ಕಳೆದ 5 ದಶಕಗಳಿಂದ ಇರಾನ್‌ - ಅಮೆರಿಕ - ಇಸ್ರೇಲ್‌ ಸಂಘರ್ಷ!

Kannadaprabha News   | Kannada Prabha
Published : Mar 01, 2026, 04:54 AM IST
 Donald Trump

ಸಾರಾಂಶ

ಕಳೆದ 5 ದಶಕಗಳಿಂದ ಇರಾನ್‌-ಅಮೆರಿಕಅಮೆರಿಕ-ಇರಾನ್‌ ಮತ್ತು ಅಮೆರಿಕ-ಇಸ್ರೇಲ್‌ ಸಂಬಂಧ ಹಳಸಲು ಆರಂಭವಾಗಿದ್ದು 70ರ ದಶಕದಲ್ಲಿ. 1979ರ ವರೆಗೆ ಆಳ್ವಿಕೆ ಮಾಡುತ್ತಿದ್ದ ಅಮೆರಿಕದ ಮಿತ್ರ ಮೊಹಮ್ಮದ್‌ ರೆಜಾ ಪಹ್ಲವಿ ಅವರ ಆಡಳಿತವನ್ನು ಇರಾನ್‌ ದಂಗೆ ಅಂತ್ಯಗೊಳಿಸಿತು.

ಟೆಹ್ರಾನ್‌: ಅಮೆರಿಕ-ಇರಾನ್‌ ಮತ್ತು ಅಮೆರಿಕ-ಇಸ್ರೇಲ್‌ ಸಂಬಂಧ ಹಳಸಲು ಆರಂಭವಾಗಿದ್ದು 70ರ ದಶಕದಲ್ಲಿ. 1979ರ ವರೆಗೆ ಆಳ್ವಿಕೆ ಮಾಡುತ್ತಿದ್ದ ಅಮೆರಿಕದ ಮಿತ್ರ ಮೊಹಮ್ಮದ್‌ ರೆಜಾ ಪಹ್ಲವಿ ಅವರ ಆಡಳಿತವನ್ನು ಇರಾನ್‌ ದಂಗೆ ಅಂತ್ಯಗೊಳಿಸಿತು. ಪಹ್ಲವಿ ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಂತೆ, ಸುಮಾರು 15 ವರ್ಷಗಳಿಂದ ಗಡೀಪಾರಾಗಿದ್ದ ಖಮೇನಿ ಮರಳಿ ಅಧಿಕಾರಕ್ಕೇರಿದರು.

ಅಮೆರಿಕವನ್ನು ‘ದೊಡ್ಡ ಸೈತಾನ’ ಎಂದು ಕರೆಯತೊಡಗಿದರು

ಅವರು ಅಮೆರಿಕವನ್ನು ‘ದೊಡ್ಡ ಸೈತಾನ’ ಎಂದು ಹಾಗೂ ಅದರ ಮಿತ್ರ ಇಸ್ರೇಲ್‌ಅನ್ನು ‘ಸಣ್ಣ ಸೈತಾನ’ ಎಂದು ಕರೆಯತೊಡಗಿದರು. ಅದೇ ವರ್ಷ ನವೆಂಬರ್‌ನಲ್ಲಿ ಇರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಿದ ವಿದ್ಯಾರ್ಥಿಗಳು, 52 ಅಮೆರಿಕನ್ನರನ್ನು 444 ದಿನಗಳ ಕಾಲ ಒತ್ತೆಯಾಳಾಗಿಟ್ಟುಕೊಂಡಿದ್ದರು. ಇದರಿಂದ ಕುಪಿತವಾದ ಅಮೆರಿಕ, ಇರಾನ್‌ ತೈಲದ ಮೇಲೆ ನಿರ್ಬಂಧ ವಿಧಿಸಿತು.

241 ಅಮೆರಿಕನ್‌ ಯೋಧರನ್ನು ಹತ್ಯೆ ಮಾಡಿತು.

1983ರಲ್ಲಿ ಲೆಬನಾನ್‌ ಸೇನಾನೆಲೆಯಲ್ಲಿದ್ದ 241 ಅಮೆರಿಕನ್‌ ಯೋಧರನ್ನು ಇರಾನ್‌ 2 ಟ್ರಕ್‌ನಷ್ಟು ಸ್ಫೋಟಕ ಬಳಸಿ ಹತ್ಯೆ ಮಾಡಿತು. ಪ್ರತಿಯಾಗಿ 1988ರಲ್ಲಿ ಅಮೆರಿಕದ ನೌಕಾಪಡೆಯು ಇರಾನ್‌ ವಿಮಾನವೊಂದರ ಮೇಲೆ ದಾಳಿ ನಡೆಸಿದ ಪರಿಣಾಮ ಅದರಲ್ಲಿದ್ದ ಎಲ್ಲಾ 290 ಜನ ಮೃತಪಟ್ಟರು. ಅತ್ತ ಹಿಜ್ಬುಲ್ಲಾಗಳ ಮೂಲಕ ಇಸ್ರೇಲ್ ವಿರುದ್ಧ ಇರಾನ್‌ ಪ್ರಾಕ್ಸಿ ಸಮರ ಆರಂಭಿಸಿತು. ಇರಾನ್‌ ಅಣ್ವಸ್ತ್ರವನ್ನು ಹೊಂದಬಾರದು ಎಂಬ ಉದ್ದೇಶದಿಂದ ಅಮೆರಿಕ ಅದರ ಮೇಲೆ ಭಾರೀ ನಿರ್ಬಂಧಗಳನ್ನು ಹೇರತೊಡಗಿತು. ಇದಕ್ಕಾಗಿ 2015ರ ಜು.14ರಂದು ಇರಾನ್‌ ಜತೆ ಅಮೆರಿಕ ಒಪ್ಪಂದ ಮಾಡಿಕೊಂಡಿತು. ಇದರನ್ವಯ, ಅಣ್ವಸ್ತ್ರ ಅಭಿವೃದ್ಧಿಪಡಿಸುವುದನ್ನು ಇರಾನ್‌ ನಿಲ್ಲಿಸಿದರೆ, ಅದರ ಮೇಲೆ ವಿಧಿಸಲಾಗಿರುವ ಎಲ್ಲಾ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಸಡಿಲಿಸಲಾಗುವುದು. ಕೆಲ ವರ್ಷ ಇದರ ಪಾಲನೆಯಾಯಿತಾದರೂ, 2018ರಲ್ಲಿ ಅಮೆರಿಕ ಈ ಒಪ್ಪಂದದಿಂದ ಹೊರಬಂದು, ಮತ್ತೆ ನಿರ್ಬಂಧಗಳನ್ನು ಹೇರಿತು. ಅತ್ತ ಇಸ್ರೇಲ್‌, ಇರಾನ್‌ನ ಅಣು ವಿಜ್ಞಾನಿಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸುತ್ತಿತ್ತು.

2025ರ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ನ ಅಣುಕೇಂದ್ರದ ಮೇಲೆ ವಾಯುದಾಳಿ ನಡೆಸಿದವು.2020ರಲ್ಲಿ ಅಧ್ಯಕ್ಷ ಟ್ರಂಪ್‌ ಆದೇಶದಂತೆ ಕಾರ್ಯಾಚರಣೆ ನಡೆಸಿ, ಐಆರ್‌ಜಿಸಿಯ ಮೇ.ಜ.ಖಾಸಿಂ ಸೊಲೇಮಾನಿಯ ಹತ್ಯೆ ಮಾಡಲಾಯಿತು. ಇದು ಉಭಯ ದೇಶಗಳ ನಡುವಿನ ಹಗತನವನ್ನು ಮತ್ತಷ್ಟು ಹೆಚ್ಚಿಸಿತು.

ಇತ್ತೀಚೆಗೆ ಖಮೇನಿ ಆಡಳಿತದ ವಿರುದ್ಧ ಇರಾನಿಗರು ದಂಗೆಯೆದಿದ್ದು, ಟ್ರಂಪ್‌ ಅದನ್ನು ಬಹಿರಂಗವಾಗಿ ಬೆಂಬಲಿಸಿ ಸಹಕಾರದ ಭರವಸೆ ನೀಡಿದ್ದರು. ಆ ಬಳಿಕ ಉತ್ತುಂಗಕ್ಕೇರತೊಡಗಿದ ಹಗೆತನ ಯುದ್ಧವಾಗಿ ಮಾರ್ಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೆರವು ಕೇಳುತ್ತಿದ್ದಿರಿ, ಬಂದಿದ್ದೇನೆ : ಇರಾನಿಗರಿಗೆ ಟ್ರಂಪ್
ಅಸ್ತಿತ್ವದ ಆತಂಕ ಅಂತ್ಯಕ್ಕೆ ಇರಾನ್‌ ಮೇಲೆ ದಾಳಿ: ನೆತನ್ಯಾಹು