ಚೀನಾ: ಐದನೇ ಮಹಡಿಯಿಂದ ಬಿದ್ದ ಎರಡು ವರ್ಷದ ಕಂದಮ್ಮನನ್ನು ವ್ಯಕ್ತಿಯೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಕಟ್ಟಡದ 5ನೇ ಮಹಡಿಯೊಂದರಿಂದ ಕೆಳಗೆ ಬಿದ್ದ ಎರಡು ವರ್ಷದ ಬಾಲಕಿಯನ್ನು ಗಮನಿಸಿದ ಕೆಳಗಿದ್ದ ಯುವಕ ಹಾಗೂ ಯುವತಿ ಓಡಿ ಬಂದು ಕ್ಯಾಚ್ ಹಿಡಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕೆಳಗಿದ್ದ ಯುವಕ ಹಾಗೂ ಯುವತಿ ಮಗು ಕಟ್ಟಡದ ಮೇಲಿನಿಂದ ಜಾರಿ ಬಿದ್ದಿದ್ದನ್ನು ಗಮನಿಸಿ ಕೆಳಗೋಡಿ ಬಂದು ರಕ್ಷಿಸಿದ್ದಾರೆ.
ಯುವಕನ ಈ ಸಾಹಸದ ಕಾರ್ಯವನ್ನು ಯಾರೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಪೂರ್ವ ಚೀನಾದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಮೊದಲಿಗೆ ಚೀನಾ ಸಾಮಾಜಿಕ ಜಾಲತಾಣ ವೈಬೊದಲ್ಲಿ ಪೋಸ್ಟ್ ಮಾಡಲಾಗಿತ್ತು. ನಂತರ ಅದನ್ನು ಬೇರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಚೀನಾದ ವಿದೇಶಾಂಗ ಸಚಿವಾಲಯದ ಮಾಹಿತಿ ವಿಭಾಗದ ವಕ್ತಾರ ಲಿಜಿಯನ್ ಜಾಹೋ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮೊಳಗೆ ಇರುವ ಹೀರೋಗಳು ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 7,700ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಇನ್ನು ಮಗುವನ್ನು ರಕ್ಷಿಸಿದ ಯುವಕನನ್ನು ಶೇನ್ ಡಾಂಗ್ ಎಂದು ಗುರುತಿಸಲಾಗಿದೆ. ಬಾಲ್ಕನಿಗೆ ಅಳವಡಿಸಿದ ಸ್ಟೀಲ್ ರಾಡೊಂದು ಜಾರಿದ ಪರಿಣಾಮ ಬಾಲಕಿ ಕೆಳಗೆ ಜಾರಿ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ. ಫೋನ್‌ನಲ್ಲಿ ಮಾತನಾಡುತ್ತಿದ್ದ ಯುವಕ ಹಾಗೂ ಮತ್ತೊರ್ವ ಯುವತಿಗೆ ಮಗು ಕಟ್ಟಡದಿಂದ ಆಯತಪ್ಪಿ ಕೆಳಗೆ ಬೀಳುತ್ತಿರುವುದು ಕಾಣಿಸಿದೆ. ಕೂಡಲೇ ಅವರಿಬ್ಬರು ಓಡೋಡಿ ಬಂದು ಮಗುವನ್ನು ರಕ್ಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ