ಚೀನಾದ  ಕೊಳಕು ಕೊರೋನಾ ಜಗತ್ತಿಗೆ ತಿಳಿಸಿದ್ದ  ದಿಟ್ಟೆಗೆ  4  ವರ್ಷ ಜೈಲು ಶಿಕ್ಷೆ!

By Suvarna NewsFirst Published Dec 28, 2020, 4:44 PM IST
Highlights

ಚೀನಾದ ಕೊಳಕು ಕೊರೋನಾ ಜಗತ್ತಿಗೆ ತಿಳಿಸಿದ  ವಕೀಲೆಗೆ ನಾಲ್ಕು ವರ್ಷ ಜೈಲು ಶಿಕ್ಷೆ/ ಕಳೆದ ಫೆಬ್ರವರಿಯಲ್ಲಿ ವರದಿ ಮಾಡಿದ್ದರು/ ವರದಿ ಮಾಡಿ ಮೂರು ತಿಂಗಳಿಗೆ  ನಾಪತ್ತೆಯಾಗಿದ್ದರು/ ನಂತರ ಚೀನಾ  ಆಡಳಿತ ತಾವೇ ಬಂಧನ ಮಾಡಿದ್ದೇನೆ ಎಂದು ತಿಳಿಸಿತ್ತು

ಬೀಜಿಂಗ್(ಡಿ.  28)  ಚೀನಾದ ವುಹಾನ್ ನಗರದಿಂದಲೇ ಕೊರೋನಾ ಹುಟ್ಟಿಕೊಂಡಿದ್ದು ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ ಈ ಕೊಳಕನ್ನು ಜಗತ್ತಿಗೆ ಪರಿಚಯ ಮಾಡಿದ ಲೇಡಿ  ಇದೀಗ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ.

ವುಹಾನ್ ನಗರದಿಂದ ಕೊರೋನಾ ಆತಂಕ ಮತ್ತು ಹಬ್ಬುತ್ತಿರುವ ರೀತಿಯ ಬಗ್ಗೆ ವರದಿ ತಯಾರಿಸಿ ಬಹಿರಂಗ ಮಾಡಿದ ಕಾರಣಕ್ಕೆ ಚೀನಾ ನ್ಯಾಯಾಲಯ ನಾಲ್ಕು ವರ್ಷದ ಶಿಕ್ಷೆ ವಿಧಿಸಿದೆ. ಜಗಳ ಮತ್ತು ಸಮಸ್ಯೆ ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದವನ್ನು ಸಾಬೀತು ಮಾಡಿಕೊಂಡಿದ್ದಾರೆ.

ಚೀನಾ ಗಡಿಯಲ್ಲಿ ಪದೇ ಪದೇ ಕ್ಯಾತೆ ಮಾಡುತ್ತಿರುವುದು ಯಾಕೆ?

37  ವರ್ಷದ  ಮಹಿಳೆ ಜಾಂಗ್ ಜಂಗ್ ವೃತ್ತಿಯಿಂದ ವಕೀಲೆ. ವಿಹಾನ್ ನಗರದಲ್ಲಿನ ಕೊರೋನಾ ಸಂಕಷ್ಟವನ್ನು ಫೆಬ್ರವರಿಯಲ್ಲಿ ಜಗತ್ತಿಗೆ ತಿಳಿಸುವ ಕೆಲಸ ಮಾಡಿದ್ದರು.  ವರದಿ ಮಾಡಿದ ಪತ್ರಕರ್ತರ ಮೇಲೆ ಚೀನಾ ಹೇಗೆಲ್ಲ ದಬ್ಬಾಳಿಕೆ ಮಾಡಿದೆ ಎಂಬುದನ್ನು ತಿಳಿಸಿದ್ದರು. ಈಕೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇದಾಗಿ ಮೂರು ತಿಂಗಳಿನ ನಂತರ  ಜಾಂಗ್ ನಾಪತ್ತೆಯಾಗಿದ್ದರು. ನಂತರ  ಆಕೆಯನ್ನು ಬಂಧಿಸಲಾಗಿದೆ ಎಂದು ಚೀನಾ ಹೇಳಿಕೊಂಡಿತ್ತು.  ಆಕೆಯ ಮೇಲೆ ಆರೋಪ ಪಟ್ಟಿ ಹೊರಿಸಿ ಅದನ್ನು ಸಾಬೀತು ಮಾಡಲಾಗಿತ್ತು. ಇದೀಗ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಮೇಲೆ ಆಕೆಗೆ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ಕೊರೋನಾಕ್ಕೆ ಮೂಲ ಕಾರಣ  ಚೀನಾ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ.  ಅಮೆರಿಕ ಸೇರಿದಂತೆ ಎಲ್ಲ ರಾಷ್ಟ್ರಗಳು ಇದನ್ನು  ಹೇಳಿವೆ. ಆದರೆ ಚೀನಾ ಮಾತ್ರ ಯಾವ ಕಾಲದಲ್ಲಿಯೂ ಸತ್ಯ ಒಪ್ಪಿಕೊಂಡಿಲ್ಲ. 

click me!