
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ, ಭಾರತ ಸೇರಿದಂತೆ ಪ್ರಪಂಚದ ಪ್ರಬಲ ದೇಶಗಳ ಜೊತೆಗಿನ ತೆರಿಗೆ ಯುದ್ಧದ ನಂತರ ತನ್ನ ದೇಶದ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ವೀಸಾ ರದ್ದು ಮಾಡಲು ಮುಂದಾಗಿರುವುದು ಗೊತ್ತೆ. ಇದೇ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಒಂದಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದು ಎಂದು ಟ್ರಂಪ್ ಈಗಾಗಲೇ ಹೇಳಿದ್ದು, ಅಮೆರಿಕಾದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಮಾಡಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಹೊಸ ಸಂಕಷ್ಟ ಎದುರಾಗಿದೆ. ಹೀಗಿರುವಾಗ ಅಮೆರಿಕಾದಲ್ಲಿ ಓದುತ್ತಿರುವ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಪುತ್ರಿ ಕ್ಸಿ ಮಿಂಗ್ಜೆ ಅವರನ್ನು ಕೂಡ ಗಡಿಪಾರು ಮಾಡಬೇಕು ಎಂದು ಅಮೆರಿಕಾದಲ್ಲಿ ತೀವ್ರ ಆಗ್ರಹ ಕೇಳಿ ಬರುತ್ತಿದೆ.
ಟ್ರಂಪ್ ಆಡಳಿತ ಚೀನಾ ವಿದ್ಯಾರ್ಥಿಗಳ ವೀಸಾ ರದ್ದು ಮಾಡಲು ಮುಂದಾಗಿರುವುದರಿಂದ ಉಭಯ ದೇಶಗಳ ಮಧ್ಯೆ ಉದ್ವಿಗ್ನವಾದ ಸ್ಥಿತಿ ಇದೆ. ಇದರ ನಡುವೆ ಅಮೆರಿಕಾದ ಮೆಸ್ಸಾಚ್ಯುಸೆಟ್‌ನಲ್ಲಿ ಭಾರಿ ಭದ್ರತೆಯೊಂದಿಗೆ ನೆಲೆಸಿರುವ ಚೀನಾದ ಅಧ್ಯಕ್ಷರ ಪುತ್ರಿ ಕ್ಸಿ ಮಿಂಗ್ಜೆ ಅವರನ್ನು ಗಡೀಪಾರು ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿರುವ ಚೀನಿ ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಈ ವಾರದಿಂದ ಆರಂಭಿಸಲಾಗುತ್ತದೆ ಎಂದು ಅಮೆರಿಕ ಹೇಳಿತ್ತು. ಈ ಪ್ರಕ್ರಿಯೆಯಲ್ಲಿ ಚೀನಾ ಅಧ್ಯಕ್ಷರ ಮಗಳು ಕೈ ಮಿಂಗ್ಜೆ ಅವರಿಗೂ ಗಡೀಪಾರು ಕಂಟಕ ಎದುರಾಗಬಹುದು ಎನ್ನಲಾಗುತ್ತಿದೆ.
ಕ್ಸಿ ಮಿಂಗ್ಜೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪೆಂಗ್ ಲಿಯುವಾನ್ ದಂಪತಿಯ ಏಕೈಕ ಪುತ್ರಿ. 2010 ರಿಂದ 14 ರವರೆಗೆ ಸುಳ್ಳು ಹೆಸರಿನಡಿ ಈಕೆ ಅಮೆರಿಕದ ಹಾವರ್ಡ್ ವಿಶ್ವವಿದ್ಯಾಲಯದಲ್ಲಿ ಮನೋ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಿದ್ದಾಳೆ ಎನ್ನಲಾಗಿದೆ. ಇದಾದ ನಂತರ ಆಖೆ ಚೀನಾಗೆ ಹಿಂದಿರುಗಿದ್ದಳು. ಆದರೆ ನಂತರ 2019ರಿಂದ ಆಕೆ ಮತ್ತೆ ಹಾವರ್ಡ್ ವಿವಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾಳೆ. ಈಕೆಯ ಜೀವನವನ್ನು ಕ್ಸಿ ಜಿನ್‌ಪಿಂಗ್ ತುಂಬಾ ರಹಸ್ಯವಾಗಿ ಇಟ್ಟಿದ್ದು, ಈಕೆಯ ಫೋಟೋಗಳು ಕೂಡ ಎಲ್ಲೂ ಲಭ್ಯವಿಲ್ಲ ಎನ್ನಲಾಗುತ್ತಿದೆ.
ಪರಿಸ್ಥಿತಿ ಹೀಗಿರುವಾಗ ಅವರನ್ನು ಗಡೀಪಾರು ಮಾಡಬೇಕು ಎಂದು ತೀವ್ರ ಬಲಪಂಥೀಯ ರಾಜಕೀಯ ನಿರೂಪಕಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಸ್ನೇಹಿತೆಯೂ ಆಗಿರುವ
ಲಾರಾ ಲೂಮರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಲಾರಾ, ಲೆಟ್ಸ್ ಗೋ, ಕ್ಸಿ ಜಿಂಪಿಂಗ್ ಮಗಳನ್ನು ಗಡೀಪಾರು ಮಾಡೋಣ ಎಂದಿದ್ದಾರೆ. ಕ್ಸಿ ಮಿಂಗ್ಜೆ ಮ್ಯಾಸಚೂಸೆಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಹಾರ್ವರ್ಡ್‌ನಲ್ಲಿ ಓದುತ್ತಿದ್ದಾರೆಎಂದು ಅವರು ಹೇಳಿದರು. ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ಪೀಪಲ್ಸ್ ಲಿಬರೇಷನ್ ಆರ್ಮಿಯ ಗಾರ್ಡ್‌ಗಳು ಯುಎಸ್ ನೆಲದಲ್ಲಿ ಅವರಿಗೆ ಖಾಸಗಿ ಭದ್ರತೆಯನ್ನು ಒದಗಿಸುತ್ತಾರೆ ಎಂದು ಮೂಲಗಳು ನನಗೆ ಹೇಳುತ್ತವೆ ಲಾರಾ ರೂಮರ್ ಹೇಳಿದ್ದಾರೆ. ಜೊತೆಗೆ ಈ ಪೋಸ್ಟನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಟ್ಯಾಗ್ ಮಾಡಿದ್ದಾರೆ.
ಆದರೆ ಲಾರಾ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭ್ಯವಿಲ್ಲ ಇತ್ತ ಡೊನಾಲ್ಡ್ ಟ್ರಂಪ್ ಆಡಳಿತವು ಹಾರ್ವರ್ಡ್ ಅನ್ನು ಯೆಹೂದಿಗಳ ವಿರೋಧವನ್ನು ಬೆಂಬಲಿಸುತ್ತಿದೆ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷದೊಂದಿಗೆ ಅದು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ. ಹೀಗೆ ಆರೋಪಿಸುತ್ತಾ ಟ್ರಂಪ್ ದೇಶದ ವಿವಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸುವುದಕ್ಕೆ ನಿಷೇಧ ಹೇರಿದ್ದರು. ಆದರೆ ಅಮೆರಿಕಾದ ಫೆಡರಲ್ ನ್ಯಾಯಾಧೀಶರು ಟ್ರಂಪ್ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ