
ವಾಷಿಂಗ್ಟನ್(ಮೇ.18): 132 ಜನರನ್ನು ಬಲಿ ಪಡೆದ ಚೀನಾ ವಿಮಾನ ದುರಂತ ಉದ್ದೇಶಪೂರ್ವಕವಾಗಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸ್ಫೋಟ ಸ್ಥಳದಲ್ಲಿ ಸಿಕ್ಕಿದ ಬ್ಲ್ಯಾಕ್ ಬಾಕ್ಸ್‌ನಲ್ಲಿ ಈ ಮಾಹಿತಿ ಪತ್ತೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿದೆ.
ಕಳೆದ ಮಾಚ್‌ರ್‍ನಲ್ಲಿ ಚೀನಾದ ಈಸ್ಟ್ರನ್ ಜೆಟ್ ಕಂಪನಿಗೆ ಸೇರಿದ ವಿಮಾನ ಕುನ್ಮಿಂಗ್‌ನಿಂದ ಗ್ವಾಂಗ್‌ಝೌಗೆ ಪ್ರಯಾಣಿಸುವ ವೇಳೆ ಏಕಾಏಕಿ ರಾಕೆಟ್‌ನಂತೆ ಕೆಳಗೆ ಪತನಗೊಂಡು ಬಿದ್ದು, ಅದರಲ್ಲಿದ್ದ 132 ಜನರು ಸಾವನ್ನಪ್ಪಿದ್ದರು. ಈ ವೇಳೆ ಪೈಲಟ್ ತಪ್ಪಿನಿಂದಾಗಿ ಅಥವಾ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನಗೊಳಿಸಿರಬಹುದು ಎಂಬ ವಾದಗಳು ಕೇಳಿಬಂದಿದ್ದವು. ಅದಕ್ಕೆ ಪೂರಕವೆಂಬಂತೆ ಇದೀಗ ಅಮೆರಿಕದ ತಜ್ಞರ ವರದಿಯಲ್ಲಿ, ವಿಮಾನಪತನ ಉದ್ದೇಸಪೂರ್ವಕವಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ನೆಲಕ್ಕಪ್ಪಳಿಸಿದ ಚೀನಾ ವಿಮಾನದ ಒಬ್ಬ ಪ್ರಯಾಣಿಕನೂ ಪತ್ತೆ ಇಲ್ಲ!
ಈ ವಿಮಾನ ಕಳೆದ 28 ವರ್ಷಗಳಲ್ಲೇ ಚೀನಾ ಕಂಡ ಅತ್ಯಂತ ಭೀಕರ ವಿಮಾನ ದುರಂತವಾಗಿತ್ತು
.
ಚೀನಾ ವಿಮಾನ ಪತನದಿಂದ 65 ಅಡಿ ಗುಂಡಿ: 49000 ತುಣುಕು ಪತ್ತೆ
132 ಜನರನ್ನು ಬಲಿ ಪಡೆದಿದ್ದ ಚೀನಾದ ಈಸ್ರ್ಟನ್ ಬೋಯಿಂಗ್ ವಿಮಾನ ಪತನಗೊಂಡ ರಭಸಕ್ಕೆ ಸ್ಥಳದಲ್ಲಿ 65 ಅಡಿ ಆಳದಷ್ಟುಕಂದಕ ನಿರ್ಮಾಣವಾಗಿತ್ತು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
29000 ಅಡಿಗಳ ಎತ್ತರದಿಂದ ವಿಮಾನ ಅಪ್ಪಳಿಸಿದ ಕಾರಣ, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ವಿಮಾನದ ಅವಶೇಷಗಳ ಪತ್ತೆಗಾಗಿ 10 ದಿನಗಳ ಕಾಲ ಶ್ರಮಿಸಲಾಗಿದೆ. ಇದಕ್ಕಾಗಿ ಘಟನಾ ಸ್ಥಳದಿಂದ 22000 ಕ್ಯುಬಿಕ್ ಮೀಟರ್‌ನಷ್ಟುಮಣ್ಣನ್ನು ತೆಗೆದು, ಹುಡಕಾಟ ನಡೆಸಲಾಗಿದೆ. ಈ ವೇಳೆ ಛಿದ್ರಗೊಂಡಿದ್ದ ವಿಮಾನದ 49000 ತುಣುಕುಗಳು ಪತ್ತೆಯಾಗಿದೆ.
ವರ್ಷದ ಬಳಿಕ ಬಯಲಾಯ್ತು ಕಲ್ಲಿಕೋಟೆ ವಿಮಾನ ದುರಂತದ ಹಿಂದಿನ ಕಾರಣ!
ವಿಮಾನದ ಎರಡು ಕಪ್ಪು ಪೆಟ್ಟಿಗೆಗಳಾದ ಜೊತೆಗೆ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ ಪಿಟ್ ಧ್ವನಿ ರೆಕಾರ್ಡರ್ ಅನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದೆ. 30 ದಿನಗಳಲ್ಲಿ ಪ್ರಾಥಮಿಕ ವರದಿಗಳು ಬರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಬ್ಧದಷ್ಟೇ ವೇಗದಲ್ಲಿ ಸಾಗುತ್ತಿತ್ತು ಅಪಘಾತವಾದ ಚೀನಾ ವಿಮಾನ
ಅಪಘಾತದಲ್ಲಿ 132 ಜನರನ್ನು ಬಲಿ ಪಡೆದ ಚೀನಾ ವಿಮಾನ ಗಂಟೆಗೆ 966 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಸಾಗುತಿತ್ತು. ಅಂದರೆ ಹೆಚ್ಚು ಕಡಿಮೆ ಶಬ್ಧದ ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವಿಮಾನಗಳ ಸಂಚಾರದ ಮೇಲೆ ನಿಗಾ ಇಡುವ ಫ್ಲೈಟ್‌ರಾಡಾರ್ 24ದ ಅಂಕಿ ಅಂಶಗಳು ಹೇಳಿವೆ. ಶಬ್ದ ಗಂಟೆಗೆ 761 ಮೈಲು ವೇಗದಲ್ಲಿ ಸಂಚರಿಸುತ್ತದೆ. ಅಪಘಾತವಾದ ವಿಮಾನ ಕೂಡ ಗಂಟೆಗೆ 640- 700 ಮೈಲು ವೇಗದಲ್ಲಿ ಸಂಚರಿಸಿದ್ದು ದಾಖಲಾಗಿದೆ ಎಂದು ಸಂಸ್ಥೆ ಹೇಳಿದೆ.
ಪಣಿಯಂತೆ ನೆಲಕ್ಕೆ ಅಪ್ಪಳಿಸಿದ ವಿಮಾನ
132 ಜನರ ಸಾವಿಗೆ ಕಾರಣವಾಗಿದೆ ಎಂದು ಶಂಕಿಸಲಾದ ಚೀನಾ ವಿಮಾನ ಅಪಘಾತದ ಕೊನೆಯ ಹಂತದ ದೃಶ್ಯಗಳು ಸಮೀಪದ ಗಣಿಯೊಂದರ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ಅನ್ವಯ ವಿಮಾನವು 20000 ಅಡಿಗಳ ಎತ್ತರದಿಂದ ಏಕಾಏಕಿ ಕುಸಿದು ಕ್ಷಿಪಣಿ ರೀತಿಯಲ್ಲಿ ನೆಲಕ್ಕೆ ಅಪ್ಪಳಿಸಿದೆ. ಈ ಕಾರಣದಿಂದಾಗಿಯೇ ವಿಮಾನ ಪತನಗೊಂಡ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿಯ ಅಲೆ ಎದ್ದಿವೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ