ಆನ್​ಲೈನ್​ ಅಧಿವೇಶನದ ನಡುವೆಯೇ ಪತ್ನಿಯ ಸ್ತನ ಚುಂಬಿಸಿದ ಸಂಸದ: ವಿಡಿಯೋ ವೈರಲ್

By Suvarna News  |  First Published Sep 26, 2020, 10:53 PM IST

ಕೊರೋನಾದಿಂದ ಆದ ತೊಂದರೆಗಳು ಒಂದಲ್ಲ ಎರಡಲ್ಲ. ಆನ್​ಲೈನ್​ ಸಂಸತ್​ ಅಧಿವೇಶನದ ನಡುವೆಯೇ ಪತ್ನಿಯ ಸ್ತನವನ್ನು ಚುಂಬಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಅರ್ಜೆಂಟೀನಾ, (ಸೆ.26)​: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಮತ್ತು ಖಾಸಗಿ ಸಭೆಗಳೆಲ್ಲ ವರ್ಚುವಲ್‌ ಮೂಲಕವೇ ನಡೆಯುತ್ತಿವೆ. ಈ ಆನ್‌ಲೈನ್ ಸಭೆ ವೇಳೆ ಒಂದಲ್ಲ ಒಂದು ಎಡವಟ್ಟುಗಳ ಬಗ್ಗೆ ವರದಿಯಾಗುತ್ತಲೇ ಇವೆ.

ಇಂತಹದ್ದೇ ಮತ್ತೊಂದು ಸದ್ದಿ ಬೆಳಕಿಗೆ ಬಂದಿದ್ದು, ಸಂಸದರೊಬ್ಬರು ಆನ್​ಲೈನ್​ ಸಂಸತ್​ ಅಧಿವೇಶನದ ನಡುವೆಯೇ ಪತ್ನಿಯ ಸ್ತನವನ್ನು ಚುಂಬಿಸಿ ರಾಜೀನಾಮೆ ನೀಡಿದ ಪ್ರಸಂಗವೂ ನಡೆದೆ.

Tap to resize

Latest Videos

ಹೌದು...ಅರ್ಜೆಂಟೀನಾದ ಸಂಸದರೊಬ್ಬರು ಆನ್​ಲೈನ್​ ಸಂಸತ್​ ಅಧಿವೇಶನದ ನಡುವೆಯೇ ಪತ್ನಿಯ ಸ್ತನವನ್ನು ಚುಂಬಿಸಿದಕ್ಕೆ ಸಂಸ್ಪೆಂಡ್​ ಆಗಿದ್ದು, ಇದೀಗ ನೈತಿಕ ಹೊಣೆ ಹೊತ್ತು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆನ್‌ಲೈನ್‌ ಕ್ಲಾಸ್ ವೇಳೆ ಪ್ರಸಾರವಾಯ್ತು ಪೋರ್ನ್, ಕಕ್ಕಾಬಿಕ್ಕಿಯಾದ ಮಕ್ಕಳು, ಟೀಚರ್..!

3 ಮಕ್ಕಳ ತಂದೆಯಾಗಿರುವ ಸಂಸದ ಜುವಾನ್​ ಎಮಿಲಿಯೋ ಅಮೇರಿ ಆನ್​ಲೈನ್​ ಅಧಿವೇಶನದ ವೇಳೆ ತಮ್ಮ ಪತ್ನಿಯ ಸ್ತನಗಳಿಗೆ ಚುಂಬಿಸಿದ್ದಾರೆ. ಇದು ಇನ್ನುಳಿದ ಸಂಸದರುಗಳನ್ನು ಮುಜುಗರಕ್ಕೀಡು ಮಾಡಿದೆ. ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಸಂಸದರ ದುರ್ವತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅರ್ಜೆಂಟೀನಾದ ವಾಯುವ್ಯ ಪ್ರಾಂತ್ಯ ಸಾಲ್ಟಾದ ಆಡಳಿತಾರೂಢ ಫ್ರೆಂಟೆ ಡಿ ಟೋಡ್ಸ್​ ಮೈತ್ರಿ ಸರ್ಕಾರವು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, 47 ವರ್ಷದ ಜುವಾನ್​ ಎಮಿಲಿಯೋರನ್ನು ಅಮಾನತು​ ಮಾಡಿ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದೆ. ಅಲ್ಲದೆ, ಸಹ ಸಂಸದರು ಸಹ ಎಮಿಲಿಯೋ ವಿರುದ್ಧ ಮತ ಚಲಾಯಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಮಿಲಿಯೋ ಎಲ್ಲರ ಒತ್ತಡಕ್ಕೆ ಮಣಿಸು ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಎಮಿಲಿಯೋ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.

click me!