ನ್ಯೂಯಾರ್ಕ್ ಮಹಾನಗರದಲ್ಲಿ ತುತ್ತು ಊಟಕ್ಕೆ ತತ್ವಾರ!

Chethan Kumar   | Asianet News
Published : May 22, 2020, 07:59 PM ISTUpdated : May 22, 2020, 08:05 PM IST
ನ್ಯೂಯಾರ್ಕ್ ಮಹಾನಗರದಲ್ಲಿ ತುತ್ತು ಊಟಕ್ಕೆ ತತ್ವಾರ!

ಸಾರಾಂಶ

ವಿಶ್ವದ ಶ್ರೀಮಂತ ದೇಶಗಳ ಪೈಕಿ ಅಮೆರಿಕಾಗೆ ಅಗ್ರಸ್ಥಾನ. ಇನ್ನು ಶ್ರೀಮಂತ ಉದ್ಯಮಿಗಳು, ಗರಿಷ್ಠ ವೇತನ, ಐಷಾರಾಮಿ ಜೀವನ ಪದ್ದತಿಯಲ್ಲಿ ಅಮೆರಿಕ ನ್ಯೂಯಾರ್ಕ್ ನಗರ ಮುಂಚೂಣಿಯಲ್ಲಿದೆ. ಆದರೆ ಕಳೆದೆರಡು ತಿಂಗಳಲ್ಲಿ ನ್ಯೂಯಾರ್ಕ್ ನಗರದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸುಂದರ ನಗರದ ಮೂಲೆ ಮೂಲೆಯಿಂದ ಇದೀಗ ಹಸಿವಿನ ಆರ್ತನಾದ ಕೇಳಿಸುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ನೈಜ ಪರಿಸ್ಥಿತಿಯ ಅನಾವರಣ ಇಲ್ಲಿದೆ.

ನ್ಯೂಯಾರ್ಕ್(ಮೇ.22): ಅಮೆರಿಕಾದ ಮಾತ್ರವಲ್ಲ, ವಿಶ್ವದ ಅತೀ ದೊಡ್ಡ ನಗರ ಅನ್ನೋ ಹೆಗ್ಗಳಿಕೆಗೆ ನ್ಯೂಯಾರ್ಕ್ ಪಾತ್ರವಾಗಿದೆ. ನ್ಯೂಯಾರ್ಕ್ ನಗರದ ವಹಿವಾಟು ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಬಲ್ಲ ಸಾಮರ್ಥ್ಯ ಪಡೆದುಕೊಂಡ ನಗರ. ಕಾರಣ 784 ಕಿ.ಮೀ ಪ್ರದೇಶದವರೆಗೆ ವಿಸ್ತಾರವಾಗಿ ಹರಡಿಕೊಂಡಿರುವ ಈ ನಗರದಲ್ಲಿ ಸಂಯುಕ್ರ ರಾಷ್ಟ್ರ ಸಂಘಟನೆ ಮುಖ್ಯ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಕಚೇರಿ ಸೇರಿದಂತೆ ಹಲವು ಕಂಪನಿಗಳು, ಉದ್ಯಮಗಳ ತವರು. ಅತೀ ಹೆಚ್ಚು ಶ್ರೀಮಂತರು, ಗರಿಷ್ಠ ವೇತನ, ಐಷಾರಾಮಿ ಜೀವನ ಪದ್ದತಿಯಲ್ಲಿ ನ್ಯೂಯಾರ್ಕ್ ಇತರ ಎಲ್ಲ ದೇಶದ ನಗರಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಆದರೆ ಕೊರೋನಾ ವೈರಸ್ ವಕ್ಕರಿಸಿದ 2 ತಿಂಗಳಲ್ಲಿ ಈ ಶ್ರೀಮಂತ ನಗರ ಇದೀಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ.

ಕೊರೋನಾ ಸೋಂಕು: ಇಟಲಿಯನ್ನು ಮೀರಿಸಿದ ನ್ಯೂಯಾರ್ಕ್..!

ಸುಮಾರು 20 ಲಕ್ಷಕ್ಕೂ ಹೆಚ್ಚು ನಿವಾಸಿಗಳಿರುವ ನ್ಯೂಯಾರ್ಕ್ ನಗರವಾಸಿಗಳ ಜೀವನ ಯಾರಿಗೂ ಬೇಡ. ನ್ಯೂಯಾರ್ಕ್ ನಗರದಲ್ಲಿನ ನಾಲ್ವರಲ್ಲಿ ಒಬ್ಬರಿಗೆ ಆಹಾರದ ಅವಶ್ಯಕತೆ ಇದೆ. ಅಂದರೆ ನಾಲ್ವರಲ್ಲಿ ಒಬ್ಬರಿಗೆ ಯಾರಾದರೂ ಆಹಾರ ವಿತರಿಸಿದಿದ್ದರೆ ಉಪವಾಸವೇ ಗತಿಯಾಗಿದೆ. ಕೊರೋನಾ ವೈರಸ್ ಕಾರಣ ಬಹುತೇಕ ಕಂಪನಿಗಳು ಬಾಗಿಲು ಮಿಚ್ಚಿವೆ. ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ನಿವಾಸಿಗಳಿಗೆ ಆಹಾರ ಪೂರೈಕೆ ಪ್ರಮಾಣ ಹೆಚ್ಚಿಸಲಿದ್ದೇವೆ ಎಂದು ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡೆ ಬ್ಲಾಸಿಯೋ ಹೇಳಿದ್ದಾರೆ.

ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!.

ನಾಲ್ವರಲ್ಲಿ ಒಬ್ಬರಿಗೆ ಆಹಾರದ ಅವಶ್ಯಕತೆ ಇದೆ.  ಮುಂದಿನ ವಾರದಿಂದ ಆಹಾರ ವಿತರಣೆ ಸಂಖ್ಯೆಯನ್ನು 15 ಲಕ್ಷಕ್ಕೇರಿಸುತ್ತಿದ್ದೇವೆ. ನ್ಯೂಯಾರ್ಕ್ ನಗರಕ್ಕೆ ಕೊರೋನಾ ವೈರಸ್ ವಕ್ಕರಿಸುವ ಮೊದಲೇ ಆಹಾರ ಸಮಸ್ಯೆ ಎದುರಾಗಬಹುದೆಂದು ಅಂದಾಜು ಮಾಡಲಾಗಿತ್ತು. ಗರಿಷ್ಠ 10 ಲಕ್ಷ ನಿವಾಸಿಗಳಿಗೆ ಆಹಾರ ಸಮಸ್ಯೆ ಎದುರಾಗಬಹಬುದೆಂದು ಅಂದಾಸಿದ್ದೆವು. ಆದರೆ ಇದೀಗ 20 ಲಕ್ಷ ನಿವಾಸಿಗಳಿಗೆ ಆಹಾರ ಪೂರೈಕೆ ಮಾಡಬೇಕಾಗಿದೆ ಎಂದು ಬಿಲ್ ಡೆ ಬ್ಲಾಸಿಯೋ ಹೇಳಿದ್ದಾರೆ.

ಕೊರೋನಾ ವೈರಸ್ ಆರ್ಭಟ ಆರಂಭಿಸದ ಬಳಿಕ ಇದುವರೆಗೆ 32 ಮಿಲಿಯನ್ ಆಹಾರ ವಿತರಿಸಲಾಗಿದೆ. ಕಳಪೆ ಮಟ್ಟದ ಆಹಾರ ವಿತರಿಸಲಾಗುತ್ತಿದೆ ಅನ್ನೋ ದೂರುಗಳಿಂದ ಮೇಯರ್ ಈ ಪ್ರಕಟಣೆ ಹೊರಡಿಸಿದ್ದಾರೆ. ಆಹಾರ ಪೂರೈಕೆ ಮಾಡುತ್ತಿದ್ದ ಕೆಲ ವೆಂಡರ್‌ಗಳನ್ನು ಅಮಾನತು ಮಾಡಲಾಗಿದೆ. ಪ್ರತಿಯೊಬ್ಬರಿಗೆ ಗುಣುಟ್ಟದ ಆಹಾರ ಪೂರೈಕೆ ಮಾಡಲಿದ್ದೇವೆ ಎಂದು  ಬಿಲ್ ಡೆ ಬ್ಲಾಸಿಯೋ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ