ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು: ಕಾಲ್ಸೇತುವೆ ಹಾಳು ಮಾಡಿ ಪರಾರಿ!

By Suvarna NewsFirst Published Sep 29, 2021, 8:42 AM IST
Highlights

* ಭಾರತದ ಉತ್ತರಾಖಂಡಕ್ಕೆ ಕುದುರೆಗಳಲ್ಲಿ ಆಗಮಿಸಿ 3 ತಾಸು ಬೀಡು

* ಕುದುರೆಯೇರಿ ಬಂದು ಗಡಿಯೊಳಗೆ ನುಗ್ಗಿದ ಚೀನಾ ಯೋಧರು!

* 100 ಕುದುರೆ ಮೇಲೆ ಬಂದು, ಕಾಲ್ಸೇತುವೆ ಹಾಳು ಮಾಡಿ ಪರಾರಿ

* 3 ತಾಸು ಗಡಿಯಲ್ಲಿದ್ದು, ಭಾರತದ ಪಡೆಗಳು ಬರುವ ಮೊದಲೇ ವಾಪಸ್‌

ನವದೆಹಲಿ(ಸೆ.29): ಲಡಾಖ್‌ನಲ್ಲಿ ನಡೆದ ಚೀನಾ-ಭಾರತ(China-India) ಯೋಧರ ನಡುವಿನ ಸಂಘರ್ಷ ಜನಮಾನಸದಿಂದ ಇನ್ನೂ ಮರೆಯಾಗಿಲ್ಲ. ಅಷ್ಟರ ನಡುವೆ ಕಳೆದ ತಿಂಗಳು ಚೀನಾ ಯೋಧರು, ತಮ್ಮ ಗಡಿಗೆ ಹೊಂದಿಕೊಂಡಿರುವ ಭಾರತದ ಉತ್ತರಾಖಂಡಕ್ಕೆ(Uttarakhand) ಕುದುರೆಗಳಲ್ಲಿ ಆಗಮಿಸಿ 3 ತಾಸು ಬೀಡುಬಿಟ್ಟಿದ್ದರು ಎಂಬ ಸ್ಪೋಟಕ ವಿಷಯ ಬೆಳಕಿಗೆ ಬಂದಿದೆ.

ಅ.30ರಂದು ಚೀನಾ(China) ಸೇನೆಯ ಸುಮಾರು 100 ಯೋಧರು, 100 ಕುದುರೆಗಳಲ್ಲಿ ಉತ್ತರಾಖಂಡದ ಬರಹೋಟಿ ಗಡಿ ಪ್ರದೇಶದಲ್ಲಿ ಭಾರತದ ಗಡಿಯೊಳಗೆ ಪ್ರವೇಶ ಮಾಡಿದ್ದರು. ಅಲ್ಲಿ ಅವರು ಸುಮರು 3 ತಾಸು ಕಾಲ ಕಳೆದು ತೆರಳಿದ್ದಾರೆ. ತೆರಳುವ ವೇಳೆ ಅವರು ಕಾಲುಸೇತುವೆಯೊಂದನ್ನು ಹಾಳು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಚೀನಾ(China) ಯೋಧರ ಅತಿಕ್ರಮಣದ ವಿಷಯ ತಿಳಿದು ಭಾರತದ ಯೋಧರು ಹಾಗೂ ಐಟಿಬಿಪಿ ಪಡೆಗಳು ಅಲ್ಲಿಗೆ ಆಗಮಿಸುವಷ್ಟರಲ್ಲಿ ಚೀನಾ ಯೋಧರು ಅಲ್ಲಿಂದ ಕಾಲ್ಕಿತ್ತಿದ್ದರು. ಹೀಗಾಗಿ ಸಂಘರ್ಷ ನಡೆಯಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ‘ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದಿದ್ದಾರೆ.

ಪೂರ್ವ ಲಡಾಖ್‌ನ ಮುಂಚೂಣಿ ನೆಲೆಗಳಲ್ಲಿ ಚೀನಾ ಹೊಸದಾಗಿ 8 ಕಂಟೇನರ್‌ ರೀತಿಯ ಕಟ್ಟಡಗಳನ್ನು ನಿರ್ಮಿಸಿದ ಎಂಬ ಇತ್ತೀಚಿನ ಗುಪ್ತಚರ ವರದಿಗಳ ಬೆನ್ನಲ್ಲೇ ಚೀನಾದಿಂದ ಈ ಅತಿಕ್ರಮಣ ಬೆಳಕಿಗೆ ಬಂದಿದೆ.

click me!