
ಬೀಜಿಂಗ್(ಸೆ.27): ಕೊರೋನಾ ವೈರಸ್ ದಿಢೀರ್ ಸೃಷ್ಟಿಯಾಗಿದ್ದಲ್ಲ, ಇದರ ಹಿಂದೆ ಚೀನಾದ ಕುತಂತ್ರ ಅಡಗಿದೆ ಅನ್ನೋ ಮಾತು ಗೌಪ್ಯವಾಗಿ ಉಳಿದಿಲ್ಲ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಕೊರೋನಾ ವೈರಸ್ ಸೃಷ್ಟಿ ಚೀನಾ ಕೈವಾಡವಿದೆ ಅನ್ನೋದನ್ನು ಬಹಿರಂಗವಾಗಿ ಹೇಳಿತ್ತು. ಇದರ ಬೆನ್ನಲ್ಲೇ ಚೀನಾದ ವೈರೋಲಜಿಸ್ಟ್ ಚೀನಾದ ಅಸಲಿಯತ್ತನ್ನು ಬಹಿರಂಗ ಪಡಿಸಿದ್ದರು. ಇದೀಗ ಎರಡನೇ ಬಾರಿ ಚೀನಾ ವೈರೋಲಜಿಸ್ಟ್ ಚೀನಾ ಸೃಷ್ಟಿಸಿದ ಕೊರೋನಾ ವೈರಸ್ ಕುರಿತು ಮಾತನಾಡಿದ್ದಾರೆ.
ಕೊರೋನಾ ಸೃಷ್ಟಿಗೆ ಚೀನಾ ಸರ್ಕಾರವೇ ಕಾರಣ, ದಾಖಲೆ ಸಮೇತ ಮಾಹಿತಿ ಬಹಿರಂಗ!
ವುಹಾನ್‌ನಲ್ಲಿರುವ ಸರ್ಕಾರದ ಲ್ಯಾಬ್‌ಗಳಲ್ಲಿ ಕೊರೋನಾ ವೈರಸ್ ಸೃಷ್ಟಿಸಲಾಗಿದೆ ಎಂದು ಚೀನಾ ವೈರೋಲಜಿಸ್ಟ್ ಡಾ. ಲಿ ಮೆಂಗ್ ಯಾನ್ ಹೇಳಿದ್ದರು. ಇದೀಗ ಚೀನಾ ಲ್ಯಾಬ್‌ಗಳಿಂದ ಬಂದಿರುವ ಕೊರೋನಾ ವೈರಸ್ ಹಿಂದೆ ಬಲವಾದ ಕುತಂತ್ರ ಹಾಗೂ ಉದ್ದೇಶವಿದೆ ಎಂದಿದ್ದಾರೆ. ಚೀನಾ ಸರ್ಕಾರ ಅಧಿಕಾರ ಹಾಗೂ ಹಣ ಬಳಸಿ ಇಡೀ ವಿಶ್ವದ ಮೇಲೆ ಪ್ರಭುತ್ವ ಸಾಧಿಸಲು ಹೊರಟಿದೆ. ನೇರವಾಗಿ ಹೋರಾಡುವ ಮನೋಭಾವ ಚೀನಾಗಿಲ್ಲ. ಹಿಂಬದಿ ಮೂಲಕ ಕುತಂತ್ರ ನಡೆಸುವ ಚೀನಾ ವೈರಸ್ ಸೃಷ್ಟಿಸಿ ಪ್ರಭುತ್ವ ಸಾಧಿಸಲು ಹೊರಟಿದೆ ಎಂದು ಲಿ ಮೆಂಗ್ ಹೇಳಿದ್ದಾರೆ.
ಕೊರೋನಾ ಸೃಷ್ಟಿಸಿದ ಬಳಿಕ ಈ ವೈರಸ್ ಸಾಂಕ್ರಾಮಿಕ ರೋಗದಂತೆ ಹರಡುತ್ತದೆ ಎಂಬ ಸ್ಪಷ್ಟ ಅರಿವು ಚೀನಾ ಸರ್ಕಾರಕ್ಕಿತ್ತು. ಆದರೆ ಈ ವಿಚಾರವನ್ನು ಡಿಸೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಮುಚ್ಚಿಟ್ಟಿತು. ಇತರ ದೇಶಗಳಿಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ವೈರಸ್ ಅಪಾಯದ ಕುರಿತು ಚೀನಾ ಒಂದೊಂದೇ ವಿಚಾರ ಹೊರಬಿಡಲು ಆರಂಭಿಸಿತು ಎಂದು ಲಿ ಮೆಂಗ್ ಹೇಳಿದ್ದಾರೆ.
ಚೀನಾ ಅಸಲಿ ಮುಖ ಬಯಲು ಮಾಡಿದ ತನ್ನ ವಿರುದ್ಧ ಚೀನಾ ಹಲವು ರೀತಿಯ ದಾಳಿ ಮಾಡಲು ಯತ್ನಿಸುತ್ತಿದೆ. ಅಜ್ಞಾತ ಸ್ಥಳದಲ್ಲಿರುವ ಲಿ ಮೆಂಗ್ ವಿರುದ್ಧ ಚೀನಾ ಸೈಬರ್ ಆಟ್ಯಾಕ್ ಸೇರಿದಂತೆ ಹಲವು ರೀತಿಯಲ್ಲಿ ದಾಳಿಗೆ ತಯಾರಿ ನಡೆಸುತ್ತಿದೆ. ಈ ಕುರಿತು ತನಗೆ ಅರಿವಿದೆ ಎಂದು ಲಿ ಮೆಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ