
ವೆಸ್ಟ್ ಪಾಮ್ ಬೀಚ್: ‘ಇರಾನ್‌ನಲ್ಲಿ ಆಡಳಿತ ಬದಲಾವಣೆ ಆಗಬೇಕು. ಸಹಾಯ ಮಾಡಿ ಎಂದು ಕೇಳುತ್ತಿದ್ದಿರಿ. ಈಗ ಬಂದಿದ್ದೇನೆ. ಹೊರಗಿನಿಂದ ನಾವು ದಾಳಿ ಮಾಡುತ್ತಿದ್ದೇವೆ. ಒಳಗಿನಿಂದ ನೀವು ದಂಗೆ ಎದ್ದು ನಿಮ್ಮ ಸರ್ಕಾರವನ್ನು ವಶಕ್ಕೆ ಪಡೆಯಿರಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ತಮ್ಮ ಸರ್ಕಾರದ ವಿರುದ್ಧ ತಿರುಗಿಬೀಳುವಂತೆ ಇರಾನಿಗರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಶನಿವಾರ ಬೆಳಗ್ಗೆ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಇರಾನ್ ವಿರುದ್ಧದ ಆಕ್ರಮಣವನ್ನು ‘ಉನ್ನತ ಮಿಷನ್. ಇರಾನ್ ವಿರುದ್ಧ ದೊಡ್ಡ ದಾಳಿ ಆರಂಭಿಸಿದ್ದೇವೆ. ಅಲ್ಲಿನ ಆಡಳಿತದಲ್ಲಿನ ಬದಲಾವಣೆ ಹಾಗೂ ಪರಮಾಣು ನಿಶ್ಶಸ್ತ್ರೀಕರಣವೇ ನಮ್ಮ ಗುರಿ’ ಎಂದು ಹೇಳಿದ್ದಾರೆ.
‘ಅಮೆರಿಕವನ್ನು ತಲುಪಬಲ್ಲ ಅಣ್ವಸ್ತ್ರ ಮತ್ತು ಕ್ಷಿಪಣಿಗಳನ್ನು ಇರಾನ್ ಹೊಂದುವುದನ್ನು ತಡೆಯಲು ಇದು ಅಗತ್ಯ. ಇರಾನ್ ಸೇನೆಗೆ ಶಸ್ತ್ರತ್ಯಾಗ ಮಾಡಬೇಕು. ಇರಾನಿಗರು ಸರ್ಕಾರವನ್ನು ವಶಪಡಿಸಿಕೊಳ್ಳಬೇಕು. ಏಕೆಂದರೆ ಅದು ಅವರದ್ದೇ ಆಗಿದೆ ಆಗಿದೆ. ‘ಹೊರಗಿಂದ ನಾವು ಆಕ್ರಮಣ ಮಾಡಿದರೆ, ದೇಶದೊಳಗೆ ನೀವು ದಂಗೆ ಏಳಿ’ ಎಂದು ಇರಾನ್ ಜನತೆಗೆ ಕರೆ ನೀಡಿದ್ದಾರೆ.
ಇದಲ್ಲದೆ, ‘ಈ ದಾಳಿಯಲ್ಲಿ ಅಮೆರಿಕನ್ನರ ಸಾವು-ನೋವು ಕೂಡ ಸಂಭವಿಸಬಹುದು. ರಣರಂಗವೆಂದರೆ ಇದೆಲ್ಲ ಇರುತ್ತದೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ