ಪಾಕ್‌ಗೆ ಚೀನಾ 40 ಜೆ-35 ಅತ್ಯಾಧುನಿಕ ಫೈಟರ್ ಜೆಟ್?

Published : Jun 21, 2025, 05:25 AM IST
pakistan china

ಸಾರಾಂಶ

ತನ್ನ ಮಿತ್ರದೇಶ ಪಾಕಿಸ್ತಾನಕ್ಕೆ ಚೀನಾ ‘ಶೆನ್ಯಾಂಗ್ ಜೆ-35’ ಐದನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಪೂರೈಸಲಿದೆ

ನವದೆಹಲಿ: ತನ್ನ ಮಿತ್ರದೇಶ ಪಾಕಿಸ್ತಾನಕ್ಕೆ ಚೀನಾ ‘ಶೆನ್ಯಾಂಗ್ ಜೆ-35’ ಐದನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಪೂರೈಸಲಿದೆ. ಈ ಮೂಲಕ 5ನೇ ತಲೆಮಾರಿನ ವಿಮಾನ ಹೊಂದಿದ ಕೆಲವೇ ಕೆಲವು ದೇಶಗಳ ಸಾಲಿಗೆ ಪಾಕ್‌ ಸೇರಲಿದೆ ಎಂದು ವರದಿಗಳು ಹೇಳಿವೆ. ಇದು ವಿಶ್ವದಲ್ಲೇ ಅತ್ಯಾಧುನಿಕ ಫೈಟರ್‌ ಜೆಟ್‌ ಆಗಿದ್ದು, ಭಾರತದ ಬಳಿಯೂ ಇಂಥ ಯುದ್ಧ ವಿಮಾನವಿಲ್ಲ. ಈ ಬಗ್ಗೆ ಭಾರತದ ರಕ್ಷಣಾ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕ್‌ ಯುದ್ಧ ವಿಮಾನ ಪೈಲಟ್‌ಗಳ ತಂಡವು ಆರು ತಿಂಗಳಿಗಿಂತ ಹೆಚ್ಚು ಕಾಲ ಚೀನಾದಲ್ಲಿದೆ. ಅಲ್ಲಿ ಈ ವಿಮಾನಗಳ ತರಬೇತಿಯನ್ನೂ ಅದು ಪಡೆಯುತ್ತಿದೆ. ಡಿಸೆಂಬರ್ ವೇಳೆಗೆ 40 ಸಮರ ವಿಮಾನಗಳು ಫಾಕ್ ಕೈಸೇರಬಹುದು ಎನ್ನಲಾಗಿದೆ.

ಈ ಬಗ್ಗೆ ಬಗ್ಗೆ ಭಾರತೀಯ ವಾಯುಪಡೆಯ ಹಲವಾರು ನಿವೃತ್ತ ಯೋಧರು ಕಳವಳ ವ್ಯಕ್ತಪಡಿಸಿದ್ದಾರೆ. ‘ಸ್ವಾತಂತ್ರ್ಯದ ನಂತರ, ಚೀನಾ ಅಲ್ಲದಿದ್ದರೂ, ಕನಿಷ್ಠ ಪಾಕಿಸ್ತಾನದ ಮೇಲೆ ಮೇಲುಗೈ ಸಾಧಿಸಲು ನಾವು ಖರೀದಿ ಕ್ಷೇತ್ರದಲ್ಲಿ ಬಹಳ ಕಠಿಣ ಹೋರಾಟ ನಡೆಸಿದ್ದೇವೆ. ಆದರೆ ನಮ್ಮ ಬಳಿಯೂ ಇಲ್ಲದ ಜೆ-35 ನ ಯಾವುದೇ ಆವೃತ್ತಿಯು ಭಾರತದ ಪಾಲಿಗೆ ಕಳವಳಕಾರಿ. ಹೀಗಾಗಿ ಭಾರತವೂ ತನ್ನದೇ ವೇದಿಕೆ ಸ್ಥಾಪಿಸಿಕೊಂಡು ಇಂಥ ಸಮರ ವಿಮಾನ ಹೊಂದುವದು ಅಗತ್ಯ’ ಎಂದಿದ್ದಾರೆ.

ವಿಮಾನ ದುರಂತ: 220 ಮೃತರ ಗುರುತು ಪತ್ತೆ, 202 ಮೃತದೇಹ ಹಸ್ತಾಂತರ

ಅಹಮದಾಬಾದ್‌: ಇತ್ತೀಚೆಗೆ ಇಲ್ಲಿ ಸಂಭವಿಸಿದ ಏರಿಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ 220 ಜನರ ಗುರುತು ಪತ್ತೆ ಆಗಿದೆ. ಆ ಪೈಕಿ 202 ಸಂತ್ರಸ್ತರ ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.‘ಗುರುತು ಪತ್ತೆಯಾಗದಷ್ಟು ಹಲವರ ಮೃತದೇಹಗಳು ಸುಟ್ಟು ಕರಕಲಾಗಿವೆ. ಡಿಎನ್‌ಎ ಮಾದರಿ ಹೊಂದಾಣಿಕೆಯಾದ 220 ಸಂತ್ರಸ್ತರ ಕುಟುಂಬ ಸಂಪರ್ಕಿಸಿದ್ದೇವೆ. ಗುರುತು ಪತ್ತೆ ಕಾರ್ಯ ಸದ್ಯ ಪ್ರಗತಿಯಲ್ಲಿದೆ’ ಆರೋಗ್ಯ ಸಚಿವ ಹೃಷಿಕೇಶ್‌ ಪಟೇಲ್ ಹೇಳಿದ್ದಾರೆ.

ಜೂ.12ಕ್ಕೆ 242 ಮಂದಿ ಪ್ರಯಾಣಿಕರು, ಸಿಬ್ಬಂದಿ ಹೊತ್ತು ಲಂಡನ್‌ಗೆ ತೆರಳುತ್ತಿದ್ದ ಏರಿಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನವಾಗಿತ್ತು. 241 ಮಂದಿ, ಸಿಬ್ಬಂದಿ ಮೃತರಾದರೆ, ಒಬ್ಬರು ಬದುಕಿದ್ದರು. ನೆಲದ ಮೇಲಿದ್ದ 29 ಜನ ಸಾವನ್ನಪ್ಪಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!