ತಲೆ ತಿರುಗಿ ರೈಲಡಿ ಬಿದ್ದ ಮಹಿಳೆ ಪವಾಡಸದೃಶ ಪಾರು

Published : Apr 20, 2022, 05:03 PM IST
ತಲೆ ತಿರುಗಿ ರೈಲಡಿ ಬಿದ್ದ ಮಹಿಳೆ ಪವಾಡಸದೃಶ ಪಾರು

ಸಾರಾಂಶ

ಮೂರ್ಛೆ ತಪ್ಪಿ ರೈಲಿನ ಕೆಳಗೆ ಬಿದ್ದ ಮಹಿಳೆ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್  

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಮೂರ್ಛೆ ತಪ್ಪಿ ರೈಲಿನ ಕೆಳಗೆ ಬಿದ್ದರು ಸುರಕ್ಷಿತವಾಗಿ ಪಾರಾದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲು ಬೋಗಿಗಳ ನಡುವೆ ಮಹಿಳೆ ಕಣ್ಮರೆಯಾಗುತ್ತಿರುವ ದೃಶ್ಯವನ್ನು ನೋಡಿ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದಾರೆ. ಪವಾಡ ಸದೃಶ ಘಟನೆಯೊಂದರಲ್ಲಿ ಅರ್ಜೆಂಟೀನಾದ ( Argentina) ಬ್ಯೂನಸ್ ಐರಿಸ್ ನಲ್ಲಿ ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಮಹಿಳೆಯೊಬ್ಬರು ಬದುಕುಳಿದಿದ್ದಾರೆ. ಮಾರ್ಚ್ 29 ರಂದು ಈ ಘಟನೆ ನಡೆದಿದ್ದು, ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು  ಸೆರೆಯಾಗಿವೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಕ್ಯಾಂಡೆಲಾ ಎಂಬ ಮಹಿಳೆಯು  ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೇಲೆ ನಿಂತಿದ್ದಾಗ ಪ್ರಜ್ಞೆ ತಪ್ಪಿದ್ದು ವಾಲುತ್ತಾ ವಾಲುತ್ತಾ ಆಕೆ ಎಡವಿ ಪ್ಲಾಟ್‌ಫಾರ್ಮ್‌ ಹಾಗೂ ರೈಲಿನ ಮಧ್ಯೆ ಬೀಳುತ್ತಾಳೆ. ರೈಲು ಬೋಗಿಗಳ ನಡುವೆ ಮಹಿಳೆ ಕಣ್ಮರೆಯಾಗುತ್ತಿದ್ದಂತೆ ಘಟನೆಯನ್ನು ಕಂಡ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು ಸಂಪೂರ್ಣವಾಗಿ ದಿಗ್ಭ್ರಮೆಗೊಂಡರು. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ನಿಲ್ದಾಣದಲ್ಲಿ ನಿಂತಿದ್ದ ಇತರ ಪ್ರಯಾಣಿಕರು ಮಹಿಳೆಯನ್ನು ಸುರಕ್ಷಿತವಾಗಿ ಮೇಲೆಳೆದಿದ್ದಾರೆ. ನಂತರ ಆಕೆಯನ್ನು ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿಸಿದ್ದಾರೆ. ಬಳಿಕ ಅವಳನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ದು ಆಸ್ಪತ್ರೆಗೆ ಕರೆದೊಯ್ಯಲು ಹೊರಗೆ ಕಾಯುತ್ತಿದ್ದ ಆಂಬ್ಯುಲೆನ್ಸ್‌ಗೆ ಕರೆದುಕೊಂಡು ಬಂದು ಮಲಗಿಸಿದ್ದಾರೆ. ಕೂಡಲೇ ಆಕೆಯನ್ನು ಬ್ಯೂನಸ್ ಐರಿಸ್ (Buenos Aires) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಅರ್ಜೆಂಟೀನಾದ ಟೆಲಿವಿಷನ್ ಚಾನೆಲ್‌ನೊಂದಿಗೆ ಮಾತನಾಡಿದ ಈ ಬದುಕುಳಿದ ಮಹಿಳೆ, ತಾನು ಹೇಗೆ ಬದುಕುಳಿದೆ ಎಂದು ತಿಳಿದಿಲ್ಲವಾದ್ದರಿಂದ ಘಟನೆಯ ಸಂದರ್ಭ ಏನಾಯಿತು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ನಾನು ಇನ್ನೂ ಹೇಗೆ ಬದುಕಿದ್ದೇನೆ ಎಂದು ನನಗೆ ತಿಳಿದಿಲ್ಲ. ನಾನು ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದರು. ಅಪಘಾತದಿಂದ ಬದುಕುಳಿದ ನಂತರ ತಾನು ಮರುಜನ್ಮ ಪಡೆದಿದ್ದೇನೆ ಎಂದು ಕ್ಯಾಂಡೆಲಾ (Candela) ಹೇಳಿದರು. ನಾನು ರಕ್ತದೊತ್ತಡದಲ್ಲಿ ಹಠಾತ್ ಕುಸಿತವನ್ನು ಅನುಭವಿಸಿದೆ ಮತ್ತು ಮೂರ್ಛೆ ಹೋದೆ. ನಾನು ನನ್ನ ಎದುರಿಗಿದ್ದ ವ್ಯಕ್ತಿಯನ್ನು ಎಚ್ಚರಿಸಲು ಪ್ರಯತ್ನಿಸಿದೆ ಆದರೆ ನಾನು ರೈಲಿಗೆ ಡಿಕ್ಕಿ ಹೊಡೆದ ಕ್ಷಣದ ಹೊರತಾಗಿ ಬೇರೇನೂ ನೆನಪಿಲ್ಲ ಎಂದು ಅವರು ಹೇಳಿದ್ದನ್ನು ಉಲ್ಲೇಖಿಸಿ ದೂರದರ್ಶನ ಚಾನೆಲ್‌ ವರದಿ ಮಾಡಿದೆ.

Viral Video ಟ್ರ್ಯಾಕ್ ನ ಮಧ್ಯೆ ಮಲಗಿದ್ದ ಮಹಿಳೆಯ ಮೇಲೆ ಹಾದು ಹೋದ ರೈಲು, ಆಕೆಯ ಪ್ರತಿಕ್ರಿಯೆ ಕಂಡು ನೆಟಿಜನ್ಸ್ ಗಳ ಅಚ್ಚರಿ!  

ಕೆಲ ದಿನಗಳ ಹಿಂದಷ್ಟೇ ಟ್ರ್ಯಾಕ್  ಮಧ್ಯದಲ್ಲಿ ಫೋನ್ ನಲ್ಲಿ ಮಾತನಾಡುತ್ತಾ ಮಲಗಿರುವ ಮಹಿಳೆಯ (Women) ಮೇಲೆ ಸರಕು ರೈಲು (Goods Train) ಹಾದು ಹೋಗುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಖಬ್ರಾ (PS officer Dipanshu Kabra ), ಏಪ್ರಿಲ್ 12 ರಂದು ಟ್ವೀಟ್ ಮಾಡಿದ್ದಾರೆ. ಈವರೆಗೂ ಈ ವಿಡಿಯೋಗೆ 1 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ 3500ಕ್ಕೂ ಅಧಿಕ ಲೈಕ್ಸ್ ಸಿಕ್ಕಿವೆ.

ಆತ್ಮಹತ್ಯೆಗೆ ಯತ್ನಿಸಿ ಹಳಿಗೆ ಹಾರಿದ ಯುವಕ: ಕ್ಷಣದಲ್ಲಿ ಕಾಪಾಡಿದ ರೈಲ್ವೆ ಪೊಲೀಸ್
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಣ್ಣನ ಮಗನನ್ನೇ ಅಳಿಯ ಮಾಡಿಕೊಂಡ ಪಾಕ್‌ ಆರ್ಮಿ ಚೀಫ್‌ ಆಸೀಮ್‌ ಮುನೀರ್‌, ಸೇನಾ ಕಚೇರಿಯಲ್ಲೇ ಮದುವೆ!
ಭಾರತ-ಪಾಕ್ ಯುದ್ಧ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವು: ಚೀನಾ!