
ನವದೆಹಲಿ(ಮೇ 14) ಕೊರೋನಾ ಚಿಕಿತ್ಸೆ ಆಕ್ಸಿಜನ್ ಗಾಗಿ ಕೇಂದ್ರ ಸರ್ಕಾರ ಸ್ನೇಹಿತ ರಾಷ್ಟ್ರಗಳಿಂದ ನೆರವು ಪಡೆದುಕೊಳ್ಳುತ್ತಲೇ ಇದೆ. ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಮತ್ತು ಸಿಂಗಪುರ್ ಸಚಿವ ವಿವಿಯನ್ ಬಾಲಕೃಷ್ಣನ್ ನಡುವೆ ಈ ವಿಚಾರ ಮತ್ತೆ ಚರ್ಚೆಯಾಗಿದ್ದು ಸಿಂಗಪುರ್ ಭಾರತದ ನೆರವಿಗೆ ಧಾವಿಸಿದೆ.
ಇಬ್ಬರು ಸಚಿವರ ನಡುವೆ ಮೊದಲು ದೂರವಾಣಿ ಸಂಭಾಷಣೆ ನಡೆದಿದ್ದು ನಂತರ ಮೂರು ಲೈನ್ ಮೆಸೇಜ್ ರವಾನೆಯಾಗಿದೆ. ಆಕ್ಸಿಜನ್ ಪೂರೈಕೆ ಸಂಬಂಧ ಮಾತುಕತೆಯಾಗಿದ್ದು ಸಿಂಗಪುರ್ ನೀಡುತ್ತೇನೆ ಎಂದು ಒಪ್ಪಿಕೊಂಡಿದೆ. ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರ ಜತೆ ಮಾತನಾಡಿದ ಜೈಶಂಕರ್ ಭಾರತೀಯ ಸೇನೆ ನೆರವಿನಿಂದಿಗೆ ಸಿಂಗಪುರ್ ನಿಂದ ನಾಲ್ಕು ಕ್ರಯೋನಿಕ್ ಟ್ಯಾಂಕ್ ಗಳನ್ನು ತರಲು ತೀರ್ಮಾನಿಸುವಂತೆ ಕೇಳಿಕೊಂಡಿದ್ದಾರೆ. ಉತ್ತರ ಮತ್ತು ಪಶ್ಚಿಮ ಭಾರತದ ಕೊರೋನಾ ನಿರ್ವಹಣೆಗೆ ಈ ಆಕ್ಸಿಜನ್ ಬಳಕೆಗೆ ನಿರ್ಧಾರ ಮಾಡಲಾಗಿತ್ತು.
ಭಾರತೀಯ ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಜತೆ ಮಾತನಾಡಿರುವ ರಾಜನಾಥ್ ಸಿಂಗ್ ಅಗತ್ಯಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ. ಇದಾದ ನಂತರ ಸಿಂಗಪುರ್ ನಿಂದ ಆಕ್ಸಿಜನ್ ಪಶ್ಚಿಮ ಬಂಗಾಳಕ್ಕೆ ಬಂದಿಳಿದಿದೆ.
ಸಮುದ್ರ ಸೇತು; ಕುವೈತ್ ನಿಂದ ಬಂತು ಆಕ್ಸಿಜನ್
ರೈಲ್ವೆ ಮಾರ್ಗದಲ್ಲಿ ಇಲ್ಲಿಂದ ಅಗತ್ಯ ಇರುವ ಕಡೆಗೆ ರವಾನೆಯಾಗಿದೆ. ಸಿಂಗಪುರದಲ್ಲಿರುವ ಭಾರತದ ಹೈಕಮಿಷನರ್ ಪಿ ಕುಮಾರನ್ ಸಹ ತಮ್ಮದೇ ಆದ ಪ್ರಯತ್ನ ಮಾಡಿದ್ದಾರೆ.
ಏಪ್ರಿಲ್ 29 ರಂದೇ ರಾಜನಾಥ್ ಸಿಂಗ್ ಮಾತನಾಡಿದ್ದರು. ಇದಾದ ಮೇಲೆ ಕ್ಷಿಪ್ರವಾಗಿ ಹೆಜ್ಜೆಗಳನ್ನು ಇಡಲಾಯಿತು. C-17, IL-76, C-130 ಮೂಲಕ ಆಮ್ಲಜನಕ ಭಾರತಕ್ಕೆ ಬಂದಿಳಿಯಿತು.
ಇನ್ನೊಂದು ವಿಶೇಷ ಎಂಧರೆ ಸಿಂಗಾಪುರ್ ತನ್ನದೇ ಆದ ಎರಡು ವಾಯುಪಡೆಯ ವಿಮಾನಗಳನ್ನು ಕಳಿಸಿಕೊಟ್ಟಿತು. ಸಿಂಗಾಪುರದ ತೆಮಾಸೆಕ್ ಫೌಂಡೇಶನ್, ಹಲವಾರು ಸಿಂಗಾಪುರದ ಕಂಪನಿಗಳ ಸಹಭಾಗಿತ್ವದಲ್ಲಿ, 8000 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳು, 51000 ಆಕ್ಸಿಮೀಟರ್ಗಳು, 900 ಕ್ಕೂ ಹೆಚ್ಚು ಬೈಪಾಪ್ ಯಂತ್ರಗಳು ಮತ್ತು 27 ವೆಂಟಿಲೇಟರ್‌ಗಳನ್ನು ನೀಡಿತು. ಐಎನ್‌ಎಸ್ ಐರಾವತ್ ಮೇ 2 ರಿಂದ ಮೇ 4 ರವರೆಗೆ ಇದ್ದು ವಿವಿಧ ಸಾಮರ್ಥ್ಯಗಳ ಸುಮಾರು 5000 ಆಮ್ಲಜನಕ ಸಿಲಿಂಡರ್‌ಗಳು, ಎಂಟು ಐಎಸ್‌ಒ / ಕ್ರಯೋಜೆನಿಕ್ ಟ್ಯಾಂಕ್‌ಗಳು, ಆಮ್ಲಜನಕ ಸಾಂದ್ರಕಗಳು ಹೊತ್ತು ತಂದಿದ್ದು ದಕ್ಷಿಣ ಭಾರತಕ್ಕೆ ನೆರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ