
ಚೀನಾದಲ್ಲಿ ಕೊರೋನಾ ವೈರಸ್ ಭೀತಿ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಚೀನಾ ಸರ್ಕಾರ ಹರ ಸಾಹಸ ಪಡುತ್ತಿದೆ. ಬರೀ 10 ದಿನದಲ್ಲಿ ಬೃಹತ್ ಆಸ್ಪತ್ರೆಯನ್ನೇ ನಿರ್ಮಿಸಿದೆ. ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೊರೋನಾ ಸೋಂಕಿತರು ಗುಣ ಮುಖವಾಗಲೆಂದು ಪ್ರಾರ್ಥಿಸಲು ಮಸೀದಿಗೆ ತೆರಳಿದ್ದರು ಎನ್ನುವ ಸಂದೇಶ ವೈರಲ್ ಆಗುತ್ತಿದೆ.
Fact Check: ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ಸುಟ್ಟರಾ?
ಸಿಸಿಟಿವಿ ಮೀಡಿಯಾ ಎನ್ನುವ ಲೋಗೋದೊಂದಿಗೆ ಕ್ಸಿ ಜಿನ್‌ಪಿಂಗ್ ಮಸೀದಿಯಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿ ಹೀಗೆ ಹೇಳಲಾಗಿದೆ. ಕೆಲವರು ಈ ಫೋಟೋ ಪೋಸ್ಟ್ ಮಾಡಿ,‘ ಚೀನಾ ಅಧ್ಯಕ್ಷ ಕ್ಸಿ ಮಸೀದಿಗೆ ಭೇಟಿ ನೀಡಿ ಚೀನಾವನ್ನು ಕೊರೋನಾದಿಂದ ರಕ್ಷಿಸುವಂತೆ ಬೇಡಿಕೊಂಡಿದ್ದಾರೆ’ ಎಂದು ಒಕ್ಕಣೆ ಬರೆದಿದ್ದಾರೆ.
ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ಈಗ ಕ್ಸಿ ಅವರು ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರೇ ಎಂದು ಬೂಮ್ ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ವೈರಲ್ ಆಗಿರುವ ಫೋಟೋ 4 ವರ್ಷ ಹಳೆಯದು ಎಂಬ ಸತ್ಯ ತಿಳಿದುಬಂದಿದೆ.
ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಸಿಸಿಟಿವಿ ವಿಡಿಯೋ ನ್ಯೂಸ್ ಏಜೆನ್ಸಿ ವೆಬ್‌ಸೈಟ್‌ನಲ್ಲಿ ಮೂಲ ವಿಡಿಯೋ ಪತ್ತೆಯಾಗಿದೆ. 2016 ಜುಲೈನಲ್ಲಿ ಚೀನಾ ಅಧ್ಯಕ್ಷಿ ಕ್ಸಿ ಅವರು ಟವರ್ ಆಫ್ ನಾಥ್ ವೆಸ್ಟ್‌ನ ಮಸೀದಿಗೆ ಭೇಟಿ ನೀಡಿದ್ದರು. ಅದೇ ಫೋಟೋವನ್ನು ಈಗ ಪೋಸ್ಟ್ ಮಾಡಿ, ಕೊರೋನಾ ವೈರಸ್ ಭೀತಿ ಹಿನ್ನೆಲೆ ದೇಶವನ್ನು ರಕ್ಷಿಸುವಂತೆ ಕೋಟಿ ಮಸೀದಿಗೆ ಭೇಟಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ