ನೇಪಾಳ ಸರ್ಕಾರದ ಬಿಕ್ಕಟ್ಟು ಪರಿಹರಿಸಲು ಚೀನಾ ಮಧ್ಯಪ್ರವೇಶ

By Suvarna NewsFirst Published Dec 27, 2020, 12:44 PM IST
Highlights

ಅಧಿಕಾರ ಸಂಬಂಧ ನೇಪಾಳದ ಆಡಳಿತಾರೂಢ ಎನ್‌ಸಿಪಿ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನಕ್ಕೆ ಖುದ್ದು ಚೀನಾ ಸರ್ಕಾರವೇ ಮುಂದಾಗಿದೆ.

ಕಾಠ್ಮಂಡು(ಡಿ.27): ಭಾರತ ಕುರಿತಂತೆ ನೇಪಾಳದ ಬದಲಾದ ಧೋರಣೆಗೆ ಚೀನಾದ ಕುಮ್ಮಕ್ಕು ಕಾರಣ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಅಧಿಕಾರ ಸಂಬಂಧ ನೇಪಾಳದ ಆಡಳಿತಾರೂಢ ಎನ್‌ಸಿಪಿ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಶಮನಕ್ಕೆ ಖುದ್ದು ಚೀನಾ ಸರ್ಕಾರವೇ ಮುಂದಾಗಿದೆ.

ವಾಸ್ತವ ಪರಿಸ್ಥಿತಿ ಅವಲೋಕನಕ್ಕಾಗಿ ಚೀನಾ ಸರ್ಕಾರ ತನ್ನ ಉಪ ಸಚಿವ ನೇತೃತ್ವದ ನಾಲ್ವರು ಸದಸ್ಯರ ತಂಡವೊಂದನ್ನು ರವಾನಿಸಿದ್ದು, ಈ ತಂಡವು ಭಾನುವಾರ ನೇಪಾಳಕ್ಕೆ ಆಗಮಿಸಲಿದೆ.

ಮಾಡೆರ್ನಾ ಲಸಿಕೆ ಪಡೆದ ಅಮೆರಿಕ ವೈದ್ಯನಿಗೆ ಗಂಭೀರ ಅಲರ್ಜಿ

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಶಿಫಾರಸ್ಸಿನ ಮೇರೆಗೆ ನೇಪಾಳ ರಾಷ್ಟ್ರಪತಿ ಸಂಸತ್ತನ್ನು ವಿಸರ್ಜನೆ ಮಾಡಿದ್ದಾರೆ. ಈ ವಿಚಾರದಿಂದ ಎನ್‌ಸಿಪಿ ಪಕ್ಷದಲ್ಲಿ ಓಲಿ ಹಾಗೂ ಪ್ರಚಂಡ ನಡುವೆ ಸಮರ ನಡೆಯುತ್ತಿದೆ.

ಭೇಟಿಯ ಕಾರ್ಯಸೂಚಿಯ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳು ಲಭ್ಯವಿಲ್ಲದಿದ್ದರೂ, ಹಿರಿಯ ಸದಸ್ಯ ಎನ್‌ಸಿಪಿ ನಾಯಕರು ಭಾನುವಾರ ಬೆಳಗ್ಗೆ ಗಯೋ ಕಠ್ಮಂಡುವಿನಲ್ಲಿ ಇಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಲಿದ್ದಾರೆ.

click me!