
China Viral Video: ಭ್ರಷ್ಟಾಚಾರದ ವಿಚಾರದಲ್ಲಿ ಚೀನಾ ವಿಶ್ವದಲ್ಲಿಯೇ ಅತ್ಯಂತ ಶೂನ್ಯ ಸಹಿಷ್ಣುತಾ ನೀತಿ ಹೊಂದಿದೆ. ಹಾಗಿದ್ದರೂ ಚೀನಾದಲ್ಲಿ ಭ್ರಷ್ಟಾಚಾರ ಇಲ್ಲ ಅನ್ನೋಹಾಗಿಲ್ಲ. ಅನೇಕ ಅಧಿಕಾರಿಗಳು ಹಾಗೂ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದ ಕಾರಣಕ್ಕಾಗಿ ದೀರ್ಘಕಾಲದ ಶಿಕ್ಷೆ ಎದುರಿಸುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ ಸರ್ಕಾರಕ್ಕೆ ಭ್ರಷ್ಟಾಚಾರವನ್ನು ನಿಭಾಯಿಸುವುದೇ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗೆ, ಚೀನಾದಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದ್ದು, ಮೇಯರ್ ಒಬ್ಬರ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ನಗದಿ ಹಾಗೂ ಚಿನ್ನ ಸಂಗ್ರಹಿಸಿ ಇಟ್ಟಿದ್ದಾರೆ. ಅವರು ಸಂಗ್ರಹಿಸಿರುವ ಚಿನ್ನ ಹಾಗೂ ನಗದಿನ ಪ್ರಮಾಣ ಕೆಜಿಗಳಲ್ಲಿ ಇಲ್ಲ, ಅವು ಟನ್‌ಗಳಲ್ಲಿದೆ.
ಜನವರಿ 3 ರಂದು ಈ ಘಟನೆ ವರದಿಯಾಗಿದ್ದು,ಬಹಳ ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಚೀನಾದ ತನಿಖಾ ತಂಡ ಭ್ರಷ್ಟಾಚಾರ ಆರೋಪದಲ್ಲಿ ಮೇಯರ್ ಒಬ್ಬರ ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ 13.5 ಟನ್ ಚಿನ್ನ ಹಾಗೂ 23 ಟನ್ ನಗದು ಪತ್ತೆಯಾಗಿದೆ. ನಗದಿನ ಪ್ರಮಾಣ ಎಷ್ಟು ಭಯಂಕರವಾಗಿತ್ತೆಂದರೆ, ಅದನ್ನು ಲೆಕ್ಕಹಾಕಲು ಸಾಧ್ಯವಾಗದೇ ತೂಕ ಮಾಡಿ ವಶಕ್ಕೆ ಪಡೆಯಲಾಗಿದೆ. ಅದರೊಂದಿಗೆ ಆತನ ಮನೆಯಲ್ಲಿ ಡಜನ್‌ಗಟ್ಟಲೆ ಐಷಾರಾಮಿ ವಾಹನಗಳು ಕಂಡುಬಂದಿದೆ. ಈತನ ಭ್ರಷ್ಟಾಚಾರ ಕಂಡು ಚೀನಾದ ನ್ಯಾಯಾಲಯ ಆತನಿಕೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಚೀನಾದ ಕಟ್ಟುನಿಟ್ಟಿನ ಭ್ರಷ್ಟಾಚಾರ ವಿರೋಧಿ ನೀತಿಗೆ ಇದು ಉದಾಹರಣೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆತನ ಭ್ರಷ್ಟಾಚಾರ ಹಾಗೂ ಚೀನಾ ತೆಗೆದುಕೊಂಡಿರುವ ಎರಡೂ ಕೂಡ ಅಚ್ಚರಿಗೆ ಕಾರಣವಾಗಿದೆ.
ಭ್ರಷ್ಟ ಮೇಯರ್‌ನ ಮನೆ ಶೋಧ ಕಾರ್ಯಕ್ಕೆ ತನಿಖಾ ತಂಡ ಆರಂಭಿಸಿದಾಗಲೇ ಅವರು ಅಚ್ಚರಿಪಟ್ಟಿದ್ದರು. ಮನೆಯ ರಹಸ್ಯ ನೆಲ ಮಾಳಿಗೆಯಲ್ಲಿ 13.5 ಟನ್ ತೂಕದ ಬೃಹತ್ ಪ್ರಮಾಣದ ಚಿನ್ನದ ಗಟ್ಟಿಯನ್ನು ತಂಡ ಪತ್ತೆ ಮಾಡಿದೆ. ಹೆಚ್ಚುವರಿಯಾಗಿ ಶತಕೋಟಿ ಡಾಲರ್ ಮೌಲ್ಯದ 23 ಟನ್ ನಗದು ಪತ್ತೆಯಾಗಿದೆ. ತನಿಖಾ ಅಧಿಕಾರಿಗಳ ಪ್ರಕಾರ, ಚೀನಾ ಮತ್ತು ವಿದೇಶಗಳಲ್ಲಿ ಭ್ರಷ್ಟ ಮೇಯರ್‌ನಿಂದ ದುಬಾರಿ ಹೋಟೆಲ್‌ಗಳು, ವಿಲ್ಲಾಗಳು ಮತ್ತು ದುಬಾರಿ ಕಾರುಗಳ ಸಮೂಹ ಸೇರಿದಂತೆ ಹಲವಾರು ಐಷಾರಾಮಿ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಸ್ತಿಗಳ ಒಟ್ಟು ಮೌಲ್ಯ ಶತಕೋಟಿ ಡಾಲರ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಇಡೀ ಪ್ರಕರಣವು ಹೈಕೌ (ಹೈಕೌ) ಮೇಯರ್ ಅವರನ್ನು ಒಳಗೊಂಡಿರುವುದಾಗಿ ವರದಿಯಾಗುತ್ತಿದೆ. ಕೆಲವು ಮಾಧ್ಯಮ ವರದಿಗಳು ಮೇಯರ್ ಅನ್ನು ಜಾಂಗ್ ಎಂದು ಗುರುತಿಸುತ್ತವೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಇದನ್ನು ದೃಢೀಕರಿಸುವುದಿಲ್ಲ.
ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಚೀನಾದಲ್ಲಿ ಭ್ರಷ್ಟಾಚಾರ ವಿರೋಧಿ ನಿಯಮಗಳು ಹೇಗಿವೆ ಅನ್ನೋದನ್ನು ಪ್ರಶ್ನೆ ಮಾಡಿದ್ದಾರೆ. ಕಠಿಣ ನಿಯಮಗಳು ಇದ್ದರೂ, ನಗರದ ಮೇಯರ್ ಒಬ್ಬರು ಇಷ್ಟು ಸಂಪತ್ತು ಸೃಷ್ಟಿ ಮಾಡಿದ್ದಾದರೂ ಹೇಗೆ ಎಂದು ಹೇಳಿದ್ದಾರೆ. ಚೀನಾದ ಮಾಧ್ಯಮ ವರದಿಗಳ ಪ್ರಕಾರ, ತನಿಖಾ ಸಂಸ್ಥೆಗಳು ಮೇಯರ್ ಸರ್ಕಾರಿ ಒಪ್ಪಂದಗಳು, ಭೂ ವ್ಯವಹಾರಗಳು ಮತ್ತು ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದ ಲಂಚದ ಮೂಲಕ ಅಕ್ರಮ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಕಂಡುಹಿಡಿದಿದೆ. ಅವರ 10 ವರ್ಷಗಳ ಅಧಿಕಾರಾವಧಿಯಲ್ಲಿ, ಮೇಯರ್ ಪ್ರತಿ ಕೆಲಸಕ್ಕೂ ಲಂಚ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಈ ಎಲ್ಲಾ ಹಣವನ್ನು ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಶೆಲ್ ಕಂಪನಿಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ. ಚೀನಾದ ನ್ಯಾಯಾಲಯವು ಮೇಯರ್ ಅವರನ್ನು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕ ನಿಧಿಯ ದುರುಪಯೋಗದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಮರಣದಂಡನೆ ವಿಧಿಸಿದೆ.
ಚೀನಾ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದೆ. ಈ ಪ್ರಕರಣದಲ್ಲಿ ಭ್ರಷ್ಟ ಮೇಯರ್‌ಗೆ ಮರಣದಂಡನೆ ವಿಧಿಸಿರುವುದೇ ಇದಕ್ಕೆ ಉದಾಹರಣೆ. ಈ ಹಿಂದೆ, ಚೀನಾದಲ್ಲಿ ಹಲವಾರು ಪ್ರಮುಖ ವ್ಯಕ್ತಿಗಳನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು ಮತ್ತು ಅನೇಕ ಪ್ರಕರಣಗಳಲ್ಲಿ ತನಿಖೆಗಳು ಇನ್ನೂ ನಡೆಯುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ