡ್ ಡೈಲಿ ವರದಿಯನ್ವಯ ಕೊರೋನಾ ವೈರಸ್ ಅಪಾಯವನ್ನು ಗಮನಿಸಿ ತೈವಾನ್ ನಲ್ಲಿ ಪ್ರಸಾರವಾಗುವ ಧಾರಾವಾಹಿ ಹಾಗೂ ಸಿನಿಮಾಗಳ ಕಿಸ್ಸಿಂಗ್ ಸೀನ್ ಶೂಟಿಂಗ್ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ನಟ, ನಟಿಯರಿಗೂ ತುಂಬಾ ಆತ್ಮೀಯವಾಗಿ ಕಾಣಿಸಿಕೊಳ್ಳುವ ದೃಶ್ಯಗಳಲ್ಲಿ ನಟಿಸದಂತೆ ಸರ್ಕಾರ ಎಚ್ಚರಿಸಿದೆ.
ಕೊರೋನಾ ವೈರಸ್ ಭೀತಿ: ಚೀನಿಯರ ಭಾರತ ಪ್ರವೇಶ ನಿರ್ಬಂಧ!
ಇನ್ನು ತೈವಾನ್ ನ ಪ್ರಸಿದ್ಧ ಧಾರವಾಹಿ ಗೋಲ್ಡನ್ ಸಿಟಿಯ ಕಲಾವಿದರಾದ ಮಿಯಾ ಚಿವು ಹಾಗೂ ಜೂನ್ ಫೂ ಹಲವಾರು ಬಾರಿ ನಿಕಟವಾಗಿರುವ ದೃಶ್ಯ, ಕಿಸ್ಸಿಂಗ್ ಸೀನ್ ಮೊದಲಾದವುಗಳಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಕೊರೋನಾ ವೈರಸ್ ಹರಡುವ ಭೀತಿಯಿಂದಾಗಿ ಇಂತಹ ದೃಶ್ಯದಿಂದ ದೂರ ಉಳಿಯುವಂತೆ ಇಬ್ಬರಿಗೂ ಖಡಕ್ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಕೊರೋನಾ ತಡೆಗಟ್ಟಲು ತನ್ನಿಂದ ಏನೆಲ್ಲಾ ಸಾಧ್ಯವೋ ತಾನದನ್ನು ಮಾಡುವುದಾಗಿ ನಟಿ ಹೇಳಿದ್ದಾರೆ.
ಕೊರೋನಾ ಅಬ್ಬರ, ಒಂದೇ ದಿನದಲ್ಲಿ 89 ಸಾವು
ರಾಷ್ಟ್ರೀಯ ಆರೋಗ್ಯ ಆಯೋಗ ಈ ಸಂಬಂಧ ಮಾಹಿತಿ ನೀಡುತ್ತಾ ಒಂದೇ ದಿನದಲ್ಲಿ ಬರೋಬ್ಬರಿ 89 ಮಂದಿ ಮೃತದ್ದು, 656 ಮಂದಿ ಸೋಂಕಿಗೀಡಾಗಿದ್ದಾರೆಂದು ತಿಳಿಸಿದೆ. ಚೀನಾದ ವುಹಾನ್ ನಿಂದ ಹರಡಿರುವ ಈ ಮಾರಕ ವೈರಸ್ ಸದ್ಯ ಜಗತ್ತಿನ ವಿವಿಧ ದೇಶಗಳಿಗೆ ವ್ಯಾಪಿಸಿದೆ. ಭಾರತದ ಮೂವರೂ ಈ ವೈರಸ್ ನಿಂದ ಬಳಲುತ್ತಿದ್ದಾರೆ.
ಕೊರೋನಾದಿಂದ ಕನ್ನಡಿಗರ ಪಾರು ಮಾಡಿದ ಚೀನಾ ಹೊಸವರ್ಷ!
ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ