ಬಾಂಗ್ಲಾ ಜ್ಯೂಸ್‌ ಫ್ಯಾಕ್ಟರಿಗೆ ಬೆಂಕಿ: 52 ಜನ ಸಜೀವ ದಹನ!

By Suvarna News  |  First Published Jul 10, 2021, 8:51 AM IST

* ನೆಲ ಮಹಡಿಯಲ್ಲಿದ್ದ ಕೆಮಿಕಲ್‌ನಿಂದ ಬೆಂಕಿ ಹೊತ್ತಿರುವ ಶಂಕೆ

* ಬಾಂಗ್ಲಾ ಜ್ಯೂಸ್‌ ಫ್ಯಾಕ್ಟರಿಗೆ ಬೆಂಕಿ: 52 ಜನ ಸಜೀವ ದಹನ

* 50ಕ್ಕೂ ಹೆಚ್ಚು ಮಂದಿಗೆ ಗಾಯ


ಢಾಕಾ(ಜು.10): ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ತಂಪು ಪಾನೀಯ ತಯಾರಿಕಾ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 52 ಮಂದಿ ಸಾವಿಗೀಡಾಗಿ, 50 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿನ ರೂಪ್‌ಗಂಜ್‌ನಲ್ಲಿರುವ ಹಶೇಮ್‌ ಫುಡ್‌ ಆ್ಯಂಡ್‌ ಬೆವರೀಜಿಸ್‌ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ನೆಲಮಹಡಿಯಲ್ಲಿ ದಾಸ್ತಾನು ಇಟ್ಟಿದ್ದ ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್‌ ಬಾಟಲಿಗಳಿಗೆ ಬೆಂಕಿ ಹೊತ್ತಿ, ನಂತರದಲ್ಲಿ ಇದು ಇಡೀ ಕಟ್ಟಡಕ್ಕೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯು ಆವರಿಸುತ್ತಿದ್ದಂತೆಯೇ ಹಲವು ಉದ್ಯೋಗಿಗಳು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದರು. ಅಗ್ನಿ ಅವಘಡದ ತೀವ್ರತೆಗೆ ಕಟ್ಟದ ಹೊತ್ತಿ ಉರಿದಿದ್ದು, ಘಟನೆ ನಡೆದ 24 ಗಂಟೆಗಳ ನಂತರವೂ ಸಂಪೂರ್ಣವಾಗಿ ಬೆಂಕಿಯನ್ನು ಆರಿಸಲು ಸಾಧ್ಯವಾಗಿಲ್ಲ.

Tap to resize

Latest Videos

ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಪತ್ರ ನೆರವು; ಮಾಜಿ ಕೌನ್ಸಿಲರ್ ಅರೆಸ್ಟ್!

ಈ ನಡುವೆ ನಾಪತ್ತೆಯಾಗಿರುವ ಉದ್ಯೋಗಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಟ್ಟಡದ ಮುಂದೆ ಬಂದು ಆಕ್ರೋಶ ಹೊರಹಾಕುತ್ತಿದ್ದಾರೆ ಮತ್ತು ಈ ದುರಂತಕ್ಕೆ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಇತ್ತ ದುರಂತದ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತವು ಐದು ಮಂದಿ ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.

SBIನಲ್ಲಿ ಅಗ್ನಿಶಾಮಕ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ

2012ರಲ್ಲಿ ಬಾಂಗ್ಲಾದ ಬಹು ಅಂತಸ್ತಿನ ಬಟ್ಟೆಕಾರ್ಖಾನೆಯೊಂದರಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ 117 ಮಂದಿ ಸಜೀವ ದಹನವಾಗಿದ್ದರು. ಅದು ಬಾಂಗ್ಲಾ ಕಂಡ ಅತ್ಯಂತ ಭೀಕರ ಅಗ್ನಿ ದುರಂತವಾಗಿತ್ತು.

click me!