
ಸಿಂಗಪುರ(ಜೂ. 08) ಒಂದೊಂದು ಸಲ ಕೆಲ ಘಟನೆಗಳು ಬಹಳಷ್ಟು ಪರಿಣಾಮ ಉಂಟುಮಾಡಿಬಿಡುತ್ತವೆ. ಸಿಂಗಪುರ್ ನಲ್ಲಿ ಚೀನಾ ವ್ಯಕ್ತಿ ಭಾರತೀಯ ಮೂಲದ ವ್ಯಕ್ತಿಯನ್ನು ಹೀಯಾಳಿಸಿದ್ದಾನೆ, ಹಂಗಿಸಿದ್ದಾನೆ.
ಸಿಂಗಪುರ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ದೇವ್ ಪ್ರಕಾಶ್ ತನ್ನ ಗೆಳತಿ( ಅರ್ಧ ಚೈನೀಸ್-ಅರ್ಧ ತೈವಾನ್)ಯೊಂದಿಗೆ ರೆಸ್ಟೋರೆಂಟ್ ಗೆ ತೆರಳಿದ್ದಾನೆ. ಈ ವೇಳೆ ಎದುರಿಗೆ ಸಿಕ್ಕ ಚೀನಾ ವ್ಯಕ್ತಿ ಹಂಗಿಸಿದ್ದಾನೆ.
ವೀಲಾಕ್ ಪ್ಲೇಸ್ ಮತ್ತು ಫಾರ್ ಈಸ್ಟ್ ಶಾಪಿಂಗ್ ಸೆಂಟರ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಭಾರತೀಯ ಮೂಲದ ವ್ಯಕ್ತಿಗೆ ಬೆದರಿಕೆ ಹಾಕಿ ನೀನು ನಿನ್ನ ಜನಾಂಗದವರ ಜತೆ ಮಾತ್ರ ಡೇಟಿಂಗ್ ಮಾಡಬೇಕು ಎಂದು ಅಪ್ಪಣೆ ಮಾಡಿದ್ದಾನೆ.
ಇದು ನಿಮಗೆ ಸರಿ ಕಾಣುತ್ತದೆಯಾ, ನೀವು ಚೀನಾ ಹೆಣ್ಣು ಮಕ್ಕಳ ಮೇಲೆ ಏಕೆ ಕಣ್ಣು ಹಾಕುತ್ತೀರಿ ಎಂದು ಭಾರತೀಯ ಮೂಲದ ವ್ಯಕ್ತಿಗೆ ಪ್ರಶ್ನೆ ಮಾಡಿದ್ದಾನೆ. ಭಾರತೀಯ ಮೂಲದ ವ್ಯಕ್ತಿ ಜತೆ ಡೇಟಿಂಗ್ ಮಾಡುವುದು ಗೊತ್ತಾದರೆ ನಿನ್ನ ತಂದೆ-ತಾಯಿ ಹೆಮ್ಮೆ ಪಡುತ್ತಾರೆಯೇ ಎಂದು ಯುವತಿಯನ್ನು ಪ್ರಶ್ನಿಸಿದ್ದಾನೆ.
ಆದ ಘಟನೆಯ ಸಂಪೂರ್ಣ ವಿವರವನ್ನು ಯುವತಿ ರೇಕಾರ್ಡ್ ಮಾಡಿಕೊಂಡಿದ್ದಾಳೆ. ಪ್ರಕಾಶ್ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಪ್ರತಿಕ್ರಿಯೆಗಳು ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ