ವಾಷಿಂಗ್ಟನ್(ಜು.10): ಅಮೆರಿಕದ ಚಿಕಾಗೊ ಪಬ್ಲಿಕ್ ಸ್ಕೂಲ್ಸ್ ಬೋರ್ಡ್ ಆಫ್ ಎಜುಕೇಶನ್ ಅಂಗೀಕರಿಸಿದ ನೀತಿಯಡಿಯಲ್ಲಿ, ನಗರದ ಐದನೇ ತರಗತಿ ಅಥವಾ ನಂತರದ ತರಗತಿ ಇರುವ ಶಾಲೆಗಳು ವಿದ್ಯಾರ್ಥಿಗಳಿಗೆ ಕಾಂಡೋಮ್ ಲಭ್ಯವಾಗುವಂತೆ ಮಾಡಬೇಕು ಎನ್ನಲಾಗಿದೆ
ಸಿಪಿಎಸ್ ವಿದ್ಯಾರ್ಥಿಗಳಲ್ಲಿ ಹರಡುವ ಲೈಂಗಿಕರೋಗಗಳ ಹರಡುವಿಕೆಯನ್ನು ತಗ್ಗಿಸುವ ಪ್ರಯತ್ನದಲ್ಲಿ ಚಿಕಾಗೊ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಯಾವುದೇ ವೆಚ್ಚವಿಲ್ಲದೆ ಕಾಂಡೋಮ್ಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.
Sex Education: ಬೇಕಾ? ಯಾರಿಗೆ? ಯಾವಾಗ?
ವಾಷಿಂಗ್ಟನ್‌ನಲ್ಲಿ ಈ ಹಿಂದೆಯೇ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ನೀಡುವ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿತ್ತು. ಸೆಕ್ಸ್ ಎಜುಕೇಷನ್ ನೀಡುವ ಬಗ್ಗೆ ಸುಮಾರು ಶೇ.58ರಷ್ಟು ಜನರು ಆಸಕ್ತಿ ವ್ಯಕ್ತಪಡಿಸಿದ್ದರು.
ಭಾವನೆಗಳ ನಿಯಂತ್ರಣ, ವ್ಯಕ್ತಿತ್ವ ವಿಕಸನ ಸೇರಿದಂತೆ ಸಂಪೂರ್ಣ ಸೆಕ್ಸ್ ಎಜುಕೇಷನ್ ಮೂಲಕ ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳಿಗೆ ಮಾಹಿತಿ ಒದಗಿಸಲು ನಿರ್ಧರಿಸಲಾಗಿತ್ತು.