ಬಿಸಿಲ ಬೇಗೆ ತಡೆಯಲು ಡ್ರೋನ್ ಮೂಲಕ ಕೃತಕ ಮಳೆ ಸುರಿಸಿದ ದುಬೈ!

By Suvarna NewsFirst Published Jul 22, 2021, 3:20 PM IST
Highlights
  • ದುಬೈನಲ್ಲಿ 50 ಡಿಗ್ರಿ ಸೆಲ್ಶಿಯಸ್ ತಾಪಮಾನ, ಬಿಸಿಲಿನಿಂದ ಕಂಗೆಟ್ಟ ಜನ
  • ತಂತ್ರಜ್ಞಾನದ ಮೂಲಕ ಮಳೆ ಸುರಿಸಿದ ದುಬೈ ಸರ್ಕಾರ
  • ಡ್ರೋನ್ ಮೂಲಕ ಕೃತಕ ಮಳೆಗೆ ಸಾವಿರಾರು ಕೋಟಿ ಖರ್ಚು

ದುಬೈ(ಜು.22):  ಭಾರತದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಜಲಾಶಗಳು ಭರ್ತಿಯಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಸೃಷ್ಟಿಯಾಗಿದೆ. ಆದರೆ ದುಬೈ ಪರಿಸ್ಥಿತಿ ಭಿನ್ನವಾಗಿದೆ. ದುಬೈನಲ್ಲಿ ಬಿಸಿಲ ಬೇಗೆ ತಡೆಯಲಾಗದೆ ಪ್ರಾಣ ಜನ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ತಾಪಮಾನ 50 ಡಿಗ್ರಿ ಸೆಲ್ಶಿಯಸ್ ತಲುಪಿದೆ. ಇದಕ್ಕೆ ದುಬೈ ಆಧುನಿಕ ಹಾಗೂ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡಿದೆ. ಡ್ರೋನ್ ಬಳಸಿ ಕೃತಕ ಮಳೆ ಸುರಿಸಿ ತಂಪೆರೆದಿದ್ದಾರೆ.

ಧರ್ಮಶಾಲಾದಲ್ಲಿ ಮೇಘಸ್ಫೋಟ, ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರುಗಳು!

ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಮಳೆಗೆ ದುಬೈ ಕಾಯಲಿಲ್ಲ. ತಮ್ಮಲ್ಲಿರುವ ತಂತ್ರಜ್ಞಾನ ಬಳಿಸಿ ಮಳೆ ಸರಿಸಿದ್ದಾರೆ. ಕೃತಕ ಮಳೆಗಾಗಿ ವಿಶೇಷ ಡ್ರೋನ್ ಬಳಸಲಾಗಿದೆ. ಈ ಡ್ರೋನ್‌ಗಳು ಮೋಡಗಳಿಗೆ ವಿದ್ಯುತ್ ಚಾರ್ಜ್ ಹರಿಸಲಿದೆ. ಇದು ಮಳೆಗೆ ಕಾರಣವಾಗಲಿದೆ. ಈ ವಿಧಾನವನ್ನು ಮೋಡ ಬಿತ್ತನೆ ಎಂದು ಕರೆಯಲಾಗುತ್ತದೆ. 

 

ದುಬೈ ರಾಷ್ಟ್ರೀಯ ಹವಾಮಾನ ಇಲಾಖೆ ಈ ಯೋಜನೆಯನ್ನು ಪರಿಚಯಿಸಿದೆ. 2017ರಿಂದ ಪ್ರತಿ ವರ್ಷ ದುಬೈ ಸರ್ಕಾರ ಇದಕ್ಕಾಗಿ ಹಣಸಹಯಾ ನೀಡುತ್ತಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮಳೆ ಸುರಿಸುವ ಯತ್ನ ಮಾಡಲಾಗುತ್ತಿದೆ. ಇದೀಗ ಪ್ರಾಯೋಗಿಕ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ದುಬೈನಲ್ಲಿ ಕೃತಕ ಮಳೆ ಸುರಿಸಲಾಗಿದೆ. 

ಸಿಎಂ ಯಡಿಯೂರಪ್ಪ ಸೂಚನೆಗೂ ಕ್ಯಾರೆ ಅನ್ನದ ಗುತ್ತಿಗೆದಾರರು

ದುಬೈ ಜನ ಬಿಸಿಲ ಬೇಗೆಯಿಂದ ತಾತ್ಕಾಲಿಕ ರಿಲೀಫ್ ಪಡೆದಿದ್ದಾರೆ. ಈ ಮೋಡಬಿತ್ತನೆ ಕರ್ನಾಟಕಕ್ಕೆ ಹೊಸದಲ್ಲ. ಕೆ ಗುಂಡುರಾವ್, ಎಸ್ ಎಂ ಕೃಷ್ಣ ಸರ್ಕಾರದ ಕಾಲದಿಂದ ಈಗಿನ ಬಿಎಸ್ ಯಡಿಯೂರಪ್ಪ ಸರ್ಕಾರದವರೆೆಗೂ ಕರ್ನಾಟಕದಲ್ಲಿ ಮೋಡ ಬಿತ್ತನೆ ಮೂಲಕ ಮಳೆ ಸುರಿಸುವ ಅನೇಕ ಪ್ರಯತ್ನಗಳು ನಡೆದಿವೆ.

click me!