'2 ನೇ ಮಹಾಯುದ್ಧ ಸಮಯದಲ್ಲಿ ಯುದ್ಧ ಸಾಮಗ್ರಿಗಳನ್ನು ನೋಡಿಕೊಳ್ಳುತ್ತಿದ್ದೆ'

Published : Sep 02, 2020, 06:03 PM ISTUpdated : Sep 02, 2020, 06:07 PM IST
'2 ನೇ ಮಹಾಯುದ್ಧ ಸಮಯದಲ್ಲಿ ಯುದ್ಧ ಸಾಮಗ್ರಿಗಳನ್ನು ನೋಡಿಕೊಳ್ಳುತ್ತಿದ್ದೆ'

ಸಾರಾಂಶ

ಇಡೀ ಮನುಕುಲವನ್ನೇ ನಡುಗಿಸಿದ, ಸುಮಾರು 8 ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು ಇಂದಿಗೆ 75 ವರ್ಷ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಹಿನ್ನೆಲೆ, ಪರಿಣಾಮ ಹಾಗೂ 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕರ್ನಾಟಕದ ಯೋಧರ ನೆನಪುಗಳ ಮೆಲುಕು ಇಲ್ಲಿದೆ.

ಇಡೀ ಮನುಕುಲವನ್ನೇ ನಡುಗಿಸಿದ, ಸುಮಾರು 8 ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು ಇಂದಿಗೆ 75 ವರ್ಷ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಹಿನ್ನೆಲೆ, ಪರಿಣಾಮ ಹಾಗೂ 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕರ್ನಾಟಕದ ಯೋಧರ ನೆನಪುಗಳ ಮೆಲುಕು ಇಲ್ಲಿದೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ನಾಗಪುರದಲ್ಲಿ ಬೆಟ್ಟಏರುವ ವೇಳೆ ನನ್ನ ಕಾಲಿಗೆ ಗಾಯವಾದ ಕಾರಣ ನನ್ನನ್ನು ಸೇನೆಯ ಸಾಮಗ್ರಿಗಳನ್ನು ನೋಡಿಕೊಳ್ಳಲು ನಿಯೋಜಿಸಿದ್ದರು. ಮಹಾಯುದ್ಧದಲ್ಲಿ ಯುದ್ಧ ಸಾಮಗ್ರಿಗಳ ಕೊರತೆ ಇತ್ತು, ಸೈನಿಕರ ಕೊರತೆ ಇತ್ತು. ಹಾಗಾಗಿ ತುಂಬಾ ಕಷ್ಟಪಟ್ಟು ಹೆಚ್ಚಿನ ನೋವು ತಿಂದು ಬಂದೆವು. ಆದರೂ ನಾವು ಎಲ್ಲ ಒಗಟ್ಟಿನಿಂದ ಹೋರಾಡಿ ಜಯ ಗಳಿಸಿದೆವು.

'2 ನೇ ಮಹಾಯುದ್ಧದಲ್ಲಿ ಎಚ್ಚರ ತಪ್ಪಿದ್ರೆ ಜರ್ಮನಿ ದಾಳಿಗೆ ಬಲಿಯಾಗ್ತಿದ್ದೆವು'

ಕಣ್ಣ ಮುಂದೇ ಪ್ರಾಣ ಬಿಟ್ಟರು

ನನ್ನ ಊರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಂಗಯ್ಯನಪುರ. ಜೂನ್‌ 10, 1917ರಂದು ಜನಿಸಿದ ನನಗೆ ಸೇನೆಯನ್ನು ಸೇರುವುದು ಅತಿ ದೊಡ್ಡ ಆಸೆಯಾಗಿತ್ತು. ಸೇನಾ ನೇಮಕಾತಿಯೊಂದಲ್ಲಿ ಭಾಗವಹಿಸಿ ಸೇನೆಗೂ ಆಯ್ಕೆಯಾಗಿ, ಜ.21, 1948ರ ವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದೆ. ಹೀಗಾಗಿ ಎರಡನೇ ಮಹಾಯುದ್ಧ ನಡೆದ ಸಮಯದಲ್ಲೂ ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೆ. ಯುದ್ಧಕ್ಕೆ ಹೋಗುವ ಸಂದರ್ಭ ನಾಗಪುರಲ್ಲಿ ಬೆಟ್ಟಗುಡ್ಡ ಹತ್ತಿ ಇಳಿದು ಬರುವಾಗ ನನ್ನ ಕಾಲಿಗೆ ಗಾಯ ಆಗಿತ್ತು.

ಇದರಿಂದ ನನ್ನನ್ನು ಸೇನಾ ಸಾಮಗ್ರಿಗಳನ್ನು ನೋಡಿಕೊಳ್ಳಲು ನಿಯೋಜಿಸಿದ್ದರು. ನನ್ನ ಜೊತೆಗೆ ಇನ್ನೂ ಹಲವು ಗಾಯಾಳುಗಳು ಇದ್ದರು. ಆದಕಾರಣ ಯುದ್ಧ ಮಾಡುವ ಸಮಯದಲ್ಲಿ ನನಗೆ ಬಂದೂಕು ಹಿಡಿದು ಹೋರಾಡುವ ಅವಕಾಶ ಸಿಗಲಿಲ್ಲ. ಯುದ್ಧದ ಸಮಯದಲ್ಲಿ ನನ್ನ ಜೊತೆ ತರಬೇತಿ ಪಡೆದು ಸೇವೆ ಸಲ್ಲಿಸಿದ್ದ ಅನೇಕರು ನನ್ನ ಕಣ್ಣ ಮುಂದೆಯೇ ಮರಣ ಹೊಂದಿದರು.

ನನ್ನ ಯೂನಿಟ್‌ನಲ್ಲಿ ಕೇವಲ 4 ಜನ ಯುದ್ಧದಲ್ಲಿ ಬದುಕುಳಿದು ವಾಪಸ್‌ ಬಂದೆವು. ಯುದ್ಧದ ಸಮಯದಲ್ಲಿ ನಾನು ಸೇನೆಯಲ್ಲಿ ಯುವಕರಿಗೆ ದೈಹಿಕ ತರಬೇತಿ ನೀಡುತ್ತಿದ್ದೆ. ಸೇನೆಯಲ್ಲಿನ ಸೇವೆಗಾಗಿ ನನಗೆ ಇಂಡಿಯನ್‌ ಸವೀರ್‍ಸ್‌ ಮೆಡಲ್‌ ಮತ್ತು ವಾರ್‌ ಮೆಡಲ್‌ ಸಹ ಲಭಿಸಿವೆ. ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅವರಿಗೆ ಐದು ಎಕರೆ ಜಮೀನು ನೀಡಲಾಗಿದೆ.

- ಯಲದಾಳು ತಿಮ್ಮಯ್ಯ, ನಿವೃತ್ತ ಸೇನಾ ಹವಾಲ್ದಾರ್‌

ನಿರೂಪಣೆ: ವಿಘ್ನೇಶ್ ಎಂ ಭೂತನಕಾಡು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ