ಉಯಿಘರ್ ಸಮುದಾಯದ ಮೇಲೆ ಕ್ರೌರ್ಯ: ಚೀನಾ ವಿರುದ್ಧ ಮೊದಲ ಬಾರಿ ಗುಡುಗಿದ ವಿಶ್ವ ಸಂಸ್ಥೆ

Published : Sep 02, 2022, 12:44 PM ISTUpdated : Sep 02, 2022, 01:17 PM IST
ಉಯಿಘರ್ ಸಮುದಾಯದ ಮೇಲೆ ಕ್ರೌರ್ಯ: ಚೀನಾ ವಿರುದ್ಧ ಮೊದಲ ಬಾರಿ ಗುಡುಗಿದ ವಿಶ್ವ ಸಂಸ್ಥೆ

ಸಾರಾಂಶ

UN Report on human rights violations in China: ಈ ಹಿಂದೆಂದೂ ಚೀನಾ ವಿರುದ್ಧ ಧ್ವನಿ ಎತ್ತದ ವಿಶ್ವ ಸಂಸ್ಥೆ ಇಂದು ಚೀನಾ ಕ್ರೌರ್ಯದ ವಿರುದ್ಧ ಗುಡುಗಿದೆ

ನವದೆಹಲಿ (ಸೆ. 02): ವಿಶ್ವಸಂಸ್ಥೆ (United Nations) ಚೀನಾದ ರಕ್ಷಾ ಕವಚವಾಗಿ ಕೆಲಸ ಮಾಡುತ್ತೆ, ಚೀನಾದ ಯಾವುದೇ ನಡೆಯನ್ನೂ ವಿಶ್ವ ಸಂಸ್ಥೆ ಪ್ರಶ್ನಿಸುವುದಿಲ್ಲ ಎಂಬ ಆರೋಪ ವಿಶ್ವ ಸಂಸ್ಥೆ ಮೇಲಿತ್ತು. ಈ ಆರೋಪವನ್ನು ಜಗತ್ತಿನ ಪ್ರತಿಯೊಂದು ದೇಶಗಳು ವಿಶ್ವ ಸಂಸ್ಥೆ ಮೇಲೆ ಈ ಹಿಂದೆ ಮಾಡಿದ್ದವು. ವಿಶ್ವ ಸಂಸ್ಥೆ ನಡವಳಿಕೆ ನೋಡಿದರೆ ಇದು ನಿಜ ಕೂಡ ಎಂದೆನಿಸುತ್ತಿತ್ತು. ಆದರೆ ಈ ಹಿಂದೆಂದೂ ಚೀನಾ ವಿರುದ್ಧ ಧ್ವನಿ ಎತ್ತದ ವಿಶ್ವ ಸಂಸ್ಥೆ ಇಂದು ಚೀನಾ ಕ್ರೌರ್ಯದ ವಿರುದ್ಧ ಗುಡುಗಿದೆ. 

ಮಿಸ್ಸಿಂಗ್ ಮತ್ತು ಪತ್ತೆಯಾಗುತ್ತಿರುವ ಅನಾಥ ಶವಗಳ ಕುರಿತೇ  ವಿಶ್ವಸಂಸ್ಥೆ ಹೈ ಕಮಿಷನರ್ ಮಾತನಾಡಿದ್ದಾರೆ. ಹಾಗೆನೇ ಅವರು ಜಗತ್ತಿನ ಮುಂದಿಟ್ಟ 48 ಪುಟಗಳ ವರದಿಯಲ್ಲಿ ಕೂಡ ಅದೇ ಪ್ರಮುಖವಾಗಿದೆ.  ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಹೈ ಕಮಿಷನರ್ ಮಿಚೆಲ್ ಚೀನಾ ಉಯಿಘರ್ ಕುರಿತು ವರದಿ ಸಿದ್ಧಪಡಿಸಿದ್ದು, ತಮಗೆ ಬೆದರಿಕೆ ಇದ್ರೂ ಸಹ ಯಾವುದಕ್ಕೂ ಬಗ್ಗದೆ ವರದಿ ಜಗತ್ತಿನ ಮುಂದಿಟ್ಟಾದ್ದಾರೆ. 

ಮಿಚೆಲ್ ಅವರ ಈ ವರದಿನ್ನು ಚೀನಾ ಕೇವಲ ವಿರೋಧಿಸಿಲ್ಲ. ವರದಿ ಬಿಡುಗಡೆಗೂ ಮುನ್ನ, ಬಿಡುಗಡೆ ಮಾಡದಂತೆ ಮಿಚೆಲ್ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು. ಬೆದರಿಕೆ ಒಡ್ಡಲಾಗಿತ್ತು. ವರದಿ ಪ್ರಸಾರ ತಪ್ಪಿಸಲು ಚೀನಾ ಸಾಕಷ್ಟು ಕಸರತ್ತು ಮಾಡಿತ್ತು.  ಮಿಚೆಲ್ ಈ ವರದಿಯನ್ನು 2017ರಲ್ಲೇ ಸಿದ್ದಪಡಿಸಿದ್ದರು. ಆದರೆ ಪ್ರಕಟ ಮಾಡಲು ಆಗಿರಲಿಲ್ಲ. ಪ್ರಕಟ ಮಾಡದಂತೆ ಚೀನಾ ತುಂಬಾ ಒತ್ತಡ ಹಾಕಿತ್ತು. ತನ್ನ ಶಕ್ತಿ ಬಳಸಿ ಮಿಚೆಲ್ ಅವರನ್ನು ಬೆದರಿಸಿದ್ದರು. ಮಿಚೆಲ್ ಬಲಿಷ್ಠ ಚೀನಾ ಬೆದರಿಕೆಗೆ ಭಯ ಪಡದೆ ತಮ್ಮ ಕರ್ತವ್ಯ ನಿಭಾಯಸಿದ್ದಾರೆ. 

ಲಡಾಖ್‌ನಲ್ಲಿ ಮತ್ತೆ ಚೀನಾ ಕಿರಿಕ್‌, ದನಗಾಹಿಗಳಿಗೇ ತಡೆ ಒಡ್ಡಿದ ಸೇನೆ!

ವರದಿ ಪ್ರಕಟಣೆಕೆ ಮಿಚೆಕ್ ಹುಡುಕಿದ ದಾರಿ ಏನ್ ಗೊತ್ತಾ?  ಚೀನಾ ಕ್ರೌರ್ಯದ ಬಗ್ಗೆ ಮೊದಲ ಬಾರಿ ಉಸಿರು ಬಿಟ್ಟ ವಿಶ್ವ ಸಂಸ್ಥೆ,  ಉಯಿಗರ್ ಮುಸ್ಲಿಮರಿಗೆ ಚೀನಾದಲ್ಲಿರೋ ನರಕ ಎಂಥದ್ದು? ಚೀನಾ ಮುಸ್ಲಿಮರ ಕಣ್ಣೀರು ಇದ್ದಕ್ಕಿದ್ದಂತೆ ವಿಶ್ವಸಂಸ್ಥೆಗೆ ನೆನಪಾಗಿದ್ದೇಕೆ? ಇಲ್ಲಿದೆ ಕಂಪ್ಲೀಟ್‌ ವರದಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್