ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶ ಭೇಟಿಗೆ ಹೂಂಕರಿಸಿದ ಡ್ರ್ಯಾಗನ್!

Published : Nov 16, 2019, 11:56 AM ISTUpdated : Nov 16, 2019, 11:57 AM IST
ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶ ಭೇಟಿಗೆ ಹೂಂಕರಿಸಿದ ಡ್ರ್ಯಾಗನ್!

ಸಾರಾಂಶ

ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್| ಮೈತ್ರಿ ದಿನದ ಅಂಗವಾಗಿ ತವಾಂಗ್‌ಗೆ ಭೇಟಿ ನೀಡಿದ ರಾಜನಾಥ್| ರಾಜನಾಥ್ ಅರುಣಾಚಲ ಭೇಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೀನಾ| ಭಾರತದ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದ ಚೀನಾ| ರಾಜನಾಥ್ ಭೇಟಿ ಖಂಡನೀಯ ಎಂದ ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್|

ಬಿಜಿಂಗ್(ನ.16): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಮೈತ್ರಿ ದಿನದ ಅಂಗವಾಗಿ ರಾಜನಾಥ್ ಸಿಂಗ್, ಚೀನಾ ಗಡಿ ಸಮೀಪದ ತವಾಂಗ್‌ಗೆ ಭೇಟಿ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ವಿವಾದಿತ ಪ್ರದೇಶದಲ್ಲಿ ಭಾರತದ ಚಟುವಟಿಕೆ ಖಂಡನಾರ್ಹ ಎಂದು ಕಿಡಿಕಾರಿದೆ. 

ನಿಜಕ್ಕೂ ವಿಶೇಷ: ಪ್ರವಾಸಿಗರಿಗೆ ಮುಕ್ತಗೊಂಡ ಸಿಯಾಚಿನ್ ನಿರ್ಗಲ್ಲು ಪ್ರದೇಶ!

ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ  ಭಾರತದ ನಡವಳಿಕೆಯನ್ನು ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ ಎಂದು ಚೀನಾ ವಿದೇಶಾಂಗ ವಕ್ತಾರ ಗೆಂಗ್ ಶುವಾಂಗ್ ಅಸಮಾಧಾನ ಹೊರಹಾಕಿದ್ದಾರೆ. 

ಭಾರತದ ಈಶಾನ್ಯ ರಾಜ್ಯಗಳ ಭಾಗವಾದ ಅರುಣಾಚಲ ಪ್ರದೇಶ, ದಕ್ಷಿಣ ಭಾಗದ ಟಿಬೆಟ್‌ನ ಭಾಗವೂ ಹೌದು. ಈ ಸಂಬಂಧ ಉಂಟಾಗಿರುವ ಗಡಿ ವಿವಾದದ ಬಗ್ಗೆ ಈವರೆಗೆ ಉಭಯ ದೇಶಗಳ ನಡುವೆ 21 ಸುತ್ತು ಮಾತುಕತೆಗಳು ನಡೆದಿದೆ. 

ಎರಡೂ ದೇಶಗಳ ನಡುವೆ ಸುಮಾರು 3488 ಕಿಮೀ ಉದ್ದದ ಗಡಿ ಭಾಗ ವಿವಾದದಲ್ಲಿದ್ದು, ಪ್ರಧಾನಿಯೂ ಸೇರಿದಂತೆ ಭಾರತದ ಯಾವುದೇ ನಾಯಕ ಅಥವಾ ಅಧಿಕಾರಿಗಳು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗ ಚೀನಾ ಕ್ಯಾತೆ ತೆಗೆಯುವುದು ಸಾಮಾನ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ