ಕಳೆದೊಂದು ತಿಂಗಳಿನಿಂದ ಕಾಣೆಯಾಗಿರುವ ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್‌ರನ್ನು ಪದವಿಯಿಂದ ತೆಗೆದು, ಅವರ ಸ್ಥಾನಕ್ಕೆ ಈ ಹಿಂದೆ ವಿದೇಶಾಂಗ ಸಚಿವರಾಗಿದ್ದ ವಾಂಗ್ ಯೀ ಅವರನ್ನೇ ಮರು ನೇಮಕ ಮಾಡಲಾಗಿದೆ.
ಬೀಜಿಂಗ್: ಕಳೆದೊಂದು ತಿಂಗಳಿನಿಂದ ಕಾಣೆಯಾಗಿರುವ ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್‌ರನ್ನು ಪದವಿಯಿಂದ ತೆಗೆದು, ಅವರ ಸ್ಥಾನಕ್ಕೆ ಈ ಹಿಂದೆ ವಿದೇಶಾಂಗ ಸಚಿವರಾಗಿದ್ದ ವಾಂಗ್ ಯೀ ಅವರನ್ನೇ ಮರು ನೇಮಕ ಮಾಡಲಾಗಿದೆ. ಆದರೆ ಕಿನ್ ಗಾಂಗ್ ಅವರ ಕಣ್ಮರೆ ಬಗ್ಗೆ ಚೀನಾ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ವಾಂಗ್ ಹೀ ಈ ಹಿಂದೆ 2013ರಲ್ಲೂ ಚೀನಾ ವಿದೇಶಾಂಗ ಸಚಿವನಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಕಿನ್ ಗಾಂಗ್ ನಾಪತ್ತೆಯಾಗಿರುವ ಕಾರಣ ಇವರನ್ನು ಪುನಃ ಸಚಿವರಾಗಿ ನೇಮಕ ಮಾಡಿದೆ.
3 ವಾರದಿಂದ ಚೀನಾ ವಿದೇಶಾಂಗ ಸಚಿವ ಗಾಂಗ್ ನಾಪತ್ತೆ
ಕಳೆದ ಕೆಲ ದಿನಗಳಿಂದ ಚೀನಾದ ವಿದೇಶಾಂಗ ಸಚಿವ ಹಾಗೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಆಪ್ತ ಕ್ವಿನ್ ಗಾಂಗ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಕಳೆದ ಮೂರು ವಾರಗಳಿಂದ 57 ವರ್ಷದ ಕ್ವಿನ್ ಎಲ್ಲಿಯೂ ಉಪಸ್ಥಿತರಿದ್ದುದು ಕಂಡುಬಂದಿಲ್ಲ. ಆದರೆ ಕೆಲ ಆರೋಗ್ಯ ಸಮಸ್ಯೆಯ ಕಾರಣಗಳಿಂದ ಕ್ವಿನ್ ಕಾಣಿಸಿಕೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಜುಲೈ 1 ರ ವೇಳೆಗೆ ದೇಶದ ಜನಸಂಖ್ಯೆ 139 ಕೋಟಿ, ಲೋಕಸಭೆಗೆ ಕೇಂದ್ರದ ಮಾಹಿತಿ!
ರಷ್ಯಾ ಅಧ್ಯಕ್ಷ (Russia president) ವ್ಲಾಡಿಮಿರ್ ಪುಟಿನ್ (vladimir Putin)ವಿರುದ್ಧ ವ್ಯಾಗ್ನರ್ ಪಡೆ ದಂಗೆಯೆದ್ದ ಬಳಿಕ ಜೂ.25 ರಂದು ಬೀಜಿಂಗ್‌ನಲ್ಲಿ ಶ್ರೀಲಂಕಾ (Srilanka), ವಿಯೆಟ್ನಾಂ ಮತ್ತು ರಷ್ಯಾಗಳು ನಡೆಸಿದ ಸಭೆಯಲ್ಲಿ ಕೊನೆಯದಾಗಿ ಕ್ವಿನ್ ಕಾಣಿಸಿಕೊಂಡಿದ್ದರು. ಚೀನಾ ರಾಜಕಾರಣಿಗಳು (China Politicians) ನಾಪತ್ತೆ ಆಗುವುದು ಮೊದಲೇನಲ್ಲ. ಈ ಹಿಂದೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಹಲವು ದಿನಗಳ ಕಾಲ ಬಹಿರಂಗವಾಗಿ ಕಾಣಿಸಿಕೊಳ್ಳದೇ ಊಹಾಪೋಹ ಸೃಷ್ಟಿಯಾಗಿದ್ದವು.
ಚೀನಾದಲ್ಲಿನ ಕೊನೆಯ ಭಾರತೀಯ ಪತ್ರಕರ್ತನಿಗೆ ಗೇಟ್ಪಾಸ್
ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಮುಂದುವರಿದಿದ್ದು, ಚೀನಾದಲ್ಲಿ ಬಾಕಿ ಉಳಿದಿದ್ದ ಕೊನೆಯ ಭಾರತೀಯ ಪತ್ರಕರ್ತನಿಗೆ ಸ್ವದೇಶಕೆ ತೆರಳುವಂತೆ ಕ್ಸಿ ಜಿನ್‌ಪಿಂಗ್ ಸರ್ಕಾರ ಕೆಲ ದಿನಗಳ ಹಿಂದೆ ಸೂಚಿಸಿತ್ತು. ಭಾರತದ ದೊಡ್ಡ ಸುದ್ದಿಸಂಸ್ಥೆಯಾದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿಗಾರ ಕೆಜೆಎಂ ವರ್ಮಾ ಅವರಿಗೆ ಇದೇ ತಿಂಗಳು ದೇಶ ತೊರೆಯುವಂತೆ ಚೀನಾ ಸರ್ಕಾರ ಆದೇಶಿಸಿದೆ. ಇದರೊಂದಿಗೆ ಚೀನಾದಲ್ಲಿ ಇನ್ನು ಯಾವುದೇ ಭಾರತದ ಮಾಧ್ಯಮ ಪ್ರತಿನಿಧಿಯ ಉಪಸ್ಥಿತಿ ಇರುವುದಿಲ್ಲ. ಈ ಮುನ್ನ ಪಿಟಿಐ, ಹಿಂದುಸ್ತಾನ ಟೈಮ್ಸ್, ದ ಹಿಂದೂ ಹಾಗೂ ಪ್ರಸಾರ ಭಾರತಿ- ಪತ್ರಕರ್ತರು (ನಾಲ್ವರು) ಚೀನಾದಲ್ಲಿ ಇರುತ್ತಿದ್ದರು. ಕಳೆದ 2 ತಿಂಗಳಲ್ಲಿ 3 ಪತ್ರಕರ್ತರಿಗೆ ಗೇಟ್ಪಾಸ್ ನೀಡಿದ್ದ ಚೀನಾ, ಈಗ ಕೊನೆಯ ಪತ್ರಕರ್ತನನ್ನೂ ಹೊರಹಾಕಲು ತೀರ್ಮಾನಿಸಿದೆ.
ಚೀನಿ ಆಪ್‌ಗಳಿಂದ ಭಯೋತ್ಪಾದನೆಗೆ ಆರ್ಥಿಕ ನೆರವು: ಭಾರತದಲ್ಲಿ 700 ಕೋಟಿ ವಂಚನೆ