
ಇಸ್ಲಾಮಾಬಾದ್ (ಆ.13): 'ಭಾರತ ಹಾಗೂ ವಿಶ್ವದ ಅರ್ಧಭಾಗದ ಮೇಲೆ ಅಣ್ವಸ್ತ್ರ ದಾಳಿ ಮಾಡ್ತವೆ. ಕ್ಷಿಪಣಿ ಹಾರಿಸಿ ಉಡೀಸ್ ಮಾಡ್ತವೆ...' ಹೀಗೆ ಸಾಲು ಸಾಲು ಯುದ್ಧದ ಧಮಕಿಗಳೆಲ್ಲ ಆಯ್ತು. ಇದೀಗ ಸಿಂಧು ನದಿ ಒಪಂದ ಮರುಸ್ಥಾಪನೆಗೆ ಉಗ್ರ ಪೋಷಕ ಪಾಕಿಸ್ತಾನವು ಭಾರತದ ಮುಂದೆ ಭಿಕ್ಷೆಗೆ ನಿಂತಿದೆ ಹಾಗೂ 'ಪಾಕ್‌ಗೆ ನೀರು ಬಿಡಿ' ಎಂದು ಭಾರತಕ್ಕೆ ಕೋರಿದೆ.
ಬುಧವಾರ ಟ್ವಿಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, 'ಸಿಂಧು ನದಿ ಒಪ್ಪಂದವನ್ನು ನಿಷ್ಠೆಯಿಂದ ಮರುಸ್ಥಾಪಿಸುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ' ಎಂದು ಕೋರಿದೆ.
ಅಲ್ಲದೆ, 'ಪಾಕಿಸ್ತಾನದ ಅನಿಯಂತ್ರಿತ ಬಳಕೆ ಗಾಗಿ ಭಾರತವು ಪಶ್ಚಿಮಾಭಿಮುಖವಾಗಿರುವ ನದಿಗಳ ನೀರನ್ನು ಹರಿಯಲು ಬಿಡಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಮೂಲ ಜಲ ಒಪ್ಪಂದದಲ್ಲಿ ನಿಗದಿಪಡಿಸಿದ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಭಾರತ ಬದ್ಧವಾಗಿರಬೇಕು ಎಂದು ಕೂಡ ಕೋರ್ಟು ಹೇಳಿದೆ' ಎಂದು ಜಲ ಹಂಚಿಕೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪಾಕ್ ಉಲ್ಲೇಖಿಸಿದೆ.
ಇಸ್ಲಾಮಾಬಾದ್: ಪಾಕ್ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅಣುದಾಳಿ ಬೆದರಿಕೆ ಹಾಕಿದ ನಂತರ ಪಾಕ್ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಅದೇ ಮಾತು ಆಡಿದ್ದಾರೆ. 'ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಪರಿಗಣಿಸದೆ ಬೇರೆ ದಾರಿಯಿಲ್ಲ' ಎಂದು ಅವರು ಎಚ್ಚರಿಸಿದ್ದಾರೆ.
ಸಿಂದ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 'ಸಿಂಧು ಒಪ್ಪಂದ ಸ್ಥಗಿತಗೊಳಿಸಿ ಭಾರತವು ಪಾಕಿಸ್ತಾನಕ್ಕೆ ದೊಡ್ಡ ಹಾನಿ ಉಂಟುಮಾಡಿದೆ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲಾ ಪಾಕಿಸ್ತಾನಿಗಳು ಒಗ್ಗಟ್ಟಾಗಬೇಕು ಎಂದು ಒತ್ತಾಯಿಸಿದರು.'ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎನಿಸುತ್ತಿದೆ. ನೀವು (ಪಾಕಿಸ್ತಾನಿಗಳು) 6 ನದಿಗಳನ್ನು ಮರಳಿ ಪಡೆಯುವಷ್ಟು ಯುದ್ಧಕ್ಕೆ ಬಲಿಷ್ಠರಾಗಿದ್ದೀರಿ. ಯುದ್ಧ ನಡೆದರೆ ಭಾರತ ಸೋಲಲಿದೆ' ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ