
ಬೀಜಿಂಗ್(ಮೇ.22): ವಿಶ್ವದಲ್ಲೇ ಮೊದಲಿಗೆ ತನ್ನ ನೆಲದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡರೂ, ಇತರೆಲ್ಲಾ ದೇಶಗಳಿಗಿಂತ ಅದನ್ನು ಯಶಸ್ವಿಯಾಗಿ ನಿರ್ವಹಿಸಿರುವ ಚೀನಾಕ್ಕೆ ಇದೀಗ ನಿಗೂಢ ಸೋಂಕಿನ ಆತಂಕ ಕಾಡತೊಡಗಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿ ಲಾಕ್‌ಡೌನ್ ತೆರವುಗೊಳಿಸಿದ ಬೆನ್ನಲ್ಲೇ ರಷ್ಯಾ- ಉತ್ತರ ಕೊರಿಯಾ ಗಡಿಯಲ್ಲಿರುವ ಜಿಲಿನ್ ಪ್ರಾಂತ್ಯದಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.
ಹೈಡ್ರಾಮಾ ಬಳಿಕ ಕೊರೋನಾ ಮೂಲ ತನಿಖೆ ನಿರ್ಣಯಕ್ಕೆ ಚೀನಾ ಬೆಂಬಲ!
ಲಾಂಡ್ರಿ ಕೆಲಸ ಮಾಡುವ ಮಹಿಳೆಯೊಬ್ಬಳಲ್ಲಿ ಕೊರೋನಾ ಪತ್ತೆಯಾಗಿದ್ದು, ಅದು ಈಗ ಕ್ಲಸ್ಟರ್ ರೂಪ ಪಡೆದಿದೆ. ಈವರೆಗೆ 39 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಲಾಂಡ್ರಿ ಮಹಿಳೆಗೆ ಎಲ್ಲಿಂದ ಸೋಂಕು ಬಂತು ಎಂಬುದು ಈವರೆಗೂ ಗೊತ್ತಾಗಿಲ್ಲ. ಸೋಂಕು ಹಬ್ಬುತ್ತಿದ್ದಂತೆ ಚೀನಾಕ್ಕೆ ಜಿಲಿನ್ ಒಳಗೊಂಡ, 10.8 ಕೋಟಿ ಜನರು ನೆಲೆಸಿರುವ ಡಾಂಗ್‌ಬೀ ವಲಯದ ಆತಂಕ ಕಾಡತೊಡಗಿದೆ.
ಚೀನಾಗೆ ಬಿಗ್ ಶಾಕ್: Apple, ಲಾವಾ ಬೆನ್ನಲ್ಲೇ ಮತ್ತೊಂದು ಕಂಪನಿ ಭಾರತಕ್ಕೆ!
ಸೋಂಕಿನ ಹಿನ್ನೆಲೆಯಲ್ಲಿ ಜಿಲಿನ್ ಪ್ರಾಂತ್ಯದಲ್ಲಿರುವ 50 ಲಕ್ಷ ಜನರು ವಾಸಿಸುವ 2 ನಗರಗಳನ್ನು ಸಂಪೂರ್ಣವಾಗಿ ವುಹಾನ್ ಪ್ರಾಂತ್ಯದ ರೀತಿ ಲಾಕ್‌ಡೌನ್ ಮಾಡಲಾಗಿದೆ. 40 ಸಾವಿರ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂಚಾರ, ಶಾಲೆ, ಕಾಲೇಜು ಎಲ್ಲವನ್ನೂ ಬಂದ್ ಮಾಡಲಾಗಿದೆ. ಕೊರೋನಾ ಚಿಕಿತ್ಸೆಗೆಂದೇ ಎರಡು ಆಸ್ಪತ್ರೆಗಳನ್ನು ಮೀಸಲಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ